ನವದೆಹಲಿ:ಇತ್ತೀಚೆಗೆ ನೇಪಾಳದಲ್ಲಿ ಭಾರತ ವಿರೋಧಿ ಮನೋಭಾವ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಭಾರತದ ಹಿತಾಸಕ್ತಿಗೆ ಧಕ್ಕೆ ಒದಗುವ ರೀತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇತ್ತಿಚೆಗಷ್ಟೇ ಭಾರತದ ಗಡಿ ಭಾಗಗಳನ್ನು ಸೇರ್ಪಡೆಗೊಳಿಸಿಕೊಂಡು ಪರಿಷ್ಕೃತ ನಕ್ಷೆ ರಚಿಸಿ, ಸಂಸತ್​ನ ಅನುಮೋದನೆ ಪಡೆದುಕೊಂಡಿದ್ದ ನೇಪಾಳ ಇದೀಗ ತನ್ನ ಗಡಿಭಾಗದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಈ ಕಾಮಗಾರಿಗಳನ್ನು ನೇಪಾಳ ಬಹುತೇಕ ಚೀನಾದ ಕುಮ್ಮಕ್ಕಿನೊಂದಿಗೆ ಕೈಗೊಳ್ಳುತ್ತಿದ್ದು, ಭಾರತದ ಬೆನ್ನಿಗೆ ಚೂರಿ ಇರಿಯಲು ಹುನ್ನಾರ ನಡೆಸಿದೆ.
ಇದನ್ನೂ ಓದಿ:ನೇಪಾಳವನ್ನು ಚೀನಿಯರಿಗೆ ಒತ್ತೆ ಇಟ್ಟಿರುವ ಕೆ.ಪಿ. ಓಲಿ ವಿರುದ್ಧ ರಾಜಕೀಯ ಬಂಡಾಯ
ಭಾರತ ಮತ್ತು ನೇಪಾಳದ ಗಡಿಗೆ ಅಂಟಿಕೊಂಡಿರುವ ಭಾರತದ ಪಿತ್ತೋರ್​ಗಢ ಜಿಲ್ಲೆಗೆ ಸಮೀಪದಲ್ಲಿರುವ ಮಹಾಕಾರಿ ಕಾರಿಡಾರ್​ ಎಂದು ಕರೆಯಲಾಗುವ 87 ಕಿ.ಮೀ. ಉದ್ದದ ಡ್ರಾಕುಲಾ-ತಿನ್ಕಾರ್​ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅದು ಕೈಗೆತ್ತಿಕೊಂಡಿದೆ. ಇದರ ಕಾಮಗಾರಿಯ ಜವಾಬ್ದಾರಿಯನ್ನು ನೇಪಾಳ ಸೇನಾಪಡೆಗೆ ವಹಿಸಲಾಗಿದೆ.
ಈ ರಸ್ತೆಯ ನಿರ್ಮಾಣದಿಂದಾಗಿ ನೇಪಾಳದ ಜನತೆಗೆ ಭಾರತೀಯ ರಸ್ತೆಗಳ ಬಳಕೆಯ ಅವಲಂಬನೆ ದೂರಾಗಲಿದೆ ಎಂಬುದು ನೇಪಾಳದ ವಾದವಾಗಿದೆ. ಆದರೆ, ಈ ರಸ್ತೆಯು ತಿನ್ಕಾರ್​ನಿಂದ ಚೀನಾದ ಗಡಿವರೆಗೂ ವಿಸ್ತರಿಸುತ್ತದೆ. ಇದರಿಂದಾಗಿ ಭಾರತದ ಮೇಲೆ ದಂಡೆತ್ತಿ ಬರಲು ಚೀನಾಕ್ಕೆ ತುಂಬಾ ಅನುಕೂಲವಾಗಲಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.
ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
