ನವದೆಹಲಿ:ಕರೊನಾದಿಂದಾಗಿ ಆಹಾರ, ವಸತಿ ಸಿಗದೇ ನಿರಾಶ್ರಿತರಾಗಿರುವವರ ನೆರವಿಗೆ ಗೂಗಲ್‌ ಮ್ಯಾಪ್‌ ಧಾವಿಸಿದೆ. ಇದಕ್ಕೆ ಹೊಸ ಫೀಚರ್‌ ಅಳವಡಿಸಲಾಗಿದ್ದು, ನಿರಾಶ್ರಿತರು ರಾತ್ರಿ ವಾಸ್ತವ್ಯ ಎಲ್ಲಿ ಮಾಡಬಹುದು ಹಾಗೂ ಅವರ ಸಮೀಪ ಊಟದ ವ್ಯವಸ್ಥೆ ಎಲ್ಲಿ ಸಿಗುತ್ತದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಗೂಗಲ್‌ ಇದನ್ನು ಮಾಡಿದೆ.
30ಕ್ಕೂ ಹೆಚ್ಚು ನಗರಗಳ ಕುರಿತು ಸದ್ಯ ಇದರಲ್ಲಿ ಮಾಹಿತಿ ಸಿಗಲಿದ್ದು, ಇನ್ನೂ ಉಳಿದ ನಗರಗಳ ಬಗ್ಗೆ ಅಪ್‌ಲೋಡಿಂಗ್ ಪ್ರಕ್ರಿಯೆ ನಡೆದಿದೆ. ಸದ್ಯ ಇಂಗ್ಲಿಷ್‌ನಲ್ಲಷ್ಟೇ ಮಾಹಿತಿ ಲಭ್ಯ ಇದ್ದು. ಮುಂದಿನ ದಿನಗಳಲ್ಲಿ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ದೊರೆಯುವಂತೆ ಮಾಡಲಾಗುವುದು ಎಂದು ಗೂಗಲ್ ತಿಳಿಸಿದೆ.ಯಾವ ಸ್ಥಳದಲ್ಲಿ ಆಹಾರ ದೊರೆಯುತ್ತದೆ ಎಂಬುದು ಗೊತ್ತಾಗಬೇಕಾದರೆ ಬಳಕೆದಾರರು, Food shelters <ನಗರದ ಹೆಸರು> Night shelters <ನಗರದ ಹೆಸರು> ಟೈಪ್ ಮಾಡಬೇಕು. ಇದನ್ನೇ ಧ್ವನಿಯ ಮೂಲಕವೂ ನೀಡಬಹುದು. ಇಷ್ಟು ಟೈಪ್‌ ಮಾಡುತ್ತಿದ್ದಂತೆಯೇ ಸಮೀಪವೇ ಯಾವುದಾದರೂ ಸ್ಥಳ ಇದ್ದರೆ ಅದು ಅಲ್ಲಿ ತೋರಿಸಲಿದೆ. ಸ್ಥಳದ ಜತೆಗೆ ಗೂಗಲ್‌ ಮ್ಯಾಪ್‌ ಕೂಡ ಅಲ್ಲಿಯೇ ಕಾಣಿಸಿಕೊಳ್ಳಲಿದ್ದು, ಅದರ ಸಹಾಯದಿಂದ ಸ್ಥಳವನ್ನು ಸುಲಭದಲ್ಲಿ ಗುರುತಿಸಬಹುದಾಗಿದೆ.
ವಲಸಿಗರಿಗೆ, ಮನೆಗಳಿಲ್ಲದವರಿಗೆ ಈ ಹೊಸ ಫೀಚರ್‌ನಿಂದ ಹೆಚ್ಚು ಪ್ರಯೋಜನ ಆಗಲಿದೆ. ಒಂದು ವೇಳೆ ಸ್ಮಾರ್ಟ್‌ಫೋನ್‌ ಇಲ್ಲದಿದ್ದರೆ ಅಥವಾ ಇದರ ಬಳಕೆ ತಿಳಿಯದೇ ಇದ್ದ ಸಂದರ್ಭಗಳಲ್ಲಿ ಫೋನ್‌ ಇರುವವರ ಬಳಿ ಸ್ವಲ್ಪ ಸಹಾಯ ಪಡೆಯುವ ಮೂಲಕ ಸ್ಥಳಗಳನ್ನು ಗೊತ್ತು ಮಾಡಿಕೊಳ್ಳಬಹುದು.
ರಿಹಾರ ಕೇಂದ್ರಗಳ ಪತ್ತೆಮಾಡಲು ಗೂಗಲ್ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅಗತ್ಯ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಪರಿಹಾರಗಳನ್ನು ಹುಡುಕಲು ನಾವು ಒಂದು ಸಮಗ್ರ ಪ್ರಯತ್ನವನ್ನು ಮಾಡುತ್ತಿದ್ದೇವೆ” ಎಂದು ಗೂಗಲ್ ಇಂಡಿಯಾ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅನಲ್ ಘೋಷ್ ಹೇಳಿದ್ದಾರೆ. (ಏಜನ್ಸೀಸ್‌)
ಲಾಕ್​ಡೌನ್​ ನಂತರ ಯುಮುನಾ ನದಿ ನೀರಿನ ಗುಣಮಟ್ಟ ಹೆಚ್ಚಾಗಿದೆ: ದೆಹಲಿ ಜಲಮಂಡಳಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
