ಕಠ್ಮಂಡು: ಕೊವಿಡ್​-19 ಸೋಂಕಿಗೆ ಒಳಗಾಗಿರುವ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಅವರ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕೋಲ್ಕತ್ತದಲ್ಲಿ ಹವನವನ್ನೂ ಮಾಡುತ್ತಿದ್ದಾರೆ. ರಾಜಕೀಯ, ಕ್ರೀಡಾ ವಲಯಗಳಿಂದ ಗಣ್ಯರೂ ಕೂಡ ಬಿಗ್​ ಬಿ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.
ಇದೀಗೆ ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರು ಟ್ವೀಟ್​ ಮಾಡಿ, ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್​ ಆರೋಗ್ಯ ಶೀಘ್ರವೇ ಸರಿ ಹೋಗಲಿ ಎಂದು ಹಾರೈಸಿದ್ದಾರೆ.ಹಿರಿಯ ನಟ ಅಮಿತಾಭ್​ ಬಚ್ಚನ್​ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​ ಆದಷ್ಟು ಬೇಗ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಳ್ಳಲಿ ಎಂದು ಕೆ.ಪಿ. ಶರ್ಮಾ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿ:ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ
ಭಾರತದಲ್ಲಿರುವ ಫ್ರೆಂಚ್​ ರಾಯಭಾರಿ ಇಮ್ಯಾನುವಲ್ ಲೆನಿಯನ್​ ಅವರೂ ಕೂಡ ಟ್ವೀಟ್​ ಮಾಡಿ, ಇವರಿಬ್ಬರ ಆರೋಗ್ಯ ಬೇಗ ಸರಿಯಾಗಲಿ ಎಂದು ಹಾರೈಸಿದ್ದರು.
ನಿನ್ನೆ ಮೊದಲು ಅಮಿತಾಭ್​ ಬಚ್ಚನ್​ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅದಾದ ಬಳಿಕ ಅಭಿಷೇಕ್​ ಬಚ್ಚನ್​ರಲ್ಲೂ ಕೊವಿಡ್​ ಇರುವುದು ದೃಢಪಟ್ಟಿತ್ತು. ಹಾಗೇ ಇಂದು, ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ಅವರಿಗೂ ಸೋಂಕು ಇರುವುದು ಗೊತ್ತಾಗಿದೆ. ಸದ್ಯ ಜಯಾ ಬಚ್ಚನ್​ ಅವರು ಆರೋಗ್ಯವಾಗಿದ್ದಾರೆ. (ಏಜೆನ್ಸೀಸ್​)
ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ಅಪ್ಪ…ಇದೇ ಕಾರಣಕ್ಕೆ ಹೋಯ್ತು ಮಗಳ ಪ್ರಾಣ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
