ಭೋಪಾಲ್​:ಮದುವೆಯಾದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಪತಿಯ ನೋವಿನಲ್ಲೇ ನವವಧುವೊಬ್ಬಳು ಶಾಪಿಂಗ್​ ಮಾಲ್​ನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಗ್ಗೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೆಡಿಕಲ್​ ವಿದ್ಯಾರ್ಥಿನಿಯಾಗಿರುವ ನವವಧು ಬದುಕುಳಿದಿದ್ದು, ಗಂಭೀರ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನವಜೋಡಿಗೆ ಹದಿನೈದು ದಿನಗಳ ಹಿಂದಷ್ಟೇ ಮದುವೆಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ವಧುವಿನ ಪತಿ ಸುಭಮ್​ ಖಾಂದೇಲ್​ವಾಲ್​ ಉಜ್ಜೈನ್​ ಜಿಲ್ಲೆಯಲ್ಲಿ ಗುತ್ತಿಗೆದಾರನಾಗಿದ್ದ. ಬುಧವಾರವಷ್ಟೇ ಆತ್ಮಹತ್ಯೆ ಮಾಡಿಕೊಂಡ ಆತ ತನ್ನ ಸಾವಿಗೆ ಸ್ಥಳೀಯ ಮುನ್ಸಿಪಲ್​ ಕಾರ್ಪೊರೇಷನ್​ನ​ ಇಬ್ಬರು ಇಂಜಿನಿಯರ್​ಗಳು ಕಾರಣ ಎಂದು ಡೆತ್​ನೋಟ್​ ಬರೆದಿಟ್ಟಿದ್ದ.
ಇದನ್ನೂ ಓದಿ:ಕೃಷಿಕರೊಬ್ಬರ ಅಡಕೆ ಮಾರಾಟ ಹಣ ದರೋಡೆ ಪ್ರಕರಣ: ಇನ್ಸ್​ಪೆಕ್ಟರ್​ಗೆ ಪೊಲೀಸ್​ ಆಯುಕ್ತರ ಶಾಕ್​!
ಉಜ್ಜೈನ್​ನ ಖಾಸಗಿ ಕಾಲೇಜೊಂದರಲ್ಲಿ ಮೆಡಿಸಿನ್​ ಓದುತ್ತಿರುವ ನವವಧು ಸಾನಿಯಾ ಖಾಂದೇಲ್​ವಾಲ್, ಪತಿ ಕಳೆದುಕೊಂಡ ದುಃಖದಿಂದಲೇ ಶಾಪಿಂಗ್​ ಮಾಲ್​ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಾಯಗೊಂಡಿರುವ ಆಕೆಗೆ ಇಂದೋರ್​ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾನಿಯಾಳ ತಲೆ ಮತ್ತು ಕಾಲಿಗೆ ಗಾಯಗಳಾಗಿದ್ದು, ವೈದ್ಯರ ನಿಗಾದಲ್ಲಿ ಇಡಲಾಗಿದೆ.
ಹಣ್ಣಿನ ಜ್ಯೂಸ್​ ತರುವುದಾಗಿ ತಂದೆಗೆ ಹೇಳಿ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟ ಸಾನಿಯಾ ನೇರವಾಗಿ ವಿಜಯನಗರದಲ್ಲಿರುವ ಶಾಪಿಂಗ್​ ಮಾಲ್​ ಒಂದಕ್ಕೆ ತೆರಳಿದ್ದಾಳೆ. ಬಳಿಕ ಮಾಲ್​ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಮಾಲ್​ನ ಉದ್ಯೋಗಿಗಳು ಎಂವೈ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ನಾನು ನನ್ನ ಗಂಡನೊಟ್ಟಿಗೆ ಇರಬೇಕೆಂದು ಪತ್ರವೊಂದನ್ನು ಸಾನಿಯಾ ಬರೆದಿದ್ದಳು. ಪತಿ ಇಲ್ಲದ ನೋವಿನಲ್ಲೇ ಆತ್ಮಹತ್ಯೆಗೆ ನಿರ್ಧರಿಸಿದ್ದಳು ಎನ್ನಲಾಗಿದೆ. ಗಂಡನ ಸಾವಿನ ಬೆನ್ನಲ್ಲೇ ಸಾನಿಯಾ ಸಹ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಇಂದೋರ್​ ಪೊಲೀಸರು ತಕ್ಷಣವೇ ಸುಭಮ್​ ಖಾಂದೇಲ್​ವಾಲ್​ಗೆ ಕಿರುಕುಳ ನೀಡಿದ ಇಂಜಿನಿಯರ್​ಗಳಾದ ನರೇಶ್​ ಜೈನ್​ ಮತ್ತು ಸಂಜಯ್​ ಖುಜೆನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಮಾಸ್ಕ್​ ಧರಿಸಿ ಬಂದರು, ಸ್ಯಾನಿಟೈಸರ್​ ಹಾಕಿಕೊಂಡರು… ಆಮೇಲೆ ಏನು ಮಾಡಿದ್ರು ನೋಡಿ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 + 17 =
Remember me
