ನವದೆಹಲಿ:ದೂರಸಂಪರ್ಕ ಇಲಾಖೆ (ಡಾಟ್​)ಗೆ ಪಾವತಿಸಬೇಕಿದ್ದ ಬಾಕಿ 10 ಸಾವಿರ ಕೋಟಿ ರೂಪಾಯಿಗಳನ್ನು ಇಂದು ಬೆಳಗ್ಗೆ ಭಾರ್ತಿ ಏರ್​ಟೆಲ್​ ಪಾವತಿಸಿದೆ.
ಖಾಸಗಿ ಸಂಸ್ಥೆಗಳು ಪಾವತಿಸಬೇಕಾದ ಬಾಕಿಯನ್ನು ವಸೂಲಿ ಮಾಡಲು ದೂರ ಸಂಪರ್ಕ ಇಲಾಖೆ ಸೂಚನೆ ನೀಡಿತ್ತು. ಅದರಲ್ಲಿ ಬಾಕಿ ಮೊತ್ತವನ್ನು ತಕ್ಷಣ ಪಾವತಿಸಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿತ್ತು.
ದೂರ ಸಂಪರ್ಕ ಇಲಾಖೆಯ ಈ ಸೂಚನೆಗೆ ಪ್ರತಿಕ್ರಿಯಿಸಿದ್ದ ಏರ್​ಟೆಲ್​, ಸಂಸ್ಥೆಯ ಸ್ವಯಂ ಮೌಲ್ಯಮಾಪನ ಕಾರ್ಯದ ನಂತರ ಬಾಕಿ ಹಣವನ್ನು ಪಾವತಿಸುವುದಾಗಿ ಹೇಳಿತ್ತು. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಒದಗಿಸುವುದಾಗಿ ಹೇಳಿಕೊಂಡಿತ್ತು.
ದೂರ ಸಂಪರ್ಕ ಇಲಾಖೆ ಕಳೆದ ಶುಕ್ರವಾರದಿಂದ ಖಾಸಗಿ ಸಂಸ್ಥೆಗಳಾದ ಭಾರ್ತಿ ಏರ್​ಟೆಲ್​, ವೋಡಾಪೋನ್​ ಐಡಿಯಗಳಿಗೆ ತಕ್ಷಣ ಹಳೆಯ ಬಾಕಿಯನ್ನು ಚುಕ್ತಗೊಳಿಸಲು ಸೂಚಿಸಿತ್ತು. ಸುಪ್ರೀಂಕೋರ್ಟ್​ನ ಕೋಪಕ್ಕೆ ತುತ್ತಾಗಿದ್ದ ಇಲಾಖೆ ಖಾಸಗಿ ಸಂಸ್ಥೆಗಳಿಗೆ ನೋಟಿಸ್​ ನೀಡಲು ಆರಂಭಿಸಿತ್ತು.
ಸೂಚನೆ ಕೊಟ್ಟಿದ್ದ ದೂರ ಸಂಪರ್ಕ ಇಲಾಖೆಗೆ ಏರ್​ಟೆಲ್​ ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರೂಪಾಯಿ ಪಾವತಿಸಲಾಗುವುದು. ನಂತರ ಮಾರ್ಚ್​ 17ರೊಳಗೆ ಉಳಿದ ಮೊತ್ತ ಪಾವತಿಸುತ್ತೇವೆ ಎಂದು ತಿಳಿಸಿತ್ತು. ಅಂದಹಾಗೆ ಏರ್​ಟೆಲ್​ ಪರವಾನಗಿ ಶುಲ್ಕ ಮತ್ತು ಸ್ಪೆಕ್ಟ್ರಮ್ ಬಳಕೆಯ ಶುಲ್ಕಗಳು ಸೇರಿ ಒಟ್ಟು 35,586 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು.
ಸೋಮವಾರ ಭಾರ್ತಿ ಏರ್‌ಟೆಲ್‌ನ ಷೇರುಗಳು ಶೇ.1.49 ಕುಸಿದವು ಬೆಳಗ್ಗೆ 11:14ಕ್ಕೆ ಏರ್‌ಟೆಲ್ ಷೇರುಗಳು ಬಿಎಸ್‌ಇಯಲ್ಲಿ ಶೇ.0.50 ಕಡಿಮೆಯಾಗಿ 556.70 ರೂಪಾಯಿವರೆಗೆ ವಹಿವಾಟು ನಡೆಸಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
