ನವದೆಹಲಿ:ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿದ ಆರೋಪದ ಮೇಲೆ ನೇಪಾಳಿ ಸಂಸದರೊಬ್ಬರನ್ನು ಗುರುವಾರ ಬಂಧಿಸಲಾಗಿದೆ. ನೇಪಾಳದ ಕಾಂಗ್ರೆಸ್ ಸಂಸದ ಸುನಿಲ್ ಕುಮಾರ್ ಶರ್ಮಾ ಚೀನಾದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಬಿಹಾರದಿಂದ ಹೈಯರ್ ಸೆಕೆಂಡರಿ ಪದವಿ ಖರೀದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ನೇಪಾಳ ಪೊಲೀಸರ ಕೇಂದ್ರ ತನಿಖಾ ಬ್ಯೂರೋ (CIB) ತಂಡವು ನೇಪಾಳದ ಆಡಳಿತ ಪಕ್ಷದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಸುನಿಲ್ ಶರ್ಮಾ ಅವರನ್ನು ಕಠ್ಮಂಡುವಿನಲ್ಲಿ ಬಂಧಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ, ಪೊಲೀಸ್ ವಕ್ತಾರ ಕುಬರ್ ಕಡಾಯತ್ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ:ನಕಲಿ ಪ್ರಮಾಣಪತ್ರ ಬಳಸಿ ನೇಮಕಾತಿ ಪಡೆದುಕೊಂಡಿದ್ದ ಸಂಚುಕೋರ
ಮೊರಾಂಗ್-3 ಕ್ಷೇತ್ರದಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಆಯ್ಕೆಯಾದ ಸುನಿಲ್ ಕುಮಾರ್‍ ಶರ್ಮಾ, ನೇಪಾಳಿ ಕಾಂಗ್ರೆಸ್‍ನ ಶೇಖರ್ ಕೊಯಿರಾಲಾ ಪಡೆಗೆ ಹತ್ತಿರದವರೆಂದು ಪರಿಗಣಿಸಲಾಗಿದೆ. ಅವರ ಬಂಧನ, ಆಡಳಿತ ಒಕ್ಕೂಟದಲ್ಲಿ ಏರಿಳಿತಗಳನ್ನು ಸೃಷ್ಟಿಸಿದೆ. ಕೆಲವು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳ ಮಾಲೀಕರಾಗಿರುವ ಶರ್ಮಾರ ಬಂಧನ, 100 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಗೃಹ ಸಚಿವ ನರಾಯನ್ ಕಾಜಿ ಶ್ರೆಸ್ತಾ ಮತ್ತು ಹಣಕಾಸು ಸಚಿವ ಪ್ರಕಾಶ್ ಶರನ್ ಮಹಾತ್ ಅವರ ರಾಜೀನಾಮೆಗೆ ಒತ್ತಾಯಿಸಿದ ಕೆಲವೇ ದಿನಗಳಲ್ಲಿ ನಡೆದಿದೆ. ಈ ಘಟನೆ ಕಳೆದ ತಿಂಗಳು ನಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ:ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್; ತೆರಿಗೆ ವಂಚಿಸಲು ಕೃಷಿಕರ ಹೆಸರಲ್ಲಿ ನೋಂದಣಿ
ಭಾರತ ಹಾಗೂ ಚೀನಾ ಮೂಲದ ಸುಮಾರು ಹದಿನೆಂಟು ಜನರನ್ನು, ಜುಲೈ 18ರ ರಾತ್ರಿ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 100 ಕೆಜಿ ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
