ಕಾಠ್ಮಂಡು:ಭಾರತೀಯ ಪ್ರದೇಶಗಳನ್ನು ಒಳಗೊಂಡಂತೆ ಸಂಸತ್​ನ ಕೆಳಮನೆಯಲ್ಲಿ ಪರಿಷ್ಕೃತ ನಕ್ಷೆಗೆ ಅನುಮೋದನೆ ಪಡೆದಿರುವ ನೇಪಾಳ, ಮೇಲ್ಮನೆಯಲ್ಲೂ ಅನುಮೋದನೆ ಪಡೆದುಕೊಳ್ಳುವ ತರಾತುರಿ ತೋರುತ್ತಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟ ತಾರಕಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ.
ಇದೇ ವೇಳೆ, ಇದೀಗ ತನ್ನದು ಎಂದು ಸೇರಿಸಿಕೊಂಡಿರುವ ವಿವಾದಾತ್ಮಕ ಪ್ರದೇಶಗಳಾದ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ಸೇರಿ ಗಡಿಭಾಗದಲ್ಲಿರುವ ತನ್ನ ಗಡಿ ಹೊರಠಾಣೆಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಟ್ಟಿದೆ. ಇದಕ್ಕೆ ಪೂರಕವಾಗಿ ಹಾಲಿ ಇರುವ 121 ಗಡಿ ಹೊರಠಾಣೆಗಳಿಗೆ ಹೊಸದಾಗಿ 100 ಹೊರಠಾಣೆಗಳನ್ನು ಸ್ಥಾಪಿಸಲು ಅದು ಮುಂದಾಗಿದೆ.
ಇದನ್ನೂ ಓದಿ:ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ವಿರುದ್ಧ ಅಜ್ಜಿ ಕಥೆ ಕಟ್ಟಿದ ಪಾಕಿಸ್ತಾನ
ಈ ವಿಷಯವನ್ನು ಖಚಿತಪಡಿಸಿರುವ ನೇಪಾಳದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ವಕ್ತಾರ ಕೇದಾರನಾಥ್​ ಶರ್ಮ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಗಡಿಯುದ್ದಕ್ಕೂ ಹೊಸದಾಗಿ 100 ಗಡಿ ಹೊರಠಾಣೆಗಳನ್ನು ನಿರ್ಮಿಸುವ ಮೂಲಕ ಗಡಿ ಹೊರಠಾಣೆಗಳ ಸಂಖ್ಯೆಯನ್ನು 221ಕ್ಕೆ ಹೆಚ್ಚಿಸಲಾಗುತ್ತಿದೆ. ಆದರೆ, ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ-ನೇಪಾಳ ಗಡಿ ವಿಭಾಗದ ಭದ್ರತೆಗಾಗಿ ನಿಯೋಜನೆಗೊಂಡಿರುವ ನೇಪಾಳದ ಸಶಸ್ತ್ರ ಪೊಲೀಸ್​ ಪಡೆ (ಎಪಿಎಫ್​) ಅಧಿಕಾರಿಗಳು ಹೊಸದಾಗಿ 100 ಗಡಿ ಹೊರಠಾಣೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಇವುಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ ಎಂದು ಹೇಳಿದ್ದಾರೆ.
ಸುಶಾಂತ್​ ಸಿಂಗ್​ ರಜಪೂತ್​ ಪಾಲಿಗೆ ವೃತ್ತಿವೈಷಮ್ಯ ಆಯಿತೇ ಉರುಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
