ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದು ನಾಲ್ಕು ವರ್ಷವಾಗಿದ್ದು, ಒಟ್ಟು 66 ಕೋಟಿಗೂ ಅಧಿಕ ಜಿಎಸ್​ಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ತೆರಿಗೆ ದರಗಳ ಇಳಿಕೆಗೆ ಮತ್ತು ತೆರಿಗೆ ಅನುಸರಣೆ, ಸಂಗ್ರಹ ಹೆಚ್ಚಾಗುವುದಕ್ಕೂ ಇದು ಕಾರಣವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ದೇಶಾದ್ಯಂತ ಜಾರಿಗೆ ಬಂದ ಜಿಎಸ್​ಟಿಯು ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್, 13 ಸೆಸ್​ಗಳು ಸೇರಿ 17 ಸ್ಥಳೀಯ ಸುಂಕಗಳನ್ನು ಒಳಗೊಂಡಿದೆ. ಜಿಎಸ್​ಟಿ ಅಧೀನದಲ್ಲಿ 40 ಲಕ್ಷ ರೂಪಾಯಿ ತನಕದ ವ್ಯಾಪಾರ ವಹಿವಾಟು ವಿನಾಯಿತಿ ಪಡೆದುಕೊಂಡಿದೆ. ಇದಲ್ಲದೆ, 1.5 ಕೋಟಿ ತನಕದ ವಹಿವಾಟು ಉಳ್ಳ ವ್ಯಾಪಾರಸ್ಥರು ಕಂಪೋಸಿಷನ್ ಸ್ಕೀಮ್ ಅಳವಡಿಸಿಕೊಂಡು ಶೇಕಡ 1 ತೆರಿಗೆ ಮಾತ್ರ ಪಾವತಿಸುವುದಕ್ಕೂ ಅವಕಾಶವಿದೆ. ಸೇವೆಗಳಿಗೆ ಸಂಬಂಧಿಸಿ, ವಾರ್ಷಿಕ 20 ಲಕ್ಷ ರೂಪಾಯಿ ತನಕದ ವಹಿವಾಟು ಜಿಎಸ್​ಟಿಯಿಂದ ಮುಕ್ತವಾಗಿದೆ. 50 ಲಕ್ಷ ರೂಪಾಯಿ ತನಕದ ವಾರ್ಷಿಕ ವಹಿವಾಟು ಹೊಂದಿದ ಸೇವಾ ಪೂರೈಕೆ ವ್ಯಾಪಾರಸ್ಥರು ಕಂಪೋಸಿಶನ್ ಸ್ಕೀಮ್ ಅಳವಡಿಸಿಕೊಂಡು ಶೇಕಡ 6 ತೆರಿಗೆ ಪಾವತಿಸಬಹುದು.
4 ರೀತಿಯ ತೆರಿಗೆ ಸ್ತರ ವಿನ್ಯಾಸ:ಜಿಎಸ್​ಟಿ ವ್ಯವಸ್ಥೆಯಲ್ಲಿ ನಾಲ್ಕು ರೀತಿಯ ತೆರಿಗೆ ಸ್ತರಗಳ ವಿನ್ಯಾಸವಿದೆ. ಕನಿಷ್ಠ ತೆರಿಗೆ ಶೇಕಡ 5, ಗರಿಷ್ಠ ತೆರಿಗೆ ದರ ಶೇಕಡ 28. ಮಧ್ಯದಲ್ಲಿ ಶೇಕಡ 12 ಮತ್ತು ಶೇಕಡ 18ರ ತೆರಿಗೆ ದರದ ಸ್ಲ್ಯಾಬ್​ಗಳಿವೆ. ಜಿಎಸ್​ಟಿ ಜಾರಿಗೆ ಮುನ್ನ ವ್ಯಾಟ್, ಅಬಕಾರಿ, ಸಿಎಸ್​ಟಿ ಮತ್ತು ಇತರೆ ತೆರಿಗೆಗಳು ಸೇರಿ ಗ್ರಾಹನನೊಬ್ಬ ಸರಾಸರಿ ಶೇಕಡ 31 ತೆರಿಗೆ ಪಾವತಿ ಸುತ್ತಿದ್ದ. ಈ ಪ್ರಮಾಣ ಈಗ ಬಹಳ ಕಡಿಮೆಯಾಗಿದೆ.
ಗ್ರಾಹಕ ಮತ್ತು ತೆರಿಗೆದಾರ ಸ್ನೇಹಿ:ಜಿಎಸ್​ಟಿ ವ್ಯವಸ್ಥೆ ಗ್ರಾಹಕ ಮತ್ತು ತೆರಿಗೆದಾರ ಸ್ನೇಹಿ ವ್ಯವಸ್ಥೆಯಾಗಿದೆ. ಜಿಎಸ್​ಟಿ ಪೂರ್ವ ಕಾಲಘಟ್ಟದಲ್ಲಿ ತೆರಿಗೆದರಗಳು ಗರಿಷ್ಠ ಮಟ್ಟದಲ್ಲಿದ್ದವು. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ತೆರಿಗೆಗಳಿದ್ದವು. ಅರ್ಜಿಗಳೂ ಬೇರೆ ಬೇರೆಯಾಗಿದ್ದವು. ಜಿಎಸ್​ಟಿ ಜಾರಿಗೆ ಬಂದ ಬಳಿಕ ತೆರಿಗೆ ದರ ಇಳಿಕೆಯಾಗಿದೆ. ಅರ್ಜಿಗಳ ಸಂಖ್ಯೆಯೂ ಗಣನೀಯವಾಗಿ ಇಳಿದಿದೆ. ಇದುವರೆಗೆ 66 ಕೋಟಿಗೂ ಅಧಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ. 1.3 ಕೋಟಿಗೂ ಅಧಿಕ ತೆರಿಗೆದಾರರ ನೋಂದಣಿಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜು.1 ಜಿಎಸ್​ಟಿ ದಿನ:ಏಕರೂಪದ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ದಿನವಾದ ಜುಲೈ 1ನ್ನು ಜಿಎಸ್​ಟಿ ದಿನವನ್ನಾಗಿ ಆಚರಿಸುವುದಾಗಿ 2017ರ ಜುಲೈ 1 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅದರಂತೆ ಇಂದು ನಾಲ್ಕನೇ ವರ್ಷ ಜಿಎಸ್​ಟಿ ದಿನ ಆಚರಿಸಲ್ಪಡುತ್ತಿದೆ.
ಭಾರತದ ಆರ್ಥಿಕ ಭೂಪಟದಲ್ಲಿ ಜಿಎಸ್​ಟಿ ಒಂದು ಮೈಲಿಗಲ್ಲು. ಇದು ಸಾಮಾನ್ಯರ ಮೇಲಿದ್ದ ಅಸಂಖ್ಯ ತೆರಿಗೆಗಳ ಸಂಖ್ಯೆ ಮತ್ತು ಹೊರೆಯನ್ನು ಕಡಿಮೆಮಾಡಿದೆ. ಪಾರದರ್ಶಕತೆ, ಅನುಸರಣೆ ಮತ್ತು ತೆರಿಗೆ ಸಂಗ್ರಹವನ್ನು ಹೆಚ್ಚಿಸಿದೆ.
|ನರೇಂದ್ರ ಮೋದಿಪ್ರಧಾನಮಂತ್ರಿ

ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + twelve =
Remember me
