ನವದೆಹಲಿ:ಯಾವುದೇ ಐತಿಹಾಸಿಕ ದಾಖಲೆಗಳನ್ನು ಪರಿಗಣಿಸದೆ ಕೃತಕವಾಗಿ ವ್ಯಾಪ್ತಿಯನ್ನು ವಿಸ್ತರಿಸಿ ರೂಪಿಸಿರುವ ನೇಪಾಳದ ಪರಿಷ್ಕೃತ ರಾಜಕೀಯ ನಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
ಪರಿಷ್ಕೃತ ರಾಜಕೀಯ ನಕ್ಷೆಗೆ ನೇಪಾಳದ ಸಂಸತ್​ ಸರ್ವಾನುಮತದ ಅಂಗೀಕಾರ ನೀಡಿದ ಬೆನ್ನಲ್ಲೇ ಭಾರತ ಈ ಪ್ರತಿಕ್ರಿಯೆ ನೀಡಿದೆ. ಐತಿಹಾಸಿಕ ಅಂಶಗಳು ಮತ್ತು ಪುರಾವೆಗಳನ್ನು ಪರಿಗಣಿಸದೆ ಭಾರತಕ್ಕೆ ಸೇರಿದ ಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಪರಿಷ್ಕೃತ ನಕ್ಷೆಯನ್ನು ರಚಿಸಿಕೊಂಡಿದೆ. ಮಾತುಕತೆ ಮೂಲಕ ಗಡಿ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂಬ ಭಾರತದ ಪ್ರಸ್ತಾವನೆಗೆ ವಿರುದ್ಧವಾದ ನಿಲುವು ಇದಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್​ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ:ವಿವಾದಿತ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಗೆ ನೇಪಾಳ ಸಂಸತ್​ ಅನುಮೋದನೆ
ಇದಕ್ಕೂ ಮುನ್ನ ವಿವಾದಿತ ಪ್ರದೇಶಗಳಾದ ಲಿಪುಲೇಕ್​, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ಒಳಗೊಂಡು, ಹೊಸದಾಗಿ ರೂಪಿಸಿರುವ ನಕ್ಷೆಯನ್ನು ಪ್ರಧಾನಿ ಕೆ.ಪಿ. ಓಲಿ ಇತ್ತೀಚೆಗೆ ಸಂಸತ್​ನಲ್ಲಿ ಮಂಡಿಸಿದ್ದರು. ಹೊಸ ನಕ್ಷೆಯನ್ನು ಒಳಗೊಂಡ ರಾಷ್ಟ್ರೀಯ ಲಾಂಛನ ರೂಪಿಸಲು ನೇಪಾಳದ ಸಂವಿಧಾನದ 3ನೇ ವಿಧಿಗೆ ತಿದ್ದುಪಡಿ ತರುವ ಮಸೂದೆಯನ್ನೂ ಮಂಡಿಸಿದ್ದರು. ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್​, ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿಗಳು ಕೂಡ ಈ ನಿರ್ಣಯಗಳ ಪರವಾಗಿ ಮತಚಲಾಯಿಸಿದವು ಎನ್ನಲಾಗಿದೆ.
ನಕ್ಷೆಗೆ ಮಂಜೂರಾತಿ ಪಡೆಯಲು 275 ಸದಸ್ಯ ಬಲದ ಸಂಸತ್​ನಲ್ಲಿ ಮೂರನೇ ಎರಡು ಭಾಗದಷ್ಟು ಬೆಂಬಲದ ಅವಶ್ಯಕತೆ ಇತ್ತು. ಪ್ರಮುಖ ಪ್ರತಿಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದರಿಂದ, ನಕ್ಷೆಯು ಸರ್ವಾನುಮತದಿಂದ ಅನುಮೋದನೆಗೊಂಡಿತ್ತು.
ಮತ್ತೆ ಲಾಕ್‌ಡೌನ್ ಹೇರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೇ ಪ್ರಧಾನಿ ಮೋದಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
