ನವದೆಹಲಿ:ರಾಷ್ಟ್ರೀಯತೆ ಮತ್ತು ಭಾರತ್​ ಮಾತಾ ಕೀ ಜೈ ಎನ್ನುವ ಘೋಷಣೆಗಳನ್ನು ಉಗ್ರತ್ವ ಭಾವನೆ ಬೆಳೆಸಲು ಬಳಸುತ್ತಿರುವುದು ದುರಂತ ಎಂದು ಮಾಜಿ ಪ್ರಧಾನಿ ಡಾ. ಮನ ಮೋಹನ್​ ಸಿಂಗ್​ ಹೇಳಿದರು.
ಜವಾಹರ ಲಾಲ್​ ನೆಹರು ಅವರ ಕಾರ್ಯ ಮತ್ತು ಭಾಷಣಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಭಾರತ ವಿಶ್ವದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ, ಭಾರತ ವಿಶ್ವದ ಬಲಶಾಲಿ ದೇಶಗಳಲ್ಲೊಂದು ಎಂದು ಗುರುತಿಸಿಕೊಳ್ಳಲು ಕಾರಣ ದೇಶದ ಮೊದಲ ಪ್ರಧಾನಿ ನೆಹರು ಕಾರಣ ಎಂದರು.
ಭಾರತೀಯ ಪರಂಪರೆಯ ಬಗ್ಗೆ ನೆಹರು ಹೆಮ್ಮೆಪಡುತ್ತಿದ್ದರು, ಅಂತಹ ಪರಂಪರೆಯನ್ನು ಒಟ್ಟುಗೂಡಿಸಿದರು. ಆಧುನಿಕ ಭಾರತದ ಅಗತ್ಯತೆಗಳಿಗೆ ಹೊಂದಿಕೊಂಡರು ಎಂದು ಮಾಜಿ ಪ್ರಧಾನಿ ಹೇಳಿದರು.
ಆದರೆ ಇತಿಹಾಸವನ್ನು ಓದುವ ತಾಳ್ಮೆ ಇಲ್ಲದ, ಮತ್ತು ಪೂರ್ವಾಗ್ರಹ ಪೀಡಿತರಾದ ಜನರು ನೆಹರು ಅವರನ್ನು ಸುಳ್ಳು ಬೆಳಕಿನಲ್ಲಿ ಚಿತ್ರಿಸಲು ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ಇತಿಹಾಸಕ್ಕೆ ಒಂದು ಸಾಮರ್ಥ್ಯವಿದೆ. ನಕಲಿ ಮತ್ತು ಸುಳ್ಳು ಪ್ರಚೋದನೆಗಳನ್ನು ತಿರಸ್ಕರಿಸಿ ಮತ್ತು ಎಲ್ಲವನ್ನೂ ಸರಿಯಾದ ದೃಷ್ಟಿಕೋನದಲ್ಲಿ ಇರಿಸುತ್ತದೆ ಎಂದರು.
ಪುರುಷೋತ್ತಮ ಅಗರ್​ವಾಲ ಮತ್ತು ರಾಧಾಕೃಷ್ಣ ಅವರ “Who is Bharat Mata” ಪುಸ್ತಕವು ನೆಹರು ಅವರ ಡಿಸ್ಕವರಿ ಆಪ್​ ಇಂಡಿಯಾ, ಭಾಷಣಗಳು, ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಬರೆದ ಪತ್ರಗಳು, ಸಂದರ್ಶನಗಳನ್ನು ಒಳಗೊಂಡಿದೆ, ಮೊದಲು ಇದು ಇಂಗ್ಲಿಷ್​ನಲ್ಲಿ ಲಭ್ಯವಿತ್ತು. ಇದೀಗ ಕನ್ನಡಕ್ಕೆ ತರ್ಜುಮೆಗೊಂಡಿದೆ.
ಪುಸ್ತಕವು ಜವಾಹರ ಲಾಲ್ ನೆಹರು ಅವರ ಸಮಕಾಲೀನರಾದ ಗಾಂಧಿ, ಭಗತ್ ಸಿಂಗ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್, ಅರುಣಾ ಅಸಫ್ ಅಲಿ, ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ನೆನಪುಗಳ ಬರಹಗಳನ್ನು ಕೂಡ ಒಳಗೊಂಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
