ನವದೆಹಲಿ:ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕಾಗಿ ಎರಡು ಅತ್ಯಾಧುನಿಕ ಬಿ777 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಬೋಯಿಂಗ್​ ಸಂಸ್ಥೆ ನಿರ್ಮಿಸಿರುವ ಈ ವಿಮಾನಗಳು ಸೆಪ್ಟೆಂಬರ್​ನಲ್ಲಿ ಭಾರತದ ಏರ್​ ಇಂಡಿಯಾ ಸಂಸ್ಥೆಗೆ ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ.
ಅತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ಬಳಸಲಾಗುವ ಈ ವಿಮಾನಗಳನ್ನು ಈ ವರ್ಷದ ಜುಲೈನಲ್ಲೇ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಇದರ ಹಸ್ತಾಂತರದಲ್ಲಿ ವಿಳಂಬವಾಗಿದೆ.
ವಾಯುಪಡೆ ಯೋಧರ ಚಾಲನೆ:ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಸೇರಿ ಅತಿಗಣ್ಯರ ಓಡಾಟಕ್ಕಾಗಿ ಸದ್ಯ ಏರ್​ಇಂಡಿಯಾದ ಬಿ747 ವಿಮಾನಗಳನ್ನು ಬಳಸಲಾಗುತ್ತದೆ. ಈ ವಿಮಾನಗಳನ್ನು ಏರ್​ಇಂಡಿಯಾ ಪೈಲಟ್​ಗಳೇ ಚಾಲನೆ ಮಾಡುತ್ತಿದ್ದರು. ಏರ್​ ಇಂಡಿಯಾ ಒನ್​ ಎಂಬ ಕರೆ ಸಂಜ್ಞೆ (Call Sign) ಹೊಂದಿರುವ ಈ ವಿಮಾನವನ್ನು ಏರ್​ಇಂಡಿಯಾದ ಉಪಸಂಸ್ಥೆ ಏರ್​ ಇಂಡಿಯಾ ಇಂಜಿನಿಯರಿಂಗ್​ ಸರ್ವೀಸಸ್​ ಲಿಮಿಟೆಡ್​ (ಎಐಇಎಸ್​ಎಲ್​) ನಿರ್ವಹಣೆ ಮಾಡುತ್ತಿತ್ತು. ಅತಿಗಣ್ಯ ವ್ಯಕ್ತಿಗಳು ಬಳಸದಿದ್ದಾಗ ಈ ವಿಮಾನಗಳನ್ನು ವಾಣಿಜ್ಯ ಸಂಚಾರಕ್ಕಾಗಿ ಏರ್​ ಇಂಡಿಯಾ ಸಂಸ್ಥೆ ಬಳಸುತ್ತಿತ್ತು.
ಇದನ್ನೂ ಓದಿ:ಮತ್ತೆ ಏರಿಕೆಯಾಯಿತು ಪೆಟ್ರೋಲ್ ದರ: ನಿತ್ಯ ಪರಿಷ್ಕರಣೆ ನಿಯಮ ಮರುಜಾರಿ
ಆದರೆ ಇದೀಗ ಖರೀದಿಸಲಾಗುತ್ತಿರುವ ಎರಡು ಬಿ777 ವಿಮಾನಗಳನ್ನು ವಾಯುಪಡೆಯ ಪೈಲಟ್​ಗಳೇ ಚಾಲನೆ ಮಾಡಲಿದ್ದಾರೆ. ಇವುಗಳ ನಿರ್ವಹಣೆಯ ಜವಾಬ್ದಾರಿ ಮಾತ್ರ ಎಐಇಎಸ್​ಎಲ್​ನದ್ದಾಗಿರುತ್ತದೆ. ಇವು ಕೇವಲ ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಸೀಮಿತಗೊಳ್ಳಲಿವೆ.
ಕ್ಷಿಪಣಿ ನಿರೋಧಕ ವ್ಯವಸ್ಥೆ:ಅತಿಗಣ್ಯರ ಓಡಾಟಕ್ಕಾಗಿ ಖರೀದಿಸಲಾಗುತ್ತಿರುವ ಎರಡು ಬಿ777 ವಿಮಾನದಲ್ಲಿ ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್​ (ಎಲ್​ಎಐಆರ್​ಸಿಎಂ) ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸ್ವಯಂರಕ್ಷಣ ಸೂಟ್​ಗಳನ್ನೂ ಇದು ಒಳಗೊಂಡಿದೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್​ಎಐಆರ್​ಸಿಎಂ ವ್ಯವಸ್ಥೆಯನ್ನು 1,434.72 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ.
ನೀಲಿಚಿತ್ರಗಳಲ್ಲಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಸೂಪರ್​ಕಾರ್​ ಚಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
