ಮುಂಬೈ:ಗರ್ಭಿಣಿಯರಿಗೆ ಉಚಿತ ಪ್ರಯಾಣಗಳಂತಹ ಸೇವೆ ನೀಡುತ್ತಾ ಆಟೋ ಚಾಲಕರು ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾರಾದರೂ ಸಹಾಯ ಹಸ್ತ ಚಾಚಿದಾಗ ಅಪರಿಚಿತರಂತೆ ವರ್ತಿಸುವ ಈ ಕಾಲದಲ್ಲಿ ಈ ಆಟೋ ಚಾಲಕನೊಬ್ಬ ಸೋಶಿಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದ್ದಾನೆ.
ಏರುತ್ತಿರುವ ತಾಪಮಾನವು ಪ್ರತಿಯೊಬ್ಬರೂ ತಾವು ಹೋದಲ್ಲೆಲ್ಲಾ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವಂತೆ ಪ್ರೇರೇಪಿಸುತ್ತದೆ. ಪ್ರಯಾಣಿಕರು ಬಿಸಿಲನ್ನು ಸೋಲಿಸಲು ಮತ್ತು ಸವಾರಿಯನ್ನು ಆನಂದಿಸಲು ಸಹಾಯ ಮಾಡುವ ಮುಂಬೈ ಆಟೋ ಚಾಲಕನ ಗೆಸ್ಚರ್ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆದ್ದಿದ್ದಾನೆ.
ಇದನ್ನೂ ಓದಿ:ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ
ಮುಂಬೈನ ಈ ಆಟೋರಿಕ್ಷಾ ಚಾಲಕನ ಸೀಟಿನ ಹಿಂಭಾಗದಲ್ಲಿ ನೀರು ಉಚಿತವಾಗಿ ದೊರೆಯುತ್ತಿದೆ ಎಂದು ಬರೆದು ನೀರಿನ ಬಾಟಲಿ​​ಗಳು, ನ್ಯೂಸ್​​ ಪೇಪರ್​ ಹಾಗೂ ತಿಂಡಿಗಳನ್ನು ಇಡಲಾಗಿದೆ. ಚಾಲಕನ ಕಾರ್ಯವನ್ನು ಶ್ಲಾಘಿಸಿ ಸೋಶಿಯಲ್​​ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್​ ಶೇರ್​ ಮಾಡಿದ್ದಾರೆ.
Gesture Matters ☺️Mumbai autowala giving free water . It’s immensely satisfying to see.#SpreadKindness✌🏼pic.twitter.com/M2nVrLPJQg
— NANDINI IYER (@123_nandini)April 3, 2023

ಈ ಪೋಸ್ಟ್​ನಲ್ಲಿ ಆಟೋದ ಒಳಗೆ ನೀರಿನ ಬಾಟಲಿಗಳನ್ನು ನೋಡಬಹುದು. ವಾಹನದೊಳಗೆ, ಚಾಲಕನು ಪ್ರಯಾಣಿಕರಿಗಾಗಿ ಇರಿಸಿದ ನೀರಿನ ಬಾಟಲಿಗಳು. ಇದಕ್ಕೆ ಆತ ದುಡ್ಡು ಪಡೆಯುವುದಿಲ್ಲ. ಬಿಸಿಲಿನ ಝಳ ಹೆಚ್ಚಿರುವ ಕಾರಣ, ಪ್ರಯಾಣಿಕರು ನೀರನ್ನು ಕುಡಿಯುವುದಕ್ಕಾಗಿ ಈ ಬಾಟಲಿಗಳನ್ನು ಇಟ್ಟಿದ್ದಾನೆ. ಈ ಚಾಲಕನ ಕಾರ್ಯಕ್ಕೆ ಶ್ಲಾಘನೆಗಳು ಹರಿದುಬಂದಿವೆ. ಆಟೋ ಚಾಲಕ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾಜಿ ಪ್ರೇಮಿಯ ದೇಹವನ್ನು ತುಂಡು ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದ ಪ್ರಿಯತಮೆ!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:17 − 4 =
Remember me
