ನವದೆಹಲಿ:ದೆಹಲಿ ಮೆಟ್ರೋ ರೈಲು ಇತ್ತೀಚೆಗೆ ಅಸಭ್ಯ ವರ್ತನೆಗಳ ತಾಣವಾಗುವ ಮೂಲಕ ಅಪಖ್ಯಾತಿಗೆ ಒಳಗಾಗುತ್ತಿದೆ. ಈ ಹಿಂದೆ ಯುವತಿಯೊಬ್ಬಳು ಅರೆಬರೆ ಮೈ ಕಾಣುವ ಅಶ್ಲೀಲ ಉಡುಗೆ ಧರಿಸಿ, ಪ್ರಯಾಣ ಮಾಡುವ ಮೂಲಕ ಸುದ್ದಿಯಾಗಿದ್ದಳು. ಇದಾದ ಬಳಿಕ ಜೋಡಿಯೊಂದು ರೈಲಿನ ಒಳಗೆ ಪ್ರಣಯದಾಟ ಆಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಯುವಕನೊಬ್ಬ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ದೆಹಲಿ ಮೆಟ್ರೋಗಿರುವ ಕಳಂಕಕ್ಕೆ ಮತ್ತಷ್ಟು ಮಸಿ ಬಳಿದಿದಿದ್ದ. ಇದೀಗ ಮತ್ತೊಂದು ವಿಡಿಯೋ ತುಣಕು ವೈರಲ್​ ಆಗಿದ್ದು, ಜೋಡಿಯೊಂದು ಮೆಟ್ರೋ ಒಳಗೆ ಕಿತ್ತಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಯುವ ಜೋಡಿ ಉಡುಪು ಖರೀದಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ವಾಗ್ವಾದಕ್ಕೆ ಇಳಿಯುತ್ತಾರೆ. ನೋಡು ನೋಡತ್ತಿದ್ದಂತೆ ಯುವತಿ, ಯುವಕನ ಮೇಲೆ ಹಲ್ಲೆ ಮಾಡುತ್ತಾಳೆ. ಆದರೆ, ಯುವಕ ಮಾತ್ರ ಪಾಪ ಎನ್ನುವಂತೆ ಸುಮ್ಮನೆ ಏಟು ತಿನ್ನುತ್ತಾನೆ. ಸಹ ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Delhi metro entertainment 😂😂pic.twitter.com/LLdIDHB54N
— Kartik sharma (@Kartik_sharmaji)July 12, 2022

ಇದು ಯುವಜೋಡಿಯ ನಡುವಿನ ಗಂಭೀರ ಸಮಸ್ಯೆ ಎಂಬುದು ತಿಳಿದಿದ್ದರೂ ಅದರ ಹೊರತಾಗಿಯೂ ವೈರಲ್​ ಆಗಿರುವ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ. ಇದು ಚಲನಚಿತ್ರದ ದೃಶ್ಯಕ್ಕಿಂತ ಹೆಚ್ಚು ಆಸಕ್ತಿಯುತವಾಗಿದೆ ಎಂದಿದ್ದಾರೆ. ಇನ್ನು ಕೆಲವರು ಯುವಕನನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ. ಮತ್ತೆ ಕೆಲವರು ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂದು ಕಮೆಂಟಿಸಿದ್ದಾರೆ. ಟ್ವಿಟರ್​ನಲ್ಲಿ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮನತ್ತು 6 ಸಾವಿರ ಲೈಕ್ಸ್​ ಬಂದಿವೆ.
https://twitter.com/saycutee_/status/1546809472034557954?s=20
ಕೆಲ ದಿನಗಳ ಹಿಂದೆ ರಿಧಮ್​ ಹೆಸರಿನ ಯುವತಿಯ ವಿಡಿಯೋ ವೈರಲ್​ ಆಗಿತ್ತು. ವಿಡಿಯೋದಲ್ಲಿ ರಿಧಮ್​ ಬ್ರಾ ಮತ್ತು ಮಿನಿ ಸ್ಕರ್ಟ್​ ಧರಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಳು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಯಿತು. ಇದರ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಪ್ರಯಾಣಿಕರಿಗೆ ಸಂದೇಶವೊಂದನ್ನು ರವಾನಿಸಿದೆ. DMRCಯು ತನ್ನ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಮತ್ತೊಮ್ಮೆ ಇಂತಹ ಘಟನೆ ನಡೆದಿರುವುದು DMRC ಸೂಚನೆಗೆ ಬೆಲೆ ಇಲ್ಲದಂತಾಗಿದೆ.(ಏಜೆನ್ಸೀಸ್​)
ದೆಹಲಿ ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​! ವಿಡಿಯೋ ಸೆರೆಹಿಡಿದವನಿಗೆ ತರಾಟೆ, ಪರ-ವಿರೋಧ ಚರ್ಚೆ

ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eleven =
Remember me
