ಕಟ್ಮಂಡು:ಕಳೆದ ತಿಂಗಳು ನೇಪಾಳದ ರೆಸಾರ್ಟ್​ ಒಂದರಲ್ಲಿ ಗ್ಯಾಸ್​ ಸೋರಿಕೆಯಿಂದಾಗಿ ಎಂಟು ಜನ ಭಾರತೀಯ ಪ್ರವಾಸಿಗಳು ಮೃತರಾದ ಹಿನ್ನೆಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್​ನ ಪರವಾನಗಿಯನ್ನು ಮೂರು ತಿಂಗಳ ಮಟ್ಟಿಗೆ ರದ್ದು ಗೊಳಿಸಿದೆ. ಮೂರು ತಿಂಗಳ ನಂತರ ಅಗತ್ಯ ಸುರಕ್ಷಾ ಕ್ರಮಗಳು ರೆಸಾರ್ಟ್​ನಲ್ಲಿದ್ದರೆ ಮಾತ್ರವೇ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ.
ಜನವರಿ ತಿಂಗಳ 21 ನೇ ತಾರೀಖಿನಂದು ಕೇರಳದಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ 15 ಜನರ ಗುಂಪು ನೇಪಾಳದ ಮಕ್ವಾನ್ಪುರ ಜಿಲ್ಲೆಯಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್​ ಒಂದರಲ್ಲಿ ರೂಂ ಮಾಡಿಕೊಂಡು ತಂಗಿತ್ತು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿದ್ದ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರಿಗೆ ಉಸಿರು ಕಟ್ಟಲು ಆರಂಭಿಸಿತ್ತು. ತಕ್ಷಣವೇ ಅವರನ್ನು ಎಚ್​ಎಎಮ್​ಎಸ್​ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮಾರ್ಗ ಮಧ್ಯವೇ ಮೃತ ಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದರು. ಪ್ರವಾಸಿಗರಿಗೆ ಉಸಿರು ಕಟ್ಟಲು ರೂಮಿನಲ್ಲಿದ್ದ ಹೀಟರ್​ನಿಂದ ಅನಿಲ ಸೋರಿಕೆಯಾಗಿದ್ದೇ ಕಾರಣ ಎನ್ನಲಾಗಿತ್ತು.
ಪ್ರವಾಸಿಗರ ದೂರಿನ ಆಧಾರದ ಮೇರೆಗೆ ರೆಸಾರ್ಟ್​ನ ಪರಿಶೀಲನೆಗೆಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸುರೇಂದ್ರ ಥಾಪಾ ಅವತ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ವಿಮಾನಯಾನ ಸಚಿವರುಗಳು ಇದ್ದ ಆ ಸಮಿತಿಯು ರೆಸಾರ್ಟ್​ನ ಪರಿಶೀಲನೆ ನಡೆಸಿ, ಅದರಲ್ಲಿರುವ ನ್ಯೂನ್ಯತೆಗಳನ್ನು ಸೂಚಿಸುವಂತಹ ವರದಿಯೊಂದನ್ನು ತಯಾರಿಸಿತ್ತು. ಆ ವರದಿಯ ಆಧಾರದ ಮೇಲೆ ನೇಪಾಳದ ಪ್ರವಾಸೋದ್ಯಮ ಇಲಾಖೆಯು ರೆಸಾರ್ಟ್​ನ ಪರವಾನಗಿಯನ್ನು ರದ್ದು ಮಾಡಿದೆ.
ಡಿಟಿಒ ನಿಗದಿ ಪಡಿಸಿರುವ ಮಾನದಂಡಗಳನ್ನು ರೆಸಾರ್ಟ್​ ಪಾಲಿಸುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೀಗ ಪ್ರವಾಸೋದ್ಯಮ ಕಾಯ್ದೆ – 1979ರ ಸೆಕ್ಷನ್​ 15ರ ಪ್ರಕಾರ ರೆಸಾರ್ಟ್​ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಮೂರು ತಿಂಗಳ ಒಳಗಾಗಿ ರೆಸಾರ್ಟ್​ ಎಲ್ಲ ಮಾನದಂಡಗಳನ್ನು ಪಾಲಿಸಿದ್ದಾದಲ್ಲಿ ಮಾತ್ರವೇ ಅದಕ್ಕೆ ಪರವಾನಗಿಯನ್ನು ವಾಪಾಸು ನೀಡುವುದಾಗಿ ತಿಳಿಸಲಾಗಿದೆ. ತಪ್ಪಿನ ಅರಿವಾಗಿದೆ ಎಂದಿರುವ ರೆಸಾರ್ಟ್​ನ ಮಾಲೀಕರು ಮೂರು ತಿಂಗಳ ಒಳಗಾಗಿ ತಪ್ಪನ್ನು ತಿದ್ದಿಕೊಂಡು ಅಗತ್ಯ ಸುರಕ್ಷತೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
