ನವದೆಹಲಿ: ಇಂದು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ರವಿ ಶಂಕರ್ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಓಟಿಟಿ ವೇದಿಕೆಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದರು.
ಸಾಮಾಜಿಕ ಮಾಧ್ಯಮಗಳು ಇಂದಿನ ಅಗತ್ಯ. ಆದರೆ, ಅವು ನಾಗರಿಕ ಸಮಾಜದ ಘನತೆಗೆ ಹಾಗೂ ಅಸ್ತಿತ್ವಕ್ಕೆ ದಕ್ಕೆ ತರುವಂತಿರಬಾರದು ಎಂದು ಇಬ್ಬರೂ ಸಚಿವರು ಹೇಳಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗುತ್ತಿರುವುದನ್ನು ನಾವು ಕಂಡಿದ್ದೇವೆ. ಇದನ್ನು ತಡೆಗಟ್ಟಲೇಬೇಕಾಗಿದೆ. ಡಿಜಿಟಲ್ ನ್ಯೂಸ್ ಪೋರ್ಟಲ್​ಗಳೂ ಕೂಡ ಮುದ್ರಣ ಮಾಧ್ಯಮಕ್ಕೆ ಇರುವ ಮಾರ್ಗಸೂಚಿಗಳನ್ನು ಅಳವಡಿಸಿ ಕೊಳ್ಳಬೇಕಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾಕ್ಕೆ ಹಾಗೂ ಓಟಿಟಿಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಮುಖ ಮಾರ್ಗಸೂಚಿಗಳು ಇಂತಿವೆ.
1 ಸಾಮಾಜಿಕ ಮಾಧ್ಯಮಗಳಲ್ಲಿನ ಕುಂದು ಕೊರತೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕಾಗುತ್ತದೆ. ಫೇಸ್​ಬುಕ್ ಟ್ವಿಟ್ಟರ್​ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಕಂಟೆಂಟ್​ನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವೇ ದೂರು ದಾಖಲಾದ 36 ಗಂಟೆಯ ಒಳಗೆ ತೆಗೆದುಹಾಬೇಕಾಗುತ್ತದೆ.2 ಬಳಕೆದಾರರ ಖಾಸಗಿ ಸಂಗತಿಗಳ ಬಗ್ಗೆ ಮಾಹಿತಿ ಹಾಕಿದ್ದರೆ ಅಥವಾ ಫೋಟೊ, ವಿಡಿಯೋ ಹಾಕಿದ್ದರೆ ಅದರಲ್ಲೂ ಮಹಿಳೆಯರ ಖಾಸಗಿತನಕ್ಕೆ ದಕ್ಕೆ ತರುವಂತ ಕಂಟೆಂಟ್ ಇದ್ದರೆ 24 ಗಂಟೆಯ ಒಳಗೆ ಅಂತಹುದನ್ನು ಡಿಲೀಟ್ ಮಾಡಬೇಕು. 15 ದಿನಗಳೊಳಗೆ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದು ಮಹಿಳೆಯರ ಘನತೆ ಎತ್ತಿ ಹಿಡಿಯುವಲ್ಲಿ ಅಗತ್ಯ3 ಸರ್ಕಾರ ಟೀಕೆ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ಸ್ವಾಗತಿಸುತ್ತದೆ. ಆದರೆ, ಸೋಶಿಯಲ್ ಮೀಡಿಯಾ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ವಿರುದ್ಧ ತಮ್ಮ ಕುಂದುಕೊರತೆಯನ್ನು ಎತ್ತುವ ವೇದಿಕೆಯನ್ನು ಹೊಂದುವುದು ಬಹಳ ಮುಖ್ಯ. ಹಾಗಾಗಿ ಬಳಕೆದಾರರ ಹಿತವನ್ನು ಸಂಸ್ಥೆಗಳು ರಕ್ಷಿಸಬೇಕು4 ನ್ಯಾಯಲಯ ಆದೇಶಿಸಿದರೇ ಸಂದೇಶದ ಮೂಲ ಅಥವಾ ಕಂಟೆಂಟ್​ನ ಮೂಲವನ್ನು ಸಾಮಾಜಿಕ ಮಾಧ್ಯಮಗಳು ಬಹಿರಂಗಪಡಿಸಬೇಕು. ಹೊಣೆಗಾರರನ್ನಾಗಿ ಮಾಡಲು ಇದನ್ನು ಮಾಡಲಾಗುತ್ತದೆ. ಒಂದೇ ವೇಳೆ ಸಂದೇಶದ ಮೂಲ ವಿದೇಶದಲ್ಲಿದ್ದರೆ, ಅದನ್ನು ಭಾರತದಲ್ಲಿ ಮೊದಲು ಮಾಡಿದವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.5 ಸಾಮಾಜಿಕ ಮಾಧ್ಯಮಗಳು ಹಾಗೂ ಓಟಿಟಿಗಳು ಪ್ರತಿಯೊಂದು ಸಂಸ್ಥೆಗಳು ತಮ್ಮ ಬಳಿ ದೂರು ಸ್ವೀಕಾರ ಘಟಕವನ್ನು ಹೊಂದಿರಬೇಕು. ಇದಕ್ಕೆ ಒಬ್ಬ ನುರಿತ ಅಧಿಕಾರಿಯನ್ನು ನೇಮಿಸಬೇಕು. ಇವರು ಭಾರತದಲ್ಲೇ ವಾಸಿಸಬೇಕು.6 ಸಾಮಾಜಿಕ ಮಾಧ್ಯಮಗಳು ಹಾಗೂ ಓಟಿಟಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಿಕೊಳ್ಳಬೇಕು. ಅವರು 24 ಗಂಟೆಯ ಒಳಗೆ ದೂರುಗಳನ್ನು ಸ್ವೀಕರಿಸುವಂತಿರಬೇಕು. ಅವರು ಸರ್ಕಾರದ ಸಂಬಂಧಿಸಿದ ಪ್ರಾಧಿಕಾರಗಳ ಜೊತೆ ಸಂಪರ್ಕದಲ್ಲಿರಬೇಕು.7 ಈ ಕಾನೂನುಗಳು ಮುಂದಿನ ಮೂರು ತಿಂಗಳ ಒಳಗೆ ಜಾರಿಗೆ ಬರುತ್ತವೆ. ಇದಕ್ಕೆ ಎಲ್ಲ ಓಟಿಟಿ ಹಾಗೂ ಸಾಮಾಜಿಕ ಮಾಧ್ಯಮಗಳು ಸಹಕರಿಸಬೇಕು8 ಓಟಿಟಿಗಳು ಸ್ವಯಂ ನಿಯಂತ್ರಣದಲ್ಲಿರಬೇಕು. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಇರಬೇಕು9 ಓಟಿಟಿಗಳು ಕಾರ್ಯಕ್ರಮಗಳನ್ನು ವಯೋಮಿತಿಗೆ ಅನುಗುಣವಾಗಿ ಕೆಟಗರಿಗಳನ್ನು ಮಾಡಬೇಕು10 ಓಟಿಟಿಗಳನ್ನು ನಿಯಂತ್ರಿಸಲು ಮೂರು ಹಂತದ ಯಾಂತ್ರಿಕ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ. ಡಿಜಿಟಲ್ ಮೀಡಿಯಾಗಳನ್ನು ನೋಂದಾಯಿಸಲು ವೇದಿಕೆ ರಚಿಸಲಾಗುತ್ತಿದೆ. (ಏಜೇನ್ಸಿಸ್)
ಹೆಲೋ ಸ್ವಲ್ಪ ತಡಿರಿ: ದೃಶ್ಯಂ ಕ್ಲೈಮ್ಯಾಕ್ಸ್ ಇನ್ನೂ ಮುಗಿದಿಲ್ಲ, ದೃಶ್ಯಂ 3 ಬರುತ್ತಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
