ಬೆಂಗಳೂರು:ಕರೊನಾ ಸೋಂಕಿನ ನಾಗಾಲೋಟಕ್ಕೆ ಕಡಿವಾಣವೇ ಬೀಳುತ್ತಿಲ್ಲ. ನಿನ್ನೆ ಒಂದೇ ದಿನ 3 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದರೆ, ಇಂದು ಆ ದಾಖಲೆಯನ್ನು ಮೀರಿ ಕಳೆದ 24 ತಾಸಿನಲ್ಲಿ ಕೋವಿಡ್​ಗೆ ಒಳಗಾದವರ ಸಂಖ್ಯೆ 4,169 ಆಗಿದೆ. ಈ ಮೂಲಕ ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ ಅರ್ದ ಲಕ್ಷ ದಾಟಿದೆ. ಒಟ್ಟಾರೆ ಪ್ರಕರಣಗಳು 51,422ಕ್ಕೆ ತಲುಪಿದೆ.
ಸೋಂಕಿತರ ಸಂಖ್ಯೆಯಷ್ಟೇ ಅಲ್ಲ, ಮೃತಪಟ್ಟವರ ಸಂಖ್ಯೆಯೂ ಶತಕವನ್ನು ದಾಟಿದೆ. ಒಂದೇ ದಿನ 104 ಜನರು ಮೃತಪಟ್ಟಿದ್ದಾರೆ. ಅಲ್ಲಿಗೆ ಕರೊನಾದಿಂದಾಗಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಸಾವಿರದ ಗಡಿ ದಾಟಿ 1,032ಕ್ಕೆ ಏರಿದೆ. ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ 30,655 ಆಗಿದೆ. ಚೇತರಿಕೆಯ ಪ್ರಮಾಣ ಶೇ.38.37 ಆಗಿದೆ. ಮರಣ ಪ್ರಮಾಣ ಶೇ.2 ಆಗಿದೆ.
ಇದನ್ನೂ ಓದಿ;ರಾಜ್ಯದಲ್ಲಿ ಜು.15ರ ಕೋವಿಡ್​ ಅಂಕಿ- ಅಂಶ
ಕಳೆದ 24 ತಾಸುಗಳಲ್ಲಿ 1,263 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟಾರೆಯಾಗಿ ಚೇತರಿಸಿಕೊಂಡವರು 19,729 ಮಂದಿ ಎಮದು ಗುರುವಾರ ವೈದ್ಯಕೀಯ ಶಿಕ್ಷಣ ಸಚಿವ ಟ್ವಿಟರ್​ ಮೂಲಕ ಮಾಹಿತಿ ನೀಡಿದ್ದಾರೆ.
ಇನ್ನೊಂದು ಮಾಹಿತಿ ಎಂದರೆ, 23,451 ಜನರ ಗಂಟಲಿನ ಮಾದರಿಗಳನ್ನು ಇಂದು ಪರೀಕ್ಷೆ ಮಾಡಲಾಗಿದೆ. ಈವರೆಗೆ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 9,25,477.
ಇದನ್ನೂ ಓದಿ;ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!
ಇನ್ನು ರಾಜಧಾನಿಯಲ್ಲಿ 2,344 ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಪ್ರಮಾಣ 25,288 ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 70 ಜನರು ಇಂದು ಮೃತಪಟ್ಟಿದ್ದಾರೆ. ನಿನ್ನೆ ಈ ಸಂಖ್ಯೆ60 ಆಗಿತ್ತು. ಅಲ್ಲಿಗೆ ಮರಣ ಹಾಗೂ ಸೋಂಕು ಎರಡೂ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯಕ್ಕೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಕಡಿಮೆ.
ಜಿಲ್ಲೆಗಳಲ್ಲಿ ಇಂದಿನ ಕೋವಿಡ್​ ವಿವರ

ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 20 =
Remember me
