ತಿತ್ಲಗಢ:ತಂದೆಯೊಬ್ಬ ತನ್ನ 5 ದಿನದ ಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿರುವ ದಾರುಣ ಘಟನೆ ಒಡಿಶಾದ ತಿತ್ಲಗಢ ಜಿಲ್ಲೆಯಲ್ಲಿ ನಡೆದಿದೆ.ಸಂತೋಷ್ ಮತ್ತು ಪುಷ್ಪಾ ಪಟೇಲ್ ದಂಪತಿಗಳಿಗೆ ಈಗಾಗಲೇ ಮೂವರು ಮಕ್ಕಳಿದ್ದರು. ಇದು ಅವರ ನಾಲ್ಕನೇ ಮಗುವಾಗಿತ್ತು. ಕುಟುಂಬವು ತೀರಾ ಬಡವರಾಗಿದ್ದರಿಂದ ಮನೆಯಲ್ಲಿ ಆಹಾರದ ಕೊರತೆ ಇತ್ತು. ಹೀಗಾಗಿ ನವಜಾತ ಗಂಡು ಶಿಶುವಿನ ಆರೈಕೆ ಮಾಡಲು ಅಸಾಧ್ಯ ಎನಿಸಿದ ನಂತರ ಮಗುವಿನ ಮಾರಾಟ ಮಾಡಲು ಮುಂದಾಗಿದ್ದರು.ಇದನ್ನೂ ಓದಿ:ನರ್ಸ್ ವೇಷದಲ್ಲಿ ಗರ್ಭಿಣಿ ಹತ್ಯೆ ಯತ್ನ ಪ್ರಕರಣ: ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ನೀಡಿದ ಆರೋಪಿಈ ವೇಳೆ, ರಂಜಾನ್ ಸಿಖ್ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಿ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಸಂತೋಷ್ ಹೇಳಿಕೊಂಡಿದ್ದು, ಮಗುವಿನ ಮಾರಾಟದ ವಿಷಯವನ್ನು ಆತನಿಗೆ ತಿಳಿಸಿದ್ದಾನೆ, ಕೂಡಲೇ ಮಧ್ಯವರ್ತಿಯು ಕಲಹಂಡಿ ಜಿಲ್ಲೆಯಲ್ಲಿ ರಾಜಾ ಎಂಬ ವ್ಯಕ್ತಿಗೆ ಗಂಡು ಮಗುವನ್ನು ಮಾರಾಟ ಮಾಡಿ 2.5 ಲಕ್ಷ ರೂ.ವನ್ನು ಸಂತೋಷ್​ಗೆ ನೀಡಿದ್ದಾನೆ.ಘಟನೆ ಸಂಬಂಧ ಪೊಲೀಸರು ರಂಜಾನ್ ವಾಸವಿದ್ದ ಮನೆಯ ನೆರೆಹೊರೆಯವರಿಂದ ಮಾಹಿತಿ ಪಡೆದ ನಂತರ ಆತನನ್ನು ಮತ್ತು ಮಗುವಿನ ತಂದೆ ಸಂತೋಷ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಂದೆಡೆ, ಮಾರಾಟವಾಗಿದ್ದ ನವಜಾತ ಶಿಶುವನ್ನು ರಕ್ಷಿಸಲು ಪೊಲೀಸ್ ತಂಡ ಕಾಳಹಂಡಿಗೆ ತೆರಳಿದೆ ಎಂದು ಅಧಿಕಾರಿಕಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + one =
Remember me
