ಹೈದರಾಬಾದ್:ಭಾರತೀಯ ಹೆಸರಾಂತ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕೇವಲ ತಮ್ಮ ಆಟದಿಂದ ಮಾತ್ರವಲ್ಲದೇ ಸೌಂದರ್ಯದಿಂದಲೂ ನೋಡುಗರ ಮನಗೆದ್ದಿರುವ ಸಾನಿಯಾ, ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನದಲ್ಲಿ ಉಂಟಾದ ತೊಡಕುಗಳಿಂದ ದೂರ ಉಳಿದಿದ್ದು, ನಮಗೆಲ್ಲಾ ತಿಳಿದೇ ಇದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್​ರಿಂದ ವಿಚ್ಛೇದನ ಪಡೆದ ಬಳಿಕ ಅತೀವ ನೋವಿನಲ್ಲಿದ್ದ ಸಾನಿಯಾ, ಹೆಚ್ಚಾಗಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದ್ರೆ, ಇದೀಗ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗುವುದರ ಜತೆಗೆ ದೇವರ ದರ್ಶನ ಕೂಡ ಮಾಡಿದ್ದಾರೆ.
ಇದನ್ನೂ ಓದಿ:ಆತ ಸಾಂಪ್ರದಾಯಿಕ ಆದರೆ ಹೆಚ್ಚು ಪರಿಣಾಮಕಾರಿ; ಟೀಮ್​ ಇಂಡಿಯಾ ಆಟಗಾರನನ್ನು ಹಾಡಿ ಹೊಗಳಿದ ಮಾಜಿ ಕ್ರಿಕೆಟಿಗ
ಸಾನಿಯಾ ಜತೆಯೊಂದಿಗೆ ವಿಚ್ಛೇದನ ಪಡೆದುಕೊಳ್ಳುವ ಮೂಲಕ ತನ್ನ ಮೂರನೇ ಪತ್ನಿ, ಲಾಲಿವುಡ್​ ನಟಿ ಸನಾ ಅವರೊಟ್ಟಿಗೆ ಈದ್​ ಮಿಲಾದ್​ ಹಬ್ಬ ಆಚರಿಸಿದ ಶೋಯಿಬ್​, ಹೆಂಡತಿಯೊಂದಿಗಿರುವ ಹಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡರು. ಇದನ್ನು ನೋಡಿದ ನೆಟ್ಟಿಗರು, ಪಾಕ್​ನ ಮಾಜಿ ಕ್ರಿಕೆಟಿಗನಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.
ತಮ್ಮಿಬ್ಬರಿಗೆ ಜನಿಸಿದ ಪುತ್ರ ಇರ್ಜಾನ್​ ಮಿರ್ಜಾ ಮಲಿಕ್​ನನ್ನು ಪ್ರಸ್ತುತ ಸಾನಿಯಾ ಮತ್ತು ಶೋಯಿಬ್​ ಸಹ-ಪೋಷಕರಾಗಿ ಆರೈಕೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈದ್​ ಮಿಲಾದ್​ ಹಬ್ಬವನ್ನು ಮೆಕ್ಕಾದಲ್ಲಿ ಸಂಭ್ರಮಿಸಿದ ಸಾನಿಯಾ, ಹಜ್ ಯಾತ್ರೆಯನ್ನು ಕೂಡ ಕೈಗೊಂಡರು. ಈ ವೇಳೆ ಪುತ್ರ ಇರ್ಜಾನ್​, ಮಿರ್ಜಾ ಅವರ ತಾಯಿಯೊಂದಿಗೆ ಹಬ್ಬವನ್ನು ಆಚರಿಸಿದರು. ಇದೇ ಹಬ್ಬದ ಸಂಭ್ರಮವನ್ನು ತನ್ನ ಮನೆಯಲ್ಲಿ ಪತ್ನಿ ಸನಾ ಜತೆಗೆ ಆಚರಿಸಿದ ಶೋಯಿಬ್, ಕಳೆದ ಒಂದು ತಿಂಗಳಲ್ಲಿ​ ಮಗನೊಂದಿಗೆ ಒಂದೇ ಒಂದು ಫೋಟೋ ಕೂಡ ಹಂಚಿಕೊಂಡಿಲ್ಲ.
ಇದನ್ನೂ ಓದಿ:ರೋಟರಿ ಕ್ಲಬ್ ಮಿಡ್ ಟೌನ್ ಸಂಸ್ಥೆಯಿಂದ:ಪ್ಲಾಸ್ಟಿಕ್ ಮರುಬಳಕೆಯ 3 ಬುಟ್ಟಿಗಳ ಅಳವಡಿಕೆ
ಹಬ್ಬದಲ್ಲಿ ಮೂರನೇ ಹೆಂಡತಿಯೊಂದಿಗೆ ಫೋಟೋ ಹಂಚಿಕೊಂಡು, ಖುಷಿ ವ್ಯಕ್ತಪಡಿಸಿದ ಶೋಯಿಬ್​ ವಿರುದ್ಧ ಕಿಡಿಕಾರಿದ ನೆಟ್ಟಿಗರು, ಪತ್ನಿ ಮೇಲಿರುವ ಪ್ರೀತಿ, ಕಾಳಜಿ ಮಗನ ಮೇಲೂ ಇರಲಿ. ಪುತ್ರನ ಜತೆಗೆ ಹಬ್ಬವನ್ನು ಸಂಭ್ರಮಿಸದೆ, ಒಂದೇ ಒಂದು ಫೋಟೋ ಕೂಡ ಹಂಚಿಕೊಳ್ಳದೆ, ಆತನನ್ನು ಕಡೆಗಣಿಸಿರುವ ನಿಮಗೆ ನಾಚಿಕೆಯಾಗಬೇಕು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಕಿಡಿಕಾರಿದ್ದಾರೆ,(ಏಜೆನ್ಸೀಸ್).
ನಾಯಕನಾಗಿ ನೀನು ಮಾಡಿದ್ದೇನೂ ಇಲ್ಲ! ಬಾಬರ್ ಆಜಂ ನಿವೃತ್ತಿಗೆ ಒತ್ತಾಯಿಸಿದ ಪಾಕ್​ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
