ಕಾಠ್ಮಂಡು/ಬೀಜಿಂಗ್​:ಜಗತ್ತಿನ ಅತಿ ಎತ್ತರ ಪರ್ವತ ಮೌಂಟ್ ಎವರೆಸ್ಟ್​ನ ಹೊಸ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿ ಸಮೀಕ್ಷಾ ವರದಿ ಪ್ರಕಟಿಸಿದೆ. ಇದು ಈ ಹಿಂದೆ 1954ರಲ್ಲಿ ಭಾರತ ಮಾಡಿದ ಸಂದರ್ಭದ ಅಳತೆಕ್ಕಿಂತ 86 ಸೆಂಟಿ ಮೀಟರ್ ಹೆಚ್ಚಿದೆ.
ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ ಭೂಕಂಪದ ಬಳಿಕ ಮೌಂಟ್ ಎವರೆಸ್ಟ್​ನ ಎತ್ತರ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿರುವ ಕಾರಣ ನೇಪಾಳ ಸರ್ಕಾರ ಅದರ ಎತ್ತರ ಅಳೆಯುವ ತೀರ್ಮಾನ ತೆಗೆದುಕೊಂಡಿತು. ಬಹುಶಃ ಭೂಕಂಪದ ಕಾರಣದಿಂದ ಎವರೆಸ್ಟ್​ನ ಎತ್ತರದಲ್ಲಿ ವ್ಯತ್ಯಾಸವಾಗಿರಬಹುದೆಂಬ ಮಾತು ವ್ಯಾಪಕವಾಗಿ ಕೇಳಿತ್ತು.
ಇದನ್ನೂ ಓದಿ:‘ರಕ್ತದಾನ ಮಾಡಿ, ಪ್ರತಿಫಲವಾಗಿ 1 ಕಿಲೋ ಚಿಕನ್ ಅಥವಾ ಪನೀರ್ ಪಡ್ಕೊಳ್ಳಿ’
ಹೊಸದಾಗಿ ಎತ್ತರವನ್ನು ಅಳೆದಾಗ 8,848.86 ಮೀಟರ್ ಕಂಡುಬಂದಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್​ ಗ್ಯಾವಲಿ ಹೇಳಿದ್ದಾರೆ. ಇದು ಭಾರತದ ಸರ್ವೇ ಆಫ್ ಇಂಡಿಯಾ 1954ರಲ್ಲಿ ಅಳೆದಾಗ ಸಿಕ್ಕ ಅಳತೆಗಿಂತ 86 ಸೆಂಟಿಮೀಟರ್ ಹೆಚ್ಚಾಗಿದೆ. ಹೊಸ ಎತ್ತರವನ್ನು ನೇಪಾಳ ಮತ್ತು ಚೀನಾಗಳು ಒಟ್ಟಾಗಿ ಘೋಷಿಸಿವೆ ಎಂದು ಚೀನಾ ಮಾಧ್ಯಮ ಕ್ಸಿನ್​​ಹುವಾ ವರದಿ ಮಾಡಿದೆ.
ಇದನ್ನೂ ಓದಿ:ರಾಮಮಂದಿರ ಕಟ್ಟಡ ಯೋಜನೆ ಅಂತಿಮಗೊಳಿಸುತ್ತಿದೆ ಯೋಜನಾ ಸಮಿತಿ: ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ
ಚೀನಾದ ಈ ಹಿಂದಿನ ಅಳತೆಯ ಪ್ರಕಾರ ಮೌಂಟ್ ಎವರೆಸ್ಟ್​ನ ಎತ್ತರ 8,844.43 ಮೀಟರ್ ಆಗಿತ್ತು. ಚೀನಾದ ಸರ್ವೇಯರ್​ಗಳು ಅಳತೆ ತೆಗೆದುಕೊಳ್ಳುವುದಕ್ಕಾಗಿ ಮೌಂಟ್ ಎವರೆಸ್ಟ್ ಅನ್ನು ಆರು ಬಾರಿ ಏರಿದ್ದರು. 1975ರಲ್ಲಿ ಮತ್ತು 2005ರಲ್ಲಿ ಅನುಕ್ರಮವಾಗಿ 8,848.13 ಮತ್ತು 8,844.43 ಮೀಟರ್ ಎತ್ತರವೆಂದು ಘೋಷಿಸಿದ್ದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಹೆಂಡ್ತಿಗೆ ಹೆದರಿ ಪ್ಲೇಸ್ಟೇಷನ್ 5 ಮಾರಿದ ಪತಿ: ಖರೀದಿಸಿದವನಿಂದ ಬಯಲಾಯಿತು ಗುಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
