ನವದೆಹಲಿ:ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮಲ್ಲಿಕಾರ್ಜುನ ಖರ್ಗೆಯಲ್ಲ, ಕಾಂಗ್ರೆಸ್ ನಾಯಕರು. ನಿಜವಾದ ಮುಖ್ಯಮಂತ್ರಿ ಖರ್ಗೆ ಎಂದು ಜೆಡಿಎಸ್​​​ನ ರಾಜ್ಯಸಭಾ ಸದಸ್ಯ ಎಚ್​​​.ಡಿ. ದೇವೇಗೌಡರು ರಾಜ್ಯಸಭೆಯಲ್ಲಿ ಮತ್ತೆ ಗುಡುಗಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು 10 ವರ್ಷ ದೇಶವನ್ನ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರನ್ನ ಅಳುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ. ನನಗೆ ಬಿಜೆಪಿಯಿಂದ ಯಾವುದೇ ಪರ್ಸನಲ್ ಬೆನಿಫಿಟ್ ಇಲ್ಲ. ನಾನು ಪ್ರಧಾನಿಯವರ ಕಚೇರಿಗೆ ಹೋದಾಗ ಅವರು ತೋರಿಸುವ ಪ್ರೀತಿಯಷ್ಟೆ ಸಾಕು ಎಂದರು.
ನನ್ನ ಮಗ ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಜೊತೆಗೆ ಮೈತ್ರಿಯಾಗಿ ಕುಮಾರಸ್ವಾಮಿಯನ್ನ ಸಿಎಂ ಮಾಡ್ತೀವಿ ಅಂತ ಇದೇ ಬಿಜೆಪಿಯವರು ಹೇಳಿದ್ದರು ಎಂದು ಎಚ್​​ಡಿಡಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಮಂಗಳವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೈ ಮುಗಿದು ಮನವಿ ಮಾಡಿಕೊಂಡಿದ್ದರು. ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ದಯಮಾಡಿ ಪ್ರಧಾನಿಗಳು ಮಧ್ಯೆ ಪ್ರವೇಶಿಸಿ ರಾಜ್ಯದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹರಿಸಬೇಕು, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.
ಪಾಕಿಸ್ತಾನ ಚುನಾವಣೆ 2024: ಯಾರೆಷ್ಟೇ ಮತಗಳನ್ನು ಪಡೆದರೂ ದೇಶ ನಡೆಸುವುದು ಇದೇ ವ್ಯಕ್ತಿ!

ವೈರಲ್ ಆದ ಸಲ್ಮಾನ್ ಖಾನ್ ಮನೆಯ ಫೋಟೋಗಳು…ಅವರಿಲ್ಲಿ ವಾಸ ಮಾಡಲು ಕಾರಣವೂ ಅಷ್ಟೇ ವಿಶೇಷ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
