ನವದೆಹಲಿ:ಈಶಾನ್ಯ ದೆಹಲಿಯ ಚಾಂದ್​ಬಾಘ್​ ಹಿಂಸಾಚಾರದ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿ ತಾಹಿರ್​ ಹುಸೇನ್​ ಸೋದರ ಶಾ ಆಲಮ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲಿಸರು ಬೆನ್ನು ಬಿದ್ದಿರುವ ವಿಷಯ ತಿಳಿದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ.
ಆಮ್​ ಆದ್ಮಿ ಪಕ್ಷದ ಉಚ್ಚಾಟಿತ ಪಾಲಿಕೆ ಸದಸ್ಯ ತಾಹೀರ್​ ಹುಸೇನ್​ ಸಹೋದರ ಆಲಮ್​ನನ್ನು ಬಂಧಿಸಿದ ದೆಹಲಿ ಪೊಲೀಸರು, ಶಾ ಆಲಂ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಾರೆ. ದೆಹಲಿ ಕ್ರೈಂ ಬ್ರಾಂಚ್​ ಪೊಲೀಸರು ಆಲಮ್​ನನ್ನು ವಿಚಾರಣೆ ನಡೆಸುತ್ತಿದ್ದು ಅಂಕಿತ್​ ಶರ್ಮಾ ಕೊಲೆ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಚಾಂದ್​ಬಾಗ್​ನಲ್ಲಿ ಹಿಂಸಾಚಾರ ಬುಗಿಲೆದ್ದ ವೇಳೆ ಆಲಮ್​ ಅಲ್ಲಿ ಉಪಸ್ಥಿತನಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಭಾನುವಾರ (ಮಾ.08) ತಾಹೀರ್ ತಂದೆ, ಮಗ ಮತ್ತು ಕೆಲ ನೆರೆಹೊರೆಯವರನ್ನು ವಶಕ್ಕೆ ಪಡೆದಿದ್ದರು. ಇವರ ಮೇಲೆ ಈಶಾನ್ಯ ದೆಹಲಿ ಹಿಂಸಾಚಾರದ ಹಾಗೂ ಪೊಲೀಸ್ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್​ ಶರ್ಮಾ ಅವರ ಹತ್ಯೆ ಪ್ರಕರಣದಲ್ಲಿ ಭಾಗವಹಿಸಿರುವ ಆರೋಪವಿದೆ.
ತಾರಿಕ್​ ಹುಸೇನ್​, ಲಿಖಾಯತ್​, ರಿಯಾಸತ್​ ಮತ್ತು ತಾರಿಕ್​ ರಿಜ್ವಿ ಎಂಬುವವರನ್ನು ಬಂಧಿಸಿದ್ದರು. ಅಲ್ಲದೆ ತಾಹಿರ್​ ಪತ್ನಿಯನ್ನೂ ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ.
ಹಿಂಸಾಚಾರದ ವೇಳೆ ಹತ್ಯೆಯಾಗಿದ್ದ ಅಧಿಕಾರಿ ಅಂಕಿತ್​ ಶರ್ಮಾ ಪ್ರಕರಣ ಸಂಬಂಧ ಆಪ್​ ಪಕ್ಷದ ಉಚ್ಚಾಟಿತ ಕೌನ್ಸಿಲರ್​ ತಾಹಿರ್​ ಹುಸೇನ್​ನನ್ನು ಮಾರ್ಚ್​ 5ರಂದು ಪೊಲೀಸರು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಪೊಲೀಸರ ಕಣ್ತಪ್ಪಿಸಿದ್ದ ತಾಹೀರ್​, ಮುಸ್ತಾಬಾದ್‌ನ ನೆಹರೂ ವಿಹಾರ್‌ಗೆ ಓಡಿಹೋಗಿದ್ದೆ, ನ್ಯಾಯಾಲಯದಲ್ಲಿ ಶರಣಾಗಲು ಬರುವ ಮೊದಲು ಎರಡು ದಿನ ಓಖ್ಲಾದಲ್ಲಿದ್ದೆ ಎಂದು ವಿಚಾರಣೆ ವೇಳೆ ತಾಹೀರ್​ ಪೊಲೀಸರಿಗೆ ತಿಳಿಸಿದ್ದಾನೆ.
ಮೃತ ಅಧಿಕಾರಿ ಅಂಕಿತ್​ ಅವರ ತಂದೆ ರವೀಂದ್ರ ಕುಮಾರ್​ ಅವರು ತನ್ನ ಮಗನ ಸಾವಿನ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದರು. ಕೊಲೆ ಪ್ರಕರಣದಲ್ಲಿ ತಾಹಿರ್​ ಕುಟುಂಬದ ಕೈವಾಡದ ಬಗ್ಗೆ ದೂರಿದ್ದರು. ಫೆ. 26ರಂದು ಚಾಂದ್​ಬಾಘ್​ ಪ್ರದೇಶದಲ್ಲಿ ಚರಂಡಿಯಲ್ಲಿ ಶವವಾಗಿ ಅಂಕಿತ್​ ಶರ್ಮಾ ಪತ್ತೆಯಾಗಿದ್ದರು.(ಏಜೆನ್ಸೀಸ್​)
ಹೆಂಡತಿ ಫೋನ್​ ಕೊಡಲ್ಲ ಎಂದಳು; ಗಂಡ ಚಾಕುವಿನಿಂದ ಇರಿದು ಕೊಂದೇ ಬಿಟ್ಟ!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 2 =
Remember me
