ಮುಂಬೈ:ಜನಪ್ರಿಯ ಓಟಿಟಿ ತಾಣವಾದ ನೆಟ್​ಪ್ಲಿಕ್ಸ್​​ನ್ನು ಭಾರತದಲ್ಲಿಯೂ ಸಾಕಷ್ಟು ಜನ ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಮನರಂಜನೆಗಾಗಿ ಓಟಿಟಿ ವೇದಿಕೆಗಳ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ.
ಆದರೆ, ನೆಟ್​ಪ್ಲಿಕ್ಸ್​ ಸಂಸ್ಥೆಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಅದೇನಪ್ಪಾ ಅಂದರೆ, ನೆಟ್​ಪ್ಲಿಕ್ಸ್​ನಲ್ಲಿ ಇರುವ ಅಕೌಂಟ್​ ಶೇರಿಂಗ್ ಆಯ್ಕೆ. ಈ ಅಕೌಂಟ್​ ಶೇರಿಂಗ್ ಹಾಗೂ ಪಾಸ್​ವರ್ಡ್​ ಶೇರಿಂಗ್ ನಿಂದ ನೆಟ್​ಪ್ಲಿಕ್ಸ್​ಗೆ ಸಾಕಷ್ಟು ಹಾನಿಯಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಇದನ್ನು ತಡೆಗಟ್ಟಲು ಕಂಪೆನಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ನೆಟ್​ಪ್ಲಿಕ್ಸ್​ ಅಕೌಂಟ್ ಹೊಂದಿರುವವರು ತಮಗೆ ಬೇಕಿನಿಸಿದಾಗ ಪಾಸ್​ವರ್ಡ್​ನ್ನು ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರೇ ಅವರೂ ಕೂಡ ನೆಟ್​ಪ್ಲಿಕ್ಸ್​ನ್ನು ಹಣ ಪಾವತಿಸದೇ ಬಳಸಬಹುದಾಗಿದೆ. ಈ ಮಾರ್ಗವನ್ನೇ ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನೆಟ್​ಪ್ಲಿಕ್ಸ್​ ಈ ಮಾರ್ಗದ ಕಡಿವಾಣಕ್ಕೆ ಮುಂದಾಗಿದೆ.
ಇದನ್ನೂ ಓದಿ:ಮೀನು ಹುಟ್ಟಿದ್ದು ಹೇಗೆ ಗೊತ್ತಾ? ಅಬ್ಬಬ್ಬಾ.. ಮೀನಿನ ಇತಿಹಾಸ ಹೇಗಿದೆ ನೋಡಿ…
ಸದ್ಯ ಈ ಆಯ್ಕೆಯನ್ನು ತೆಗೆಯುವುದಕ್ಕಾಗಿ ಟ್ರಯಲ್ ರನ್ ನ್ನು ನೆಟ್​ಪ್ಲಿಕ್ಸ್​ ನಡೆಸುತ್ತಿದೆ. ಇದು ಯಶಸ್ವಿಯಾದರೇ ಜಾರಿಗೊಳಿಸಲು ಮುಂದಾಗಿದೆ. ಇದು ಜಾರಿಗೆ ಬಂದರೆ ಮತ್ತೊಬ್ಬರ ಪಾಸ್​ವರ್ಡ್​ ಮೂಲಕ ನೆಟ್​ಪ್ಲಿಕ್ಸ್​ ವೀಕ್ಷಿಸುವುದು ಅಸಾಧ್ಯವಾಗುತ್ತದೆ. (ಏಜೇನ್ಸಿಸ್)
ಓಟಿಟಿ ಮೇಲೆ ದರ್ಶನ್ ಗರಂ:​ ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ದಚ್ಚು!

ಹೊಸ ಮಾರ್ಗದರ್ಶಿ ಸೂತ್ರಗಳನ್ನು ಓಟಿಟಿ ವೇದಿಕೆಗಳು ಸ್ವಾಗತಿಸಿವೆ ಎಂದ ಪ್ರಕಾಶ್ ಜಾವಡೇಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
