ನವದೆಹಲಿ:ಟ್ವಿಟರ್​ನಲ್ಲಿ ಈಗ ಎಲಾನ್​ ಮಸ್ಕ್​ ಹೆಸರು ಬಂದರೆ ಸಾಕು, ಏನೋ ಸುದ್ದಿ ನಡೆಯುತ್ತಿದೆ ಎಂದೇ ಜನ ಭಾವಿಸುತ್ತಾರೆ. ಇಂದು (ನ.5) ಎಲಾನ್​ ಮಸ್ಕ್​ ಹೆಸರಿನ ಖಾತೆಯೊಂದರಲ್ಲಿ ಹಿಂದಿಯಲ್ಲಿ ಟ್ವೀಟ್​ ಕಂಡುಬಂದಿದೆ.
ಟ್ವಿಟರ್​ನಲ್ಲಿ ಬ್ಲೂ ಟಿಕ್​ ಪಡೆಯಲು 8 ಡಾಲರ್​ ಪಾವತಿಸಬೇಕು ಎನ್ನುವ ಹೊಸ ನೀತಿಯನ್ನು ಬೆಂಬಲಿಸಿ ಟ್ವೀಟ್​ ಮಾಡಲಾಗಿದೆ. ಟ್ವೀಟ್​ನಲ್ಲಿ ‘ಟ್ವಿಟರ್, ನಿನ್ನ ಸಾವಿರ ಹೋಳಾಗುತ್ತೆ ಎನ್ನುವ ಗ್ಯಾಂಗ್​ ಕೂಡ ಈಗ ಬ್ಲೂ ಟಿಕ್​ಗೆ ಹಣ ಪಾವತಿ ಮಾಡಬೇಕು’ ಎಂದು ಬರೆಯಲಾಗಿತ್ತು . ಈ ಟ್ವೀಟ್​, ಟ್ವಿಟರ್​ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವಾಗಲೇ ಬಂದಿದ್ದು ಕೂಡಲೇ ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸುಳ್ಳು ಎಷ್ಟು ಹೊತ್ತು ತಾನೇ ನಿಲ್ಲಲು ಸಾಧ್ಯ? ಟ್ವಿಟರ್ ಖಾತೆಯಲ್ಲಿ ಹ್ಯಾಂಡಲ್​ನ ಹೆಸರು ಮಾತ್ರ @iawoolford ಎಂದಿತ್ತು. ಇದು ನೆಟ್ಟಿಗರ ಅನುಮಾನಗಳನ್ನು ದೂರ ಮಾಡಿದೆ. ನಂತರ ಅಕೌಂಟಿನಿಂದ ಹಿಂದಿ ಮೀಮ್ಸ್​ಗಳನ್ನು ಪೋಸ್ಟ್​ ಮಾಡಲಾಗಿತ್ತು. ಇದರಿಂದ ಈ ಖಾತೆ ಯಾರೋ ತಮಾಷೆಗೆ ಸೃಷ್ಟಿಸಿದ್ದು ಎನ್ನುವುದು ಸ್ಪಷ್ಟವಾಯಿತು. ಈ ಮೀಮ್ಸ್​ಗಳು ವೈರಲ್​ ಆಗುತ್ತಲೇ ಎಚೆತ್ತುಕೊಂಡ ಟ್ವಿಟರ್​, ಅಕೌಂಟ್​ಅನ್ನು ತೆಗೆದು ಹಾಕಿದೆ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:eight + 17 =
Remember me
