ಕಿಶನ್​ಗಂಜ್​: ಗಡಿಭಾಗದಲ್ಲಿ ಪಾಕಿಸ್ತಾನ, ಚೀನೀಯರಷ್ಟೇ ಅಲ್ಲ, ನೇಪಾಳದವರೂ ಗುಂಡು ಹಾರಿಸೋದಕ್ಕೆ ಶುರುಮಾಡಿದ್ರು! ಬಿಹಾರದ ಕಿಶನ್​ಗಂಜ್​ ಪ್ರದೇಶದಲ್ಲಿರುವ ಭಾರತ- ನೇಪಾಳದ ಗಡಿಯಲ್ಲಿ ನೇಪಾಳ ಪೊಲೀಸರು ಮೂವರು ಭಾರತೀಯರ ಮೇಲೆ ಗುಂಡು ಹಾರಿಸಿದ ಪರಿಣಾಮ ಒಬ್ಬ ಗಾಯಗೊಂಡಿದ್ದಾನೆ.
ಉಭಯ ದೇಶಗಳ ನಡುವೆ ಸಂಬಂಧ ಅಷ್ಟೇನೂ ಹಿತವಲ್ಲದೇ ಇರುವ ಈ ಸಂದರ್ಭದಲ್ಲೂ ನೇಪಾಳ ಪೊಲೀಸರು ಈ ರೀತಿ ಸಾಹಸಕ್ಕೆ ಕೈ ಹಾಕಿರುವುದು ಈಗ ಎಲ್ಲರ ಹುಬ್ಬೇರಿಸಿದೆ. ಕಿಶನ್​ಗಂಜ್​ನ ಮಾಫಿ ತೋಲಾ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಸ್ಥಳೀಯರಾಗಿದ್ದು ಕಳೆದು ಹೋಗಿದ್ದ ಹಸುವನ್ನು ಹುಡುಕುತ್ತ ಗಡಿ ಭಾಗಕ್ಕೆ ಹೋಗಿದ್ದರು. ಆಗ ನೇಪಾಳ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರ ಮೂರು ವಿಚಾರಗಳಲ್ಲಿ ಸುಳ್ಳು ಹೇಳುತ್ತಿದೆ…: ರಾಹುಲ್​ ಗಾಂಧಿ ಹೊಸ ಆರೋಪ
ದಾಳಿಯ ಮಾಹಿತಿ ಸಿಕ್ಕ ಕೂಡಲೇ ಸೀಮಾ ಸುರಕ್ಷಾ ಬಲದ ಯೋಧರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದಾರೆ. ಭಾರತ ಮತ್ತು ನೇಪಾಳ ಗಡಿ ಕರೊನಾ ವೈರಸ್ ಕಾರಣಕ್ಕೆ ಈಗಾಗಲೇ ಬಂದ್ ಆಗಿದ್ದು, ಯಾರೂ ಗಡಿ ದಾಟಿ ಹೋಗಿಲ್ಲ. ಆದರೂ ಈ ದಾಳಿ ಯಾಕೆ ನಡೆಯಿತು ಎಂಬ ಬಗ್ಗೆ ತನಿಖೆ ಶುರುವಾಗಿದೆ. (ಏಜೆನ್ಸೀಸ್)
VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ

One Indian injured after Nepal Police shot at three Indian men near India-Nepal border in Kishanganj. Injured shifted to hospital. Investigation underway: SP Kishanganj, Biharpic.twitter.com/0eGnJyo1gd
— ANI (@ANI)July 19, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
