ಬೆಂಗಳೂರು:ಕಳೆದ ಕೆಲ ದಿನಗಳಿಂದ ಎರಡು ಸಾವಿರದಷ್ಟಿರುತ್ತಿದ್ದ ಕರೊನಾ ಸೋಂಕಿತರ ಸಂಖ್ಯೆ ಈಗ ಮೂರು ಸಾವಿರ ದಾಟಿದೆ. ಕಳೆದ 24 ತಾಸುಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು ಬರೋಬ್ಬರಿ 3,176. ಜತೆಗೆ, ಒಟ್ಟು ಸೋಂಕಿತರ ಸಂಖ್ಯೆ ಅರ್ಧ ಲಸಕ್ಷ ಸನಿಹಕ್ಕೆ ಬಂದಿದೆ.
ಚೇತರಿಕೆಯ ಗಾಳಿ ಬೀಸುತ್ತಿದೆ ಎನ್ನುತ್ತಿರುವಾಗಲೇ ಕೋವಿಡ್​ ರೋಗಿಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದಾರೆ. 1,076 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟಾರೆಯಾಗಿ ಚೇತರಿಸಿಕೊಂಡವರು 18,466 ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ (ಜು.15) ತಿಳಿಸಿದೆ.
ಇದನ್ನೂ ಓದಿ;ರಾಜ್ಯದಲ್ಲಿ ಮಂಗಳವಾರದ (ಜು.14) ಕೋವಿಡ್​​ ಅಂಕಿ-ಅಂಶ
ಇಂದೂ ಕೂಡ ಕೋವಿಡ್​ನಿಂದ ರಾಜ್ಯಾದ್ಯಂತ ಮೃತಪಟ್ಟವರ ಸಂಖ್ಯೆ 87. ಈವರೆಗೆ ಒಟ್ಟಾರೆ ಮೃತಪಟ್ಟವರ ಸಂಖ್ಯೆ 928ಕ್ಕೆ ತಲುಪಿದಂತಾಗಿದೆ. ಇನ್ನೊಂದು ದಿನಕ್ಕೆ ಸಾವಿರ ತಲುಪುವ ಭೀತಿ ಎದುರಾಗಿದೆ. ರಾಜ್ಯದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ 27,853 ಆಗಿದೆ.
ರಾಜಧಾನಿಯಲ್ಲಿ ಒಟ್ಟು 1,975 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 22,944 ಆಗಿದೆ. ಒಟ್ಟು 87 ಸಾವುಗಳ ಪೈಕಿ ಬೆಂಗಳೂರಿನ ಪಾಲು 60. ಜತೆಗೆ, ಈವರೆಗೆ ರಾಜಧಾನಿಯಲ್ಲಿ ಮೃತಪಟ್ಟವರು ಸಂಖ್ಯೆ 437ಕ್ಕೆ ಏರಿದೆ.
ವಿವಿಧ ಜಿಲ್ಲೆಗಳಲ್ಲಿ ಕೋವಿಡ್​ ಅಂಕಿ-ಅಂಶ ಇಲ್ಲಿದೆ……..

ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
