ಹೈದರಾಬಾದ್​:ಪ್ರೇಮ ವಿವಾಹವನ್ನು ಪಾಲಕರು ಒಪ್ಪದಿದ್ದಕ್ಕೆ ಮನನೊಂದು ವಧುವೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಸೋಮವಾರ ವರದಿಯಾಗಿದೆ.
ಶ್ರೀಲೇಖಾ (20) ಮೃತ ದುರ್ದೈವಿ. ಈಕೆ ಜಂಗಾಂವ್ ಜಿಲ್ಲೆಯ ಕೊಡಕಂಡ್ಲಾ ಮಂಡಲದ ಸೆವೆನ್​ ನ್ಯೂ ವಿಲೇಜಸ್​ ನಿವಾಸಿ. ತಮ್ಮದೇ ಗ್ರಾಮದ ಮನೋಹರ್​ (20) ಎಂಬ ಯುವಕನನ್ನು ಶ್ರೀಲೇಖಾ ಪ್ರೀತಿಸುತ್ತಿದ್ದಳು. ಡಿಸೆಂಬರ್​ 16ರಂದು ಇಬ್ಬರು ಮನೆಬಿಟ್ಟು ಹೈದರಾಬಾದ್​ಗೆ ಪರಾರಿಯಾಗಿದ್ದರು.
ಇದನ್ನೂ ಓದಿ:ಮದುವೆಯಾಗಿ 3 ವರ್ಷವಾದರೂ ಹೆಂಡತಿ ಗರ್ಭವತಿ ಆಗಲಿಲ್ಲವೆಂದೇ ಬೇಸರಗೊಂಡ ಗಂಡ ಹೀಗಾ ಮಾಡೋದು?!
ಡಿ. 22ರಂದು ಹೈದರಾಬಾದ್​ನಲ್ಲೆ ಮದುವೆಯಾದ ಪ್ರೇಮಿಗಳು ತಮ್ಮ ಹಳ್ಳಿಗೆ ಹಿಂತಿರುಗಲು ರಕ್ಷಣೆಗಾಗಿ ಜನಗಮಾ ಪೊಲೀಸರ ನೆರವು ಕೇಳಿದ್ದರು. ಈ ವಿಚಾರವನ್ನು ಪೊಲೀಸರು ಎರಡು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಆದರೂ ಇಬ್ಬರ ಮದುವೆಯನ್ನು ಒಪ್ಪಿಕೊಳ್ಳಲು ಪಾಲಕರು ತಯಾರಿರಲಿಲ್ಲ.
ಇದರ ನುಡವೆ ಗಲಾಟೆ ನಡೆಯಬಹುದೆಂಬದ ಸೂಚನೆಯಿಂದ ಶ್ರೀಲೇಖಾಳನ್ನು ಪೊಲೀಸರು ರಕ್ಷಣೆಯೊಂದಿಗೆ ಜನಗಮಾ ಸಖಿ ಕೇಂದ್ರಕ್ಕೆ ಕರೆದೊಯ್ದಿದ್ದರು. ಇತ್ತ ಪಾಲಕರು ಮದುವೆ ನಿರಾಕರಿಸಿದ್ದರಿಂದ ತುಂಬಾ ಮನನೊಂದಿದ್ದ ಶ್ರೀಲೇಖಾ ಸಖಿ ಕೇಂದ್ರದ ಶೌಚಗೃಹದಲ್ಲೇ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ
ಬೇಡ ಎನ್ನುವ ಮೂಲಕ ಸಮೋಸಾಗೆ ಬೇಜಾರು ಮಾಡ್ಬೇಡಿ: ವೈರಲ್​​ ಆಯ್ತು ಚೆನ್ನೈ ರೆಸ್ಟೋರೆಂಟ್​ ರಶೀದಿ!

ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​

VIDEO| ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ: ಕಣ್ಣಂಚಲಿ ನೀರು ತರಿಸುವ ವೈರಲ್​ ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
