ಕಠ್ಮಂಡು:ಭತ್ತ, ಅಕ್ಕಿ ಮತ್ತು ಸಕ್ಕರೆ ಪೂರೈಕೆಗೆ ಅನುಕೂಲ ಮಾಡಿಕೊಡುವಂತೆ ನೇಪಾಳ ಸರ್ಕಾರ ಭಾರತದ ಬಳಿ ಮನವಿ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ಕಠ್ಮಂಡುವಿನಲ್ಲಿ ತಿಳಿಸಿದ್ದಾರೆ. ಮುಂಬರುವ ಹಬ್ಬದ ಋತುವಿನಲ್ಲಿ ಸಂಭವನೀಯ ಆಹಾರದ ಕೊರತೆಯನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ನೇಪಾಳ ಭಾರತದ ಬಳಿ ಹೆಚ್ಚಿನ ಪೂರೈಕೆಗಾಗಿ ಒತ್ತಾಯಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಂಜನೇಯ ದೇವಳದ ಹುಂಡಿಯಲ್ಲಿ ನೇಪಾಳದ ಕರೆನ್ಸಿ; ‘ಸಾಲ ಮಾಡಿದ್ದೇನೆ, ಪರಿಹಾರ ತೋರು’ ಎಂದು ಚೀಟಿ ಬರೆದು ಕೋರಿದ ಭಕ್ತ
ವಿದೇಶಾಂಗ ಸಚಿವಾಲಯದ ಮೂಲಕ ಕಳೆದ ವಾರ ಭಾರತೀಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ವಾಣಿಜ್ಯ ಮತ್ತು ಸರಬರಾಜು ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಮ್ ಚಂದ್ರ ತಿವಾರಿ ತಿಳಿಸಿದ್ದಾರೆ. “ನೇಪಾಳವು 10 ಲಕ್ಷ ಟನ್ ಭತ್ತ, 1 ಲಕ್ಷ ಟನ್ ಅಕ್ಕಿ ಮತ್ತು 50 ಸಾವಿರ ಟನ್ ಸಕ್ಕರೆಯನ್ನು ಒದಗಿಸುವಂತೆ ಭಾರತವನ್ನು ಕೋರಿದೆ” ಎಂದು ಅವರು ಹೇಳಿದರು.
ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಸಕ್ಕರೆಯ ತಕ್ಷಣಕ್ಕೆ ಕೊರತೆಯಿಲ್ಲವಾದರೂ, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸುವ ಭಾರತದ ನಿರ್ಧಾರದ ನಂತರ ಕೊರತೆ ಉಂಟಾಗಿರುವ ಬಗ್ಗೆ ವದಂತಿಗಳಿವೆ.ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೇಪಾಳ ಸರ್ಕಾರವು ಈ ಆಹಾರ ಪದಾರ್ಥಗಳನ್ನು ಪೂರೈಸುವಂತೆ ಭಾರತವನ್ನು ಕೇಳಿಕೊಂಡಿದೆ ಎಂದು ರಾಮ್ ಚಂದ್ರ ತಿವಾರಿ ಹೇಳಿದರು. ನೇಪಾಳದಲ್ಲಿ ಹಬ್ಬದ ಋತು ಸಮೀಪಿಸುತ್ತಿದ್ದಂತೆ ವ್ಯಾಪಾರಿಗಳು ಈ ಸರಕುಗಳನ್ನು ಸಂಗ್ರಹಿಸಲು ಮುಂದಾಗಬಹುದು ಎಂಬ ಆತಂಕವೂ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ನೇಪಾಳದ ಪ್ರಧಾನಿಯ ಪತ್ನಿ ಸೀತಾ ದಹಲ್ ನಿಧನ…
ಅಕ್ಟೋಬರ್ ಮತ್ತು ನವೆಂಬರ್ ನಡುವೆ ಸಂಭವಿಸುವ ನೇಪಾಳದ ಹಬ್ಬದ ಋತುವಿನಲ್ಲಿ, ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿದ್ದರೆ ಅಕ್ಕಿ ಮತ್ತು ಸಕ್ಕರೆ ಬೆಲೆಗಳು ಹೆಚ್ಚಾಗುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ ಮೇಳ
ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಚಿಲ್ಲರೆ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಜುಲೈ 20ರಂದು ಭಾರತ ಸರ್ಕಾರ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿತು. ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯು ದೇಶದಿಂದ ರಫ್ತಾಗುವ ಒಟ್ಟು ಅಕ್ಕಿಯ ಶೇಕಡಾ 25 ರಷ್ಟಿದೆ. ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲಿನ ಭಾರತದ ನಿಷೇಧ, ನೇಪಾಳದಲ್ಲಿನ ಪ್ರಸ್ತುತ ಹವಾಮಾನ ವಿದ್ಯಮಾನವನ್ನು ಪರಿಗಣಿಸಿ, ಅಲ್ಪಾವಧಿಗೆ ಆಹಾರ ಬಿಕ್ಕಟ್ಟು ಉಂಟಾಗಬಹುದು ಎಂದು ಅಲ್ಲಿನ ತಜ್ಞರು ಹೇಳುತ್ತಾರೆ.
ನೇಪಾಳವು ಹೆಚ್ಚಾಗಿ ಭಾರತದಿಂದ ಆಮದು ಮಾಡಿಕೊಳ್ಳುವ ಆಹಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕಠ್ಮಂಡು ಪೋಸ್ಟ್ ಪತ್ರಿಕೆಯ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್ 2021ರಿಂದ ಮಾರ್ಚ್ 22ರವರೆಗೆ ನೇಪಾಳವು ಭಾರತದಿಂದ 14 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ಅದರಲ್ಲಿ 13.8 ಲಕ್ಷ ಟನ್ ಬಾಸ್ಮತಿ ಅಲ್ಲದ ಅಕ್ಕಿ ಮತ್ತು 19,000 ಟನ್ ಬಾಸ್ಮತಿ ಅಕ್ಕಿ ಇದೆ.
ಇದನ್ನೂ ಓದಿ:ಕ್ಷಣಾರ್ಧದಲ್ಲೇ ತಪ್ಪಿತು ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ; ಮೂವರು ವಾಯು ಸಂಚಾರ ನಿಯಂತ್ರಕರು ಅಮಾನತು
ಭಾರತವು ಅಕ್ಕಿ ರಫ್ತನ್ನು ನಿಲ್ಲಿಸಿದ ತಕ್ಷಣ, ಚಿಲ್ಲರೆ ಬೆಲೆಗಳು 25 ಕೆಜಿ ಚೀಲಕ್ಕೆ 200 ನೇಪಾಳಿ ರೂ. ನಿಂದ 250 ರೂ.ಗೆ ಏರಿದೆ ಎಂದು ನೇಪಾಳಿ ವ್ಯಾಪಾರಿಗಳು ಹೇಳುತ್ತಾರೆ. ವಿಶೇಷವಾಗಿ ಹಬ್ಬದ ಋತುವಿನಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ದೇಶದ ಪ್ರಮುಖ ಖರೀದಿ ಕೇಂದ್ರಗಳಲ್ಲಿ ಭಾರಿ ಮಳೆಯ ನಂತರ ಬೆಲೆಗಳ ಏರಿಕೆಯನ್ನು ತಡೆಯಲು ಭಾರತವು ನೇಪಾಳದಿಂದ ಟೊಮ್ಯಾಟೊ ಆಮದು ಮಾಡಿಕೊಳ್ಳುತ್ತಿರುವುದರಿಂದ ನೇಪಾಳದ ಆಹಾರ ಧಾನ್ಯಗಳಿಗಾಗಿ ಮನವಿ ಬಂದಿದೆ.(ಏಜೆನ್ಸೀಸ್)


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
