ನವದೆಹಲಿ:ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿ ಪವನ್​ ಕುಮಾರ್​ ಗುಪ್ತಾ ಪರ ವಕೀಲ ಎ.ಪಿ. ಸಿಂಗ್​ಗೆ ನಕಲಿ ದಾಖಲೆ ಸಲ್ಲಿಸಿದ್ದಕ್ಕಾಗಿ ದೆಹಲಿ ಬಾರ್​ ಕೌನ್ಸಿಲ್​ ನೋಟಿಸ್​ ನೀಡಿದೆ.
ವಕೀಲ ಎ.ಪಿ. ಸಿಂಗ್​ಗೆ ನೀಡಿರುವ ನೋಟಿಸ್​ ಎರಡು ವಾರಗಳಲ್ಲಿ ಉತ್ತರಿಸಲು ಸೂಚಿಸಲಾಗಿದೆ.
ಪವನ್​ ಗುಪ್ತಾ ಪ್ರಕರಣ ನಡೆದ ಸಮಯದಲ್ಲಿ ಅಪ್ರಾಪ್ತ ಎಂಬ ಹೇಳಿಕೆಯನ್ನು ದೆಹಲಿ ಹೈಕೋರ್ಟ್​ ತಳ್ಳಿ ಹಾಕಿತ್ತು. ಅಲ್ಲದೆ ಈ ಸಂಬಂಧ ನಕಲಿ ದಾಖಲೆ ಸಲ್ಲಿಸಿದ್ದ ವಕೀಲ ಎ.ಪಿ. ಸಿಂಗ್​ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಜತೆಗೆ ಕೋರ್ಟ್​ಗೆ ಗೈರಾಗುವ ವಕೀಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.
ವಕೀಲರ ಈ ನಡೆಯನ್ನು ನ್ಯಾಯಾಧೀಶ ಸುರೇಶ್​ಕುಮಾರ್​ ಕೈತ್​, ದೆಹಲಿ ಬಾರ್​ ಕೌನ್ಸಿಲ್​ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಕೀಲ ಎ.ಪಿ. ಸಿಂಗ್​ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೆ ಉದ್ದೇಶ ಪೂರ್ವಕವಾಗಿ ನಕಲಿ ಅಫಿಡವಿಟ್​ನ್ನು ಸಲ್ಲಿಸಿದ್ದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದಿತ್ತು.
ಅಪರಾಧಿ ಪವನ್​ ಗುಪ್ತಾ ಇದೇ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದಾನೆ. ಪ್ರಕರಣ ನಡೆದ ಸಮಯದಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂದು ವಾದಿಸಿದ್ದಾನೆ. ಇದರ ವಿಚಾರಣೆಯನ್ನು ಸುಪ್ರೀಂ ನಾಳೆ ( ಜನವರಿ 20) ಕೈಗೆತ್ತಿಕೊಳ್ಳಲಿದೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 4 =
Remember me
