ಮುಂಬೈ:ಡ್ರಗ್ಸ್​ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದಂತೆ ‘ಡಿಪ್ರೆಷನ್​’ಗೆ ಹೋಗಿದ್ದ ಬಾಲಿವುಡ್​ನಲ್ಲಿ ಆ ಸಂಬಂಧ ಬಹಳಷ್ಟು ಚರ್ಚೆಗಳು ಆಗಲಾರಂಭಿಸಿವೆ. ಮಾತ್ರವಲ್ಲ, ದೀಪಿಕಾ ಜತೆ ಇನ್ನೂ ಕೆಲವು ನಟಿಯರ ಹೆಸರುಗಳೂ ಹರಿದಾಡಲಾರಂಭಿಸಿವೆ.
ಈ ಮಧ್ಯೆ ‘ರೆಹನಾ ಹೈ ತೇರಾ ದಿಲ್​ ಮೇ’ ಖ್ಯಾತಿಯ ನಟಿ ದಿಯಾ ಮಿರ್ಜಾ ಹೆಸರು ಕೂಡ ಕೇಳಿ ಬಂದಿದೆ. ಮಾಧ್ಯಮವೊಂದರಲ್ಲಿ ಈ ಬಗ್ಗೆ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ದಿಯಾ ಮಿರ್ಜಾ ಇನ್​ಸ್ಟಾಗ್ರಾಮ್​ನಲ್ಲಿ ಪ್ರತಿಕ್ರಿಯಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.
https://www.instagram.com/p/CFcH1mXjHr0/?utm_source=ig_web_copy_link
“ಅವೆಲ್ಲ ಸುಳ್ಳು, ಆಧಾರರಹಿತ. ಹಾಗೆಲ್ಲ ಸುಮ್ಮನೆ ಸುದ್ದಿ ಮಾಡಿದರೆ ನನ್ನ ಕರಿಯರ್​ಗೆ ಧಕ್ಕೆಯಾಗುತ್ತದೆ. ನಾನು ನನ್ನ ಜೀವನದಲ್ಲಿ ಮಾದಕವಸ್ತುಗಳನ್ನು ಯಾವುದೇ ರೂಪದಲ್ಲೂ ಬಳಸಿಲ್ಲ..” ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕೆಲವರು ಅವರಿಗೆ ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಎಲ್ಲ ನಾಟಕ ಎಂದು ಕಾಲೆಳೆದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
