ನವದೆಹಲಿ:ದೇಶದಾದ್ಯಂತ ಕರೊನಾ ವೈರಸ್ ಸೋಂಕಿತ ರೋಗಿಗಳನ್ನು ಚಿಕಿತ್ಸೆಯ ನಂತರ ಬಿಡುಗಡೆ (ಡಿಸ್ಚಾರ್ಜ್) ಮಾಡುವ ಕುರಿತ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಷ್ಕರಿಸಿದೆ. ಮೂರು ವಿಭಾಗಗಳಾಗಿ ವಿಂಗಡಣೆ
ಲಘು ಹಾಗೂ ಲಕ್ಷಣ ಪೂರ್ವ ಪ್ರಕರಣ
* ನಿಯಮಿತವಾಗಿ ದೇಹದ ಉಷ್ಣತೆ ಮತ್ತು ನಾಡಿ ಬಡಿತ ಪರೀಕ್ಷೆ * ಲಕ್ಷಣ ಕಂಡು ಬಂದ 10 ದಿನಗಳ ನಂತರ ಹಾಗೂ ಸತತ ಮೂರು ದಿನ ಜ್ವರ ಇಲ್ಲದ ರೋಗಿ ಬಿಡುಗಡೆ * ಡಿಸ್ಚಾರ್ಜ್ ಮುನ್ನ ತಪಾಸಣೆ ಅಗತ್ಯವಿಲ್ಲ. 7 ದಿನ ಗೃಹ ಐಸೋಲೇಷನ್​ಗೆ ಸಲಹೆ. * ಕೋವಿಡ್ ಆರೈಕೆ ಕೇಂದ್ರದಿಂದ (ಸಿಸಿಸಿ) ಡಿಸ್ಚಾರ್ಜ್ ಮಾಡುವ ಮುನ್ನ ಯಾವುದೇ ಸಂದರ್ಭದಲ್ಲಿ ಆಮ್ಲಜನಕ ಪ್ರಮಾಣ ಶೇಕಡಾ 95ಕ್ಕಿಂತ ಕಡಿಮೆಯಾದರೆ ರೋಗಿಯನ್ನು ಕೋವಿಡ್ ಚಿಕಿತ್ಸೆಗೆಂದೇ ಮೀಸಲಾದ ಆರೋಗ್ಯ ಕೇಂದ್ರಕ್ಕೆ (ಡಿಸಿಎಚ್​ಸಿ) ಸ್ಥಳಾಂತರಿಸುವುದು. * ಅಲ್ಲಿಂದ ಡಿಸ್ಚಾರ್ಜ್ ಆದ ನಂತರ ರೋಗಿಯಲ್ಲಿ ಮತ್ತೆ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಂಥ ಲಕ್ಷಣ ಕಾಣಿಸಿದರೆ ಅಮಥವರು ಸಿಸಿಸಿ ಅಥವಾ ರಾಜ್ಯ ಸಹಾಯವಾಣಿ ಅಥವಾ 1075 ಸಂಖ್ಯೆ ಸಂರ್ಪಸಬೇಕು. * 14ನೇ ದಿನ ರೋಗಿಯ ಆರೋಗ್ಯದ ಮೇಲೆ ಟೆಲಿಕಾನ್ಪರೆನ್ಸ್ ಮೂಲಕ ನಿಗಾ ಇಡಲಾಗುವುದು.
ಮಧ್ಯಮ ಸೋಂಕಿನ ರೋಗಿಗಳು
* ಮೂರು ದಿನದಲ್ಲಿ ಜ್ವರ ವಾಸಿಯಾದರೆ ಮತ್ತು (ಆಕ್ಸಿಜನ್ ಬೆಂಬಲವಿಲ್ಲದೆ) ಮುಂದಿನ ನಾಲ್ಕು ದಿನ ಆಮ್ಲಜನಕ ಪ್ರಮಾಣ ಶೇಕಡಾ 95ಕ್ಕಿಂತ ಮೇಲಿದ್ದರೆ ಲಕ್ಷಣ ಕಂಡ ಹತ್ತು ದಿನದ ನಂತರ ಡಿಸ್ಚಾರ್ಜ್. * ಉಸಿರಾಟದ ತೊಂದರೆ ವಾಸಿಯಾದರೆ. * ಡಿಸ್ಚಾರ್ಜ್​ಗೆ ಮುನ್ನ ತಪಾಸಣೆ ಬೇಕಿಲ್ಲ. ಏಳು ದಿನ ಹೋಂ ಐಸೋಲೇಷನ್​ಗೆ ಸಲಹೆ.ಆಮ್ಲಜನಕದ ನೆರವಿನಲ್ಲಿರುವ ರೋಗಿಯ ಜ್ವರ ಮೂರು ದಿನದಲ್ಲಿ ಗುಣವಾಗದಿದ್ದರೆ ಹಾಗೂ ಆಮ್ಲಜನಕ ಥೆರಪಿ ಮುಂದುವರಿಯುವುದು ಅಗತ್ಯವಾದ ರೋಗಿಯನ್ನು ಕ್ಲಿನಿಕಲ್ ಲಕ್ಷಣ ಪರಿಹಾರವಾದ ನಂತರ; ಸತತ ಮೂರು ದಿನ ಆಮ್ಲಜನಕ ಸ್ಯಾಚುರೇಷನ್ ನಿರ್ವಹಿಸಲು ಸಾಮರ್ಥ್ಯವಿರುವ ರೋಗಿಗಳ ಬಿಡುಗಡೆ.
ಗಂಭೀರ ರೋಗಿಗಳು
* ಎಚ್​ಐವಿ ರೋಗಿಗಳು, ಅಂಗ ಕಸಿಯಾದವರು ಮತ್ತು ಮಾರಕ ವ್ಯಾಧಿ ಹೊಂದಿದ ಕರೊನಾ ಪೀಡಿತರನ್ನು ಗಂಭೀರ ರೋಗಿಗಳು ಎಂದು ಪರಿಗಣನೆ * ಕ್ಲಿನಿಕಲ್ ರಿಕವರಿ ಬಳಿಕವೇ ಬಿಡುಗಡೆ * ರೋಗ ಲಕ್ಷಣಗಳ ಪರಿಹಾರದ ನಂತರ ಆರ್​ಟಿ-ಪಿಸಿಆರ್​ನಿಂದ ರೋಗಿಯ ಪರೀಕ್ಷೆ ನೆಗೆಟಿವ್ ಎಂದು ಬಂದ ಮೇಲೆ ಡಿಸ್ಚಾರ್ಜ್.

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty + one =
Remember me
