ಕಾಠ್ಮಂಡು:ಲಿಪುಲೇಖ್​, ಕಾಲಾಪಾನಿ ಮತ್ತು ಲಿಂಪಿಯಾಧುರಾ ಒಳಗೊಂಡಂತೆ ಭಾರತೀಯ ಪ್ರದೇಶಗಳನ್ನು ಸೇರಿಸಿಕೊಂಡು ರೂಪಿಸಲಾಗಿರುವ ವಿವಾದಾತ್ಮಕ ಭೂನಕ್ಷೆಗೆ ಸಂಸತ್​ನಲ್ಲಿ ಅನುಮೋದನೆ ಪಡೆದುಕೊಳ್ಳುವ ಪ್ರಕ್ರಿಯೆಗೆ ನೇಪಾಳ ಚಾಲನೆ ನೀಡಿದೆ. ನೇಪಾಳದ ಕಾನೂನು ಸಚಿವ ಶಿವ ಮಾಯಾ ತುಂಬಾಂಪೆ ನಕ್ಷೆಯನ್ನು ಸಂಸತ್​ನಲ್ಲಿ ಭಾನುವಾರ ಮಂಡಿಸಿದರು. ಭಾರತದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೊರತಾಗಿಯೂ ನೇಪಾಳ ವಿವಾದಾತ್ಮಕ ಪರಿಷ್ಕೃತ ನಕ್ಷೆಯನ್ನು ಸಂಸತ್​ನಲ್ಲಿ ಮಂಡಿಸಿರುವುದು ವಿಶೇಷ.
ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್​ ಕೂಡ ವಿವಾದಾತ್ಮಕ ನಕ್ಷೆಯ ಅನುಮೋದನೆಗೆ ಸಹಕರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಿವ ಮಾಯಾ ತುಂಬಾಂಪೆ ನಕ್ಷೆಯನ್ನು ಸಂಸತ್​ನಲ್ಲಿ ಮಂಡಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ಪ್ರದೇಶಗಳಾದ ಲಿಂಪಿಯಾಧುರಾ, ಕಾಲಾಪಾನಿ ಮತ್ತು ಲಿಪುಲೇಖ್​ ಪ್ರದೇಶಗಳು ಪರಿಷ್ಕೃತ ನಕ್ಷೆಯಲ್ಲಿ ತನ್ನದೆಂದು ನೇಪಾಳ ಹೇಳಿಕೊಂಡಿದೆ. ನಕ್ಷೆಯ ಅನುಮೋದನೆಗೆ ಮೂರನೇ ಎರಡು ಭಾಗದಷ್ಟು ಸಂಸದರ ಬೆಂಬಲ ಅಗತ್ಯವಾಗಿದೆ. ರಾಷ್ಟ್ರೀಯ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ನಕ್ಷೆಗೆ ಬೆಂಬಲ ವ್ಯಕ್ತಪಡಿಸಲು ನೇಪಾಳಿ ಕಾಂಗ್ರೆಸ್​ ನಿರ್ಧರಿಸಿದೆ. ಇದರಿಂದಾಗಿ ಮಾದೇಶ ಪಕ್ಷಗಳ ವಿರೋಧದ ಹೊರತಾಗಿಯೂ ಪರಿಷ್ಕೃತ ನಕ್ಷೆ ಸುಲಭವಾಗಿ ಅನುಮೋದನೆಗೊಳ್ಳಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸೋಂಕಿತರ ಮೇಲೆ ಪಾಕ್​ ಗೂಢಚರ ಸಂಸ್ಥೆ ಕಣ್ಣು! ಶುರುವಾಯ್ತು ಹೀಗೊಂದು ಪ್ರಯೋಗ
ನೇಪಾಳದ ಸಂಸತ್​ನಲ್ಲಿ ಮಂಡನೆಗೊಳ್ಳುವ ಮಸೂದೆಗಳ ಅನುಮೋದನೆ ಪ್ರಕ್ರಿಯೆಗೆ ಒಂದು ತಿಂಗಳು ಬೇಕಾಗುತ್ತದೆ. ಆದರೆ ಕೆ.ಪಿ. ಓಲಿ ನೇತೃತ್ವದ ಎಡರಂಗ ಸರ್ಕಾರ ವಿವಾದಾತ್ಮಕ ನಕ್ಷೆಗೆ 10 ದಿನಗಳಲ್ಲಿ ಅನುಮೋದನೆ ಪಡೆದುಕೊಳ್ಳುವ ರಣತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಅದು ಮಸೂದೆ ಮಂಡನೆಯ ಎಲ್ಲ ಪ್ರಕ್ರಿಯೆಗಳನ್ನು ಬದಿಗಿರಿಸಿ ನಕ್ಷೆಯನ್ನು ಸಂಸತ್​ನಲ್ಲಿ ಮಂಡಿಸಿದೆ.

1815ರ ಸಗೌಲಿ ಒಪ್ಪಂದದ ಪ್ರಕಾರ ನೇಪಾಳದ ಭೂಪ್ರದೇಶ ಕಾಳಿನದಿಯಿಂದ ಆರಂಭವಾಗುತ್ತದೆ ಎಂಬುದು ನೇಪಾಳದ ವಾದವಾಗಿದೆ. ನದಿಯ ಪೂರ್ವ ಭಾಗ ನೇಪಾಳದ ಭಾಗವಾಗಿದ್ದರೆ, ಪಶ್ಚಿಮ ಭಾಗ ಭಾರತದ ಪ್ರದೇಶವಾಗಿದೆ ಎಂದು ಅದು ಪ್ರತಿಪಾದಿಸುತ್ತದೆ.
ಗತಿಯಾಬಗಢದಿಂದ ಉತ್ತರಾಖಂಡದ ಲಿಪುಲೇಖ್​ಗೆ ಸಂಪರ್ಕ ಒದಗಿಸುವಂತೆ ಭಾರತ 80 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿದ್ದ ಭಾರತ, ಇತ್ತೀಚೆಗೆ ಅದನ್ನು ಸಂಚಾರ ಮುಕ್ತಗೊಳಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ನೇಪಾಳದ ಭಾಗದಲ್ಲಿ ನಿರ್ಮಿಸಲಾಗಿದೆ ಎಂಬುದು ನೇಪಾಳದ ವಾದ. ಆದರೆ, ಇದನ್ನು ಅಲ್ಲಗಳೆಯುತ್ತಿರುವ ಭಾರತ ಈ ಪ್ರದೇಶ ಉತ್ತರಾಖಂಡದ ಪಿತ್ತೋರ್​ಗಢದ ವ್ಯಾಪ್ತಿಗೆ ಸೇರುತ್ತದೆ ಎಂದು ಪ್ರತಿಪಾದಿಸುತ್ತಿದೆ.
ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
