ನವದೆಹಲಿ:ಫೆ. 1ಕ್ಕೆ ನಿಗದಿಯಾಗಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಮತ್ತೊಮ್ಮೆ ಮುಂದೂಡಿದ್ದಕ್ಕೆ ಕುಸಿದುಹೋದ ನಿರ್ಭಯಾ ತಾಯಿ ಆಶಾದೇವಿ ಕಣ್ಣೀರಿಟ್ಟರು.
ನಾಳೆ ನಡೆಯಬೇಕಿದ್ದ ಮರಣದಂಡನೆಗೆ ತಡೆಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದ್ದು, ಮತ್ತೊಂದು ಆದೇಶ ಹೊರಬೀಳುವವರೆಗೂ ಗಲ್ಲುಶಿಕ್ಷೆ ನಡೆಸದಂತೆ ದೆಹಲಿ ಪಟಿಯಾಲ ನ್ಯಾಯಾಲಯ ತಿಳಿಸಿತು.
ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್, ಗಲ್ಲು ಶಿಕ್ಷೆ ಎಂದಿಗೂ ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದರು ಎಂದು ತಿಳಿಸಿದ ಆಶಾದೇವಿ, ನನ್ನ ಮಗಳಿಗೆ ನ್ಯಾಯ ದೊರಕುವವರೆಗೆ ಹೋರಾಟ ಮಾಡುತ್ತೇನೆ ಎಂದರು.
ಇದನ್ನು ಎಲ್ಲರೂ ಕೇಳಿಸಿ ಕೊಳ್ಳಬೇಕು… ದೆಹಲಿ ಸರ್ಕಾರ, ಕೇಂದ್ರ ಸರ್ಕಾರ ಕೇಳಿಸಿಕೊಳ್ಳಬೇಕು. ನ್ಯಾಯಾಲಯಗಳು ಮತ್ತು ಸರ್ಕಾರಗಳು ಈ ಅಪರಾಧಿಗಳ ಮುಂದೆ ತಲೆ ಬಾಗುತ್ತಿವೆ ಎಂದು ಕೂಗಿದ ಅವರು ವಿಚಲಿತರಾದರು.
ನಾನು ಬೆಳಗ್ಗೆ 10ಗಂಟೆಯಿಂದ ಕುಳಿತುಕೊಂಡಿದ್ದೇನೆ. ಅಪರಾಧಿಗಳನ್ನು ನ್ಯಾಯಾಲಯ ಉಳಿಸಿಕೊಳ್ಳಬಯಸಿದರೆ ಮತ್ತೆ ಇಷ್ಟು ಸುದೀರ್ಘ ವಿಚಾರಣೆ ಏಕೆ ಬೇಕಿತ್ತು? ನಾವಿಷ್ಟು ಹೊತ್ತು ಭರವಸೆ ಇಟ್ಟುಕೊಂಡು ಕುಳಿತುಕೊಳ್ಳುವ ಅಗತ್ಯವೇನಿತ್ತು, ನಮ್ಮನ್ನು ಮನೆಗೆ ಕಳುಹಿಸಬಹುದಿತ್ತು ಎಂದು ಗದ್ಗದಿತರಾದರು.
ಗಲ್ಲಿಗೇರುವ ಮೊದಲೇ ನಾಲ್ವರು ಅಪರಾಧಿಗಳ ಮರಣದಂಡನೆ ಆದೇಶ ಹಿಂಪಡೆಯಲಾಗಿದೆ. ಇನ್ನು ಮುಂದಿನ ಆದೇಶದವರೆಗೆ ಅವರಿಗೆ ಗಲ್ಲಿಗೇರಿಸುವಂತಿಲ್ಲ.(ಏಜೆನ್ಸೀಸ್​)
#WATCHAsha Devi, mother of the 2012 Delhi gang-rape victim: The lawyer of the convicts, AP Singh has challenged me saying that the convicts will never be executed. I will continue my fight. The government will have to execute the convicts.pic.twitter.com/VynpcSLhyp
— ANI (@ANI)January 31, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
