ಕಾಠ್ಮಂಡು:ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ನೇಪಾಳದಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ನಲ್ಲಿ ಬಹುಮತ ಕಳೆದುಕೊಂಡಿದೆ.
ಪ್ರಚಂಡ ಎಂದೇ ಪ್ರಸಿದ್ಧರಾದ ಪುಷ್ಪಕುಮಾಲ್ ದಹಾಲ್ ನೇತೃತ್ವದ ಸಿಪಿಎನ್ (ಮಾವೋಯಿಸ್ಟ್ ಸೆಂಟರ್) ಬುಧವಾರ ತನ್ನ ಬೆಂಬಲವನ್ನು ಹಿಂಪಡೆದ ಕಾರಣ ಓಲಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಪಾರ್ಲಿಮೆಂಟ್ ಸೆಕ್ರೆಟೇರಿಯೆಟ್​ಗೆ ಈ ಸಂಬಂಧ ಪತ್ರವನ್ನು ಪಕ್ಷದ ಚೀಫ್ ವಿಪ್ ದೇವ್ ಗುರಂಗ್ ಅವರು ಹಸ್ತಾಂತರಿಸಿದ್ದು, ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದಿರುವುದಾಗಿ ಪಕ್ಷದ ಹಿರಿಯ ನಾಯಕ ಗಣೇಶ್ ಶಾ ತಿಳಿಸಿದ್ದಾರೆ.
ಓಲಿ ಸರ್ಕಾರ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸಿದೆ. ಸರ್ಕಾರದ ಇತ್ತೀಚಿನ ನಡವಳಿಕೆ ಮತ್ತು ಚಟುವಟಿಕೆಗಳು ದೇಶದ ಸಾರ್ವಭೌಮತೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಧಕ್ಕೆ ತರುವಂಥದ್ದಾದ ಕಾರಣ ಮಾವೋಯಿಸ್ಟ್ ಸೆಂಟರ್ ಈ ತೀರ್ಮಾನ ತೆಗೆದುಕೊಂಢಿದೆ ಎಂದು ಗುರಂಗ್ ಹೇಳಿದ್ದಾರೆ. ಮೇ 10ರಂದು ವಿಶ್ವಾಸಮತ ಯಾಚಿಸುವುದಾಗಿ ಓಲಿ ಘೋಷಿಸಿದ ಬೆನ್ನಿಗೆ ಈ ಬೆಳವಣಿಗೆ ಆಗಿದೆ. ಸಂಸತ್​ನ ಕೆಳಮನೆಯಲ್ಲಿ ಮಾವೋಯಿಸ್ಟ್ ಸೆಂಟರ್​ಗೆ 49 ಸದಸ್ಯ ಬಲವಿದೆ. ಸಿಪಿಎನ್-ಯುಎಂಎಲ್ ಮೈತ್ರಿಯ ಬಲ 121. ಕೆಳಮನೆಯ 275 ಸದಸ್ಯ ಬಲದ ಪೈಕಿ ಒಲಿಗೆ ಸರ್ಕಾರ ಬಚಾವ್ ಮಾಡಲು 15 ಸದಸ್ಯಬಲದ ಕೊರತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
