ನವದೆಹಲಿ:ಪ್ರಾಕೃತಿಕ ಸೌಂದರ್ಯಕ್ಕೆ ಮಾತ್ರವಲ್ಲದೆ, ರಾಫ್ಟಿಂಗ್, ಚಾರಣ ಹೀಗೆ ಅನೇಕ ಸಾಹಸಮಯ ಕ್ರೀಡೆಗಳಿಗೂ ಖ್ಯಾತಿಯಾಗಿರುವ ‘ಲಡಾಖ್‌’ಗೆ ದೇಶ ಮಾತ್ರವಲ್ಲದೆ, ವಿದೇಶದಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಂತಹ ಸುಂದರವಾದ ತಾಣದಲ್ಲಿ ಪ್ರವಾಸಿಗರು ತೋರಿದ ವರ್ತನೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಲಡಾಖ್ ಸಫಾರಿಗೆಂದು ತೆರಳಿರುವ ಕೆಲ ಪ್ರವಾಸಿಗರು ಕಾಡು ಕತ್ತೆಗಳ ಗುಂಪಿನತ್ತ ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ. ಇತ್ತ ಕತ್ತೆಗಳು ಭಯದಿಂದ ಓಡುತ್ತಿವೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು, ವನ್ಯಜೀವಿಗಳಿಗೆ ಆತಂಕವಾಗುವಂತೆ, ಭಯದ ವಾತವರಣ ಸೃಷ್ಟಿ ಮಾಡಿರುವ ಪ್ರವಾಸಿಗರ ನಡವಳಿಕೆ ಕಂಡು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Tourists chasing Tibetan wild ass in Ladakh. Disgustingpic.twitter.com/uM4uWVmEaW
— Susanta Nanda (@susantananda3)June 26, 2023

ಘಟನೆ ಖಂಡಿಸಿದ ಐಎಫ್ಎಸ್ ಅಧಿಕಾರಿ:ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ, ಪ್ರವಾಸಿಗರು ಕಾಡುಕತ್ತೆಗಳ ಜತೆ ನಡೆದುಕೊಂಡ ರೀತಿ ಕಂಡು ಖಂಡಿಸಿದ್ದು, ವೀಡಿಯೋಗೆ “ಲಡಾಖ್‌ನಲ್ಲಿ ಪ್ರವಾಸಿಗರು ಟಿಬೆಟಿಯನ್ ಕಾಡು ಕತ್ತೆಯನ್ನು ಬೆನ್ನಟ್ಟುತ್ತಿದ್ದಾರೆ. ಅಸಹ್ಯಕರ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ವಿಡಿಯೋದಲ್ಲಿ ನಾವು ನೋಡುವ ಹಾಗೆ ಸುಮಾರು ಅರ್ಧ ಡಜನ್ ಟಿಬೆಟಿಯನ್ ಕಾಡು ಕತ್ತೆಗಳನ್ನು ಕಾರು ವೇಗವಾಗಿ ಬೆನ್ನಟ್ಟುತ್ತಾ ಹೋಗುತ್ತದೆ. ಕೊನೆಗೆ ಕಾರು ಕಾಡುಕತ್ತೆ ಬಳಿ ಸಮೀಪಿಸುತ್ತಿದ್ದಂತೆ ವಿಡಿಯೋ ಮುಕ್ತಾಯವಾಗುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ:ಈ ವಿಡಿಯೋವನ್ನು ವೀಕ್ಷಿಸುತ್ತಿದ್ದಂತೆ, ನೆಟ್ಟಿಗರು ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುತ್ತಾ ಕಾರಿನಲ್ಲಿ ಪ್ರಯಾಣಿಸುತ್ತಿರುವ ಪ್ರವಾಸಿಗರ ಅಜಾಗರೂಕ ಮನೋಭಾವವನ್ನು ಖಂಡಿಸಿದ್ದಾರೆ. ಈ ವಿಷಯದ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸುತ್ತಿರುವ ಕೆಲವು ಟ್ವಿಟ್ಟರ್ ಬಳಕೆದಾರರು, ಪಿಎಂಒ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ವನ್ಯಜೀವಿಗಳ ಸಂರಕ್ಷಣೆ ಉದ್ದೇಶದಿಂದ ಇಂತಹ ಸಾಹಸಗಳನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, “ಇಂತಹ ಪ್ರವಾಸಿಗರನ್ನು ಲೈಫ್ ಟೈಮ್ ನಿಷೇಧಿಸಬೇಕು” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಅರ್ಜುನ್ ಸರ್ಜಾ ಕುಟುಂಬದಲ್ಲಿ ಮಂಗಳ ವಾದ್ಯದ ಸದ್ದು; ಪುತ್ರಿ ಐಶ್ವರ್ಯಾ​​ಗೆ ಕೂಡಿ ಬಂದ ಕಂಕಣ ಭಾಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
