ಕೋಲ್ಕತ:ಹಿಂದು ನಂಬಿಕೆಯ ಪ್ರತೀಕವಾಗಿರುವ ಶಿವಲಿಂಗವನ್ನು ಅವಮಾನಿಸಿರುವ ಬಂಗಾಳಿ ನಟಿ ಸಾಯೋನಿ ಘೋಷ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. 2015ರಲ್ಲಿ ಶಿವಲಿಂಗವನ್ನು ಅವಹೇಳನ ಮಾಡಿದ್ದ ಟ್ವೀಟ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದರಿಂದ ಸಯೋನಿ ವಿರುದ್ಧ ಅಸಂಖ್ಯಾತ ಭಕ್ತರು ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ, ನಟಿಯ ವಿರುದ್ಧ ದೂರು ಸಹ ದಾಖಲಾಗಿದೆ.
2015ರ ಫೆ. 18ರಂದು ಸಯೋನಿ ಒಂದು ಟ್ವೀಟ್​ ಮಾಡಿದ್ದರು. ಅದರಲ್ಲಿ ಸೀರೆಯುಟ್ಟ ಮಹಿಳೆಯೊಬ್ಬಳು ಹಿಂದು ಧರ್ಮದ ಪಾವಿತ್ರತೆಯ ಸಂಕೇತ ಶಿವಲಿಂಗಕ್ಕೆ ಕಾಂಡೋಮ್​ ಹಾಕುತ್ತಿರುವ ಚಿತ್ರವಿತ್ತು. ಟ್ವೀಟ್​ ಕುರಿತು “ದೇವರುಗಳು ಹೆಚ್ಚು ಉಪಯುಕ್ತವಾಗುತ್ತಿರಲಿಲ್ಲ” ಎಂಬ ಅಡಿಬರಹ ಬರೆಯಲಾಗಿತ್ತು. ಅದೇ ವರ್ಷ ಫೆ. 17ರ ಮಹಾರಾತ್ರಿಯ ಹಬ್ಬದ ಬೆನ್ನಲ್ಲೇ ಟ್ವೀಟ್​ ಮಾಡುವ ಮೂಲಕ ಹಿಂದು ಸಂಸ್ಕೃತಿಯನ್ನು ಹಾಳು ಮಾಡುವ ಪ್ರಯತ್ನ ನಡೆದಿತ್ತು.
ಇದನ್ನೂ ಓದಿರಿ:11 ಯುವತಿಯರನ್ನು ಮದ್ವೆಯಾಗಿ ವಂಚಿಸಿದ 23ರ ಯುವಕ: ಈತನ ಕಾಮಪುರಾಣ ಕೇಳಿ ಬೆಚ್ಚಿದ ಪೊಲೀಸರು!
ನೆಟ್ಟಿಗರಿಂದ ಕಾನೂನು ಕ್ರಮದ ಎಚ್ಚರಿಕೆಸದ್ಯ ಸಯೋನಿ ಟ್ವೀಟ್​ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಿಮ್ಮ ಹೊಲಸು ಮನಸ್ಥಿತಿಗೆ ನಾಚಿಕೆಯಾಗಬೇಕು. ನೀವು ಕೂಡ ಒಬ್ಬ ಹಿಂದು ಅನ್ನುವುದನ್ನು ಮರೆಯಬೇಡಿ. ಶಿವಲಿಂಗ ನಮ್ಮ ಹಿಂದು ಧರ್ಮದ ಪಾವಿತ್ರತೆಯ ಸಂಕೇತವಾಗಿದೆ. ಭಾರತೀಯ ದಂಡ ಸಂಹಿತೆ ಪ್ರಕಾರ ಇದು ಜಾಮೀನು ರಹಿತ ಅಪರಾಧವಾಗಿದೆ. ಪೊಲೀಸರು ಈ ಕೂಡಲೇ ಸಾಯೋನಿ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಕ್ಷಮೆಯಾಚಿಸಿದ ಸಯೋನಿಯಾವಾಗ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತೋ ಕ್ಷಮೆಯಾಚಿಸಿರುವ ಸಯೋನಿ ಅದಕ್ಕೂ ಮುನ್ನ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಉಡಾಫೆ ಉತ್ತರ ನೀಡಿ ಸಮರ್ಥನೆಗೆ ಮುಂದಾದರು. 2010ರಲ್ಲಿ ನಾನು ಟ್ವಿಟರ್​ಗೆ ಸೇರಿದೆ. ಅನೇಕ ವರ್ಷಗಳ ಬಳಕೆಯ ಬಳಿಕ ನಾನು ಅದರ ಮೇಲೆ ಆಸಕ್ತಿ ಕಳೆದುಕೊಂಡೆ 2015ರ ಬಳಿಕ ನಾನು ಖಾತೆಯನ್ನು ನಿರ್ವಹಿಸುತ್ತಿರಲಿಲ್ಲ. ಆದರೂ ಖಾತೆ ಹಾಗೇ ಉಳಿದುಕೊಂಡಿತ್ತು. ಹೀಗಿರುವಾಗ ನನ್ನ ಖಾತೆ ಹ್ಯಾಕ್​ ಆಗಿದೆ ಪಿಆರ್​ ಏಜೆಂಟ್​ ಭಾಸ್ಕರ್​ ರಾಯ್​ ಎಂಬುವರು ತಿಳಿಸಿಕೊಟ್ಟರು. 2017ರವರೆಗೂ ಖಾತೆಯನ್ನು ಮರಳಿ ಪಡೆಯಲು ಆಗಲಿಲ್ಲ. ನಾನು ಏನೇ ಸಂದೇಶ ಕಳುಹಿಸದರು ಅದು 2017ರ ನಂತರ ಮಾಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಮನವಿ ಮಾಡುವುದಾಗಿಯೂ ಎಚ್ಚರಿಸಿ, ವಿವಿದಾತ್ಮಕ ಪೋಸ್ಟ್​ ಅನ್ನು ಟ್ವಿಟರ್​ನಿಂದ ತೆಗೆದುಹಾಕಿದ್ದರು.
ಇದನ್ನೂ ಓದಿರಿ:ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​
এইরকম মানসিকতার জন্যই বামপন্থীদের 'শুয়োরের বাচ্চা' শব্দে সর্বদা ভূষিত করা হয়😡।।(এই রকম মানসিকতা যদি ইসলাম ধর্মের সম্পর্কে ব্যক্ত করতেন তাহলে আপনার অবস্থা চার্লি হেবদোর মতো হতো) ।হিন্দুরা সহনশীল তাই সয়ে যাচ্ছি, তবে আমাদেরও সহ্যের একটা সীমা আছে এটা মনে রাখবেন।pic.twitter.com/n47I0K6KWT
— সমরজিৎ দাস। ꜱᴀᴍᴀʀᴊɪᴛ 🇮🇳 (@jitsamar14)January 16, 2021

That my account has been hacked and we need to retrieve it immediately. For various reasons we could only do that after 2017 and I got back in touch with the Twitter world with a bang. We have skipped a few unnecessary post while deleting most and I would take strict measure to
— Saayoni Ghosh (@sayani06)January 16, 2021

ಸಾಕ್ಷಿ ಸಮೇತ ಹ್ಯಾಕ್ ಸುಳ್ಳೆಂದು ಸಾಬೀತು​ಹ್ಯಾಕ್​ ಆಗಿತ್ತು ಎಂದು ನಟಿ ಹೇಳುವ ಮಾತನ್ನು ಒಪ್ಪದ ನೆಟ್ಟಿಗರು ಸಾಕ್ಷಿ ಸಮೇತ ನಟಿ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಸಯೋನಿ ಫೆ. 18ರಂದು ವಿವಾದಾತ್ಮಕ ಪೋಸ್ಟ್​ ಮಾಡಿದ್ದರು. 2015ರ ನಂತರ ಹ್ಯಾಕ್​ ಆಗಿದ್ದ ನನ್ನ ಖಾತೆಯನ್ನು 2017ರವರೆಗೂ ಮರಳಿ ಪಡೆಯಲು ಆಗಿರಲಿಲ್ಲ ಎಂದಿದ್ದಾರೆ. ಆದರೆ, 2016ರ ಸೆಪ್ಟೆಂಬರ್​ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ತನ್ನ ಟ್ವೀಟ್​ಗಳ ಸ್ಕ್ರೀನ್​ ಶಾಟ್​ ಮಾಡಿಕೊಂಡಿದ್ದಾರೆ. ಅ. 7ರಂದು ಬಿಡುಗಡೆಯಾಗಬೇಕಿದ್ದ ತನ್ನ ಚಿತ್ರದ ಪ್ರಮೋಷನ್​ ಸಹ ಮಾಡಿದ್ದು, ಇಂತಹ ವಿಷಯಗಳನ್ನು ಯಾವುದೇ ಹ್ಯಾಕರ್​ ಹಾಕುವುದಿಲ್ಲ ಎಂದು ಸಾಯೋನಿ ವಿರುದ್ಧ ಕಿಡಿಕಾರಿದ್ದಾರೆ.(ಏಜೆನ್ಸೀಸ್​) ​
ಇದನ್ನೂ ಓದಿರಿ:20 ರೂ. ನೀರಿನ ಬಾಟಲ್​ಗೆ 164 ರೂ. ಪಡೆದ ಹೋಟೆಲ್​: 5 ವರ್ಷದ ಹೋರಾಟಕ್ಕೆ ಗೆಲುವು, ಸಿಕ್ಕಿದ ಪರಿಹಾರವೆಷ್ಟು?
Here's a Thread exposing the@sayani06.
She claims that she was not running the account but any artist who reaches out to the PR team do gives the permission to post contents on their public platforms.
1. She wrote it by herself2. Approved pictures which need to be postedpic.twitter.com/rm5q9eArYw
— D P D 🌈 | Pokershash Stan Acc (@kannadaveera)January 16, 2021

ಅದ್ಧೂರಿ ಮದ್ವೆಯಾದ ಮಾರನೇ ದಿನವೇ ಪತ್ನಿಗೆ ಬಿಗ್​ ಶಾಕ್​ ಕೊಟ್ಟ ಪತಿಯಿಂದ ಮತ್ತೊಂದು ಆಘಾತ!

ಪತ್ನಿ ಮೊಬೈಲ್​ನಲ್ಲಿ, ತಿನ್ನೋದ್ರಲ್ಲಿ, ಅಲಂಕಾರ ಮಾಡಿಕೊಳ್ಳೋದ್ರಲ್ಲಿ ಕಾಲ ಕಳೀತಾಳೆ: ವಿಚ್ಛೇದನ ಸಿಗತ್ತಾ?

ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
