ನವದೆಹಲಿ:ವಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಸೇವಾವಧಿಯನ್ನು ಈಗ ಇರುವ ಎರಡು ವರ್ಷಗಳಿಂದ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸುವ ಎರಡು ಮಸೂದೆಗಳನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಈ ಮಧ್ಯೆ, ರಾಜ್ಯಸಭೆಯಲ್ಲಿ 12 ಸಂಸದರ ಅಮಾನತು ವಿಷಯವಾಗಿ ಗದ್ದಲ ಮುಂದುವರಿದ ಕಾರಣ ಎರಡು ಸಾರಿ ಅಲ್ಪಾವಧಿಗೆ ಮುಂದಕ್ಕೆ ಹಾಕಲಾದ ಕಲಾಪವನ್ನು ಕಡೆಗೆ ಸೋಮವಾರಕ್ಕೆ ಮುಂದೂಡಲಾಯಿತು.
ಸಿಬಿಐ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಕ್ರಮವಾಗಿ ಗರಿಷ್ಠ ಐದು ವರ್ಷಗಳಿಗೆ ಸೀಮಿತಗೊಳಿಸುವ ಸಲುವಾಗಿ ಕೇಂದ್ರ ವಿಚಕ್ಷಣಾ ಆಯೋಗ (ತಿದ್ದುಪಡಿ) ಮಸೂದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಡಿಸಿದರು. ಕಳೆದ ತಿಂಗಳಷ್ಟೆ ಈ ಕುರಿತ ಸುಗ್ರೀವಾಜ್ಞೆಯನ್ನು ಸರ್ಕಾರ ಜಾರಿ ಮಾಡಿತ್ತು. ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಟಿಎಂಸಿಯ ಸೌಗತ್ ರಾಯ್, ನಿವೃತ್ತಿ ವಯಸ್ಸಿನಲ್ಲಿರುವ ಅಧಿಕಾರಿಗಳಿಗೆ ಅಪರೂಪದ ಮತ್ತು ಅಸಾಧಾರಣ ಕೇಸುಗಳಿದ್ದ ಸಂದರ್ಭದಲ್ಲಿ ಮಾತ್ರ ಸೇವಾವಧಿ ವಿಸ್ತರಣೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮಸೂದೆ ಇದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
153 ಖಾಸಗಿ ಮಸೂದೆ ಮಂಡನೆ:ಲೋಕಸಭೆಯಲ್ಲಿ ಸದಸ್ಯರ 153 ಖಾಸಗಿ ಮಸೂದೆಗಳು ಮಂಡನೆಯಾಗಿವೆ. ಗುಂಪು ಹಲ್ಲೆಯಿಂದ ರಕ್ಷಣೆ, ಶಾಲಾ ಪಠ್ಯದಲ್ಲಿ ಕಡ್ಡಾಯವಾಗಿ ಭಗವದ್ಗೀತೆ ಸೇರ್ಪಡೆ, ಬೇಹುಗಾರಿಕಾ ಸಂಸ್ಥೆಗಳ ಕಾರ್ಯವಿಧಾನ ನಿಯಂತ್ರಣ ಇನ್ನಿತರ ವಿಷಯಗಳ ಮೇಲೆ ಸದಸ್ಯರು ಖಾಸಗಿ ವಿಧೇಯಕಗಳನ್ನು ಮಂಡಿಸಿದ್ದಾರೆ.
ಭಾರಿ ವಿರೋಧ:ಸಂವಿಧಾನದ ಪೀಠಿಕೆಗೆ (preamble) ತಿದ್ದುಪಡಿ ತರಬೇಕೆಂಬ ಬೇಡಿಕೆ ಇಟ್ಟು ಬಿಜೆಪಿ ಸಂಸದ ಕೆ.ಜೆ. ಅಲ್ಪೋನ್ಸ್ ಮಂಡಿಸಿದ ಖಾಸಗಿ ಮಸೂದೆಗೆ ವಿಪಕ್ಷ ಸಂಸದರು ಭಾರಿ ವಿರೋಧವೊಡಿದರು. ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಮಸೂದೆ ಮಂಡಿಸಲು ಆರಂಭದಲ್ಲಿ ಅನುಮತಿ ನೀಡಿದ್ದರು. ಆದರೆ ಆರ್​ಜೆಡಿ ಸಂಸದ ಮನೋಜ್ ಝಾ ಮತ್ತು ಎಂಡಿಎಂಕೆ ಸಂಸದ ವೈಕೋ ವಿರೋಧಿಸಿದರು.
ಹೆಚ್ಚುವರಿ ವೆಚ್ಚಕ್ಕೆ ಒಪ್ಪಿಗೆಗೆ ಕೋರಿಕೆ:ಪ್ರಸಕ್ತ ಹಣಕಾಸು ವರ್ಷದಲ್ಲಿ 3.73 ಲಕ್ಷ ಕೋಟಿ ರೂ.ಗೂ ಅಧಿಕ ಹೆಚ್ಚುವರಿ ವೆಚ್ಚಕ್ಕಾಗಿ ಶುಕ್ರವಾರ ಸಂಸತ್ತಿನ ಅನುಮೋದನೆಯನ್ನು ಸರ್ಕಾರ ಕೋರಿದೆ. ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ 2ನೇ ಹಂತದ ಪೂರಕ ಅನುದಾನಗಳ ಬೇಡಿಕೆ ಮಂಡಿಸಿದರು.
ಜಿಎಚ್​ಐ ನೈಜ ಅಂಶ ಪ್ರತಿಫಲಿಸಿಲ್ಲ:ಜಾಗತಿಕ ಹಸಿವಿನ ಸೂಚ್ಯಂಕವು (ಜಿಎಚ್​ಐ)ಭಾರತ ವಾಸ್ತವದ ಚಿತ್ರಣವನ್ನು ಪ್ರತಿಫಲಿಸುವುದಿಲ್ಲ. ಏಕೆಂದರೆ ಜಿಎಚ್​ಐ ನಾಲ್ಕು ಅಂಶಗಳನ್ನು ಇರಿಸಿಕೊಂಡು ಸಮೀಕ್ಷೆ ನಡೆಸಿದೆ. ಬೇರೆ ಅಂಶಗಳನ್ನು ಪರಿಗಣಿಸಿಲ್ಲ ಎಂದು ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಸಾಧಿ್ವ ನಿರಂಜನ ಜ್ಯೋತಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಹಸಿವೆ ಪ್ರಮಾಣ ಗಣನೀಯವಾಗಿ ಇಲ್ಲವಾಗಿದೆ. 2008ರಲ್ಲಿ 38.8 ಅಂಶ ಇದ್ದ ಪ್ರಮಾಣ, 2021ರಲ್ಲಿ 27.5ಕ್ಕೆ ಇಳಿದಿದೆ. ಈ ವಿಷಯದಲ್ಲಿ ಸುಸ್ಥಿರ ಪ್ರಗತಿ ಕಾಣುತ್ತಿದೆ ಎಂದಿದ್ದಾರೆ. ಈ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನದಲ್ಲಿ ಇದೆ. ನೇಪಾಳ, ಬಾಂಗ್ಲಾದೇಶಗಳು 76 ಮತ್ತು ಪಾಕ್ 92ನೇ ಸ್ಥಾನದಲ್ಲಿ ಇದೆ.
ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + two =
Remember me
