ನವದೆಹಲಿ:ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವವರಿಗೆ ಜೈಲು ಶಿಕ್ಷೆ ನೀಡುವುದಕ್ಕೆ ದೆಹಲಿ ಸರ್ಕಾರ ಮುಂದಾಗಿದೆ. ಯಾರು ಮಾಸ್ಕ್ ಧರಿಸದೆ ಓಡಾಡುತ್ತಾರೋ ಅವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ನೀಡಿ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಅಗತ್ಯ ಸೇವೆಯಲ್ಲಿರುವ ಅಧಿಕಾರಿಗಳು ಸೇರಿ ತರಕಾರಿ ತರುವುದಕ್ಕೆ ಮನೆಯಿಂದ ಹೊರಗೆ ಬರುವವರು ಕೂಡ ಮಾಸ್ಕ್ ಧರಿಸಲೇಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಿಯಮ ಉಲ್ಲಂಘನೆ ಮಾಡುವವರಿಗೆ 200ರಿಂದ 2,000 ರೂಪಾಯಿಯವರೆಗೆ ದಂಡ ವಿಧಿಸುವಂತೆ ತಿಳಿಸಲಾಗಿದೆ.
ದೇಶದಲ್ಲಿ ಕರೊನಾ ಕಾರುಬಾರು
ಭಾರತದಲ್ಲಿ ಕರೊನಾ ಸೋಂಕಿಗೆ ಒಳಗಾಗದವರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಗುರುವಾರ 19 ಜನರು ಮೃತರಾಗಿದ್ದು, ಸಾವಿನ ಸಂಖ್ಯೆ 199ಕ್ಕೆ ಏರಿದೆ. ಸದ್ಯ ದೇಶದಲ್ಲಿ 5,852 ಪ್ರಕರಣಗಳು ಸಕ್ರಿಯವಾಗಿದ್ದು, ಈವರೆಗೆ 602 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ 9, ಮಧ್ಯಪ್ರದೇಶದಲ್ಲಿ ಇಬ್ಬರು, ಪಂಜಾಬ್, ಕರ್ನಾಟಕ, ಜಾರ್ಖಂಡ ಹಾಗೂ ಗುಜರಾತ್​ನಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 211 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,346ಕ್ಕೆ ಏರಿಕೆಯಾಗಿದೆ. ದೇಶದಲ್ಲೇ ಅತೀ ಹೆಚ್ಚು ಸೋಂಕಿತರು ಮಹಾರಾಷ್ಟ್ರದಲ್ಲಿದ್ದು, ನಂತರದ ಸ್ಥಾನಗಳಲ್ಲಿ ತಮಿಳುನಾಡು-834, ದೆಹಲಿ-720, ತೆಲಂಗಾಣ-471, ರಾಜಸ್ಥಾನ-430, ಉತ್ತರಪ್ರದೇಶ-361 ಹಾಗೂ ಕೇರಳದಲ್ಲಿ- 357 ಇವೆ. ಉತ್ತರಪ್ರದೇಶದಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದ 39,857 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
15 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್
ನವದೆಹಲಿ: ಕರೊನಾ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ.ಗಳ ತುರ್ತು ಸಹಾಯಧನ ಘೋಷಿಸಿದೆ. ಇದನ್ನು ಮೂರು ಹಂತಗಳಲ್ಲಿ ಜಾರಿಗೆ ತರುವುದಾಗಿ ತಿಳಿಸಲಾಗಿದೆ.
2020 ಜನವರಿಯಿಂದ 2020ರ ಜೂನ್​ವರೆಗೆ ಮೊದಲ ಹಂತ, 2020ರ ಜುಲೈನಿಂದ 2021ರ ಮಾರ್ಚ್​ವರೆಗೆ ಎರಡನೇ ಹಂತ, 2021ರ ಏಪ್ರಿಲ್​ನಿಂದ 2024ರ ಮಾರ್ಚ್​ವರೆಗೆ ಮೂರನೇ ಹಂತ ಜಾರಿಗೆ ಬರಲಿದೆ. ಮೂರು ಹಂತದ ಯೋಜನೆಯಲ್ಲಿ ಕಣ್ಗಾವಲು ಅಳವಡಿಕೆ, ಪ್ರಯೋಗಾಲಯಗಳ ಭದ್ರತೆ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುವುದು. ಸೂಕ್ತ ಆಮ್ಲಜನಕ ಪೂರೈಕೆಯ ಯಂತ್ರಗಳು, ಐಸಿಯುಗಳು, ವೆಂಟಿಲೇಟರ್ ಸೇರಿ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಔಷಧಗಳ ಖರೀದಿಗೂ ಒತ್ತು ನೀಡಲಾಗುವುದು. ಮೊದಲನೇ ಹಂತದ ಯೋಜನೆಯಲ್ಲಿ ಆಸ್ಪತ್ರೆ ಮತ್ತು ಸರ್ಕಾರಿ ಆಂಬುಲೆನ್ಸ್​ಗಳಿಗೆ ರೋಗನಿರೋಧಕಗಳ ಸಿಂಪಡಿಕೆ, ಎನ್-95 ಮಾಸ್ಕ್ ಹಾಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಖರೀದಿ ಮಾಡಲಾಗುತ್ತದೆ.
ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
