ನವದೆಹಲಿ:ಭಾರತದ ಇತಿಹಾಸದ ‘ಸರಿಪಡಿಸಲಾದ’ ಹೊಸ ಆವೃತ್ತಿಯನ್ನು ವಸಂತ ಪಂಚಮಿ ಮತ್ತು ಗಣತಂತ್ರದ ದಿನವೂ ಆಗಿರುವ ಮುಂದಿನ ಜನವರಿ 26ರಂದು ಜಾರಿಗೆ ಬರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಹೇಳಿದರು. ಈ ಇತಿಹಾಸ ಪಠ್ಯಕ್ರಮವು ಕೇಂದ್ರ ಸರ್ಕಾರ 2020ರಲ್ಲಿ ಪ್ರಸ್ತಾಪಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್​ಇಪಿ) ಭಾಗವಾಗಿರುತ್ತದೆ ಎಂದರು.
ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್​ಆರ್) ಮತ್ತು ಆರ್​ಎಸ್​ಎಸ್ ಸಂಯೋಜಿತ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ ಏರ್ಪಡಿಸಿದ್ದ ಕಾರ್ಯಕ್ರಮ ವೊಂದರಲ್ಲಿ ಪ್ರಧಾನ್ ಈ ವಿಷಯವನ್ನು ತಿಳಿಸಿದರು. ಹೊಸ ಪಠ್ಯಕ್ರಮವು ಇಂಗ್ಲಿಷ್-ಕೇಂದ್ರಿತ ಬೋಧನೆಗಿಂತ ಮಾತೃಭಾಷೆಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಎನ್​ಇಪಿ ನಮಗೆ ಅನೇಕ ಅವಕಾಶಗಳನ್ನು ಒದಗಿಸಲಿದೆ. ಮಾತೃ ಭಾಷೆಗೆ ಆದ್ಯತೆ ನೀಡದೆ ಶಿಕ್ಷಣ ನೀಡುವುದು ಅರ್ಥಹೀನ ಎಂದು ಪ್ರಧಾನ್ ಅಭಿಪ್ರಾಯಪಟ್ಟರು.
2020ರಲ್ಲಿ ಪರಿಚಯಿಸಲಾದ ಎನ್​ಇಪಿ, ಭಾರತೀಯ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಹರಿಕಾರ ಎಂದು ಹೇಳಲಾಗುತ್ತಿದೆ. ಎನ್​ಇಪಿ ಅನ್ವಯ ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲಾಗಿರುವ ಪರಿಷ್ಕರಣೆಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುತ್ತದೆಂದು ನಿರೀಕ್ಷಿಸಲಾಗಿದೆ.
10+2ಗೆ ಗುಡ್​ಬೈ: 2023-24ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನ ಗೊಳಿಸಲಾಗುವ ಎನ್​ಇಪಿ, 10+2 ಚೌಕಟ್ಟಿಗೆ ವಿದಾಯ ಹೇಳಲಿದೆ. ಅದರ ಬದಲು ನಾಲ್ಕು ಹಂತದ ಕಲಿಕೆಯನ್ನು ಅನುಸರಿಸಲಾಗುತ್ತದೆ. ತಳಹದಿ, ಸಿದ್ಧತೆ, ಮಾಧ್ಯಮಿಕ ಮತ್ತು ಸೆಕೆಂಡರಿ ಇವೇ ಆ ಹಂತಗಳಾಗಿವೆ. ಆ ಮೂಲಕ 5+4+3+4 ಪಠ್ಯಕ್ರಮ ಚೌಕಟ್ಟನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶವನ್ನು ಎನ್​ಇಪಿಯಲ್ಲಿ ಉಲ್ಲೇಖಿಸಲಾಗಿದೆ 3, 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಶಾಲಾ ಪರೀಕ್ಷೆಗಳನ್ನು ಬರೆಯಲಿದ್ದಾರೆ.
ಶಿಕ್ಷಣ ನೀತಿಯು ಇದೇ ಮೊದಲ ಬಾರಿಗೆ ತಳಹದಿ ಹಂತದಲ್ಲಿ ಪಠ್ಯಕ್ರಮವನ್ನು ರೂಪಿಸಿದೆ. ಹೊಸ ಶಿಕ್ಷಣ ನೀತಿಯ ಅನುಷ್ಠಾನವು ರಾಜ್ಯದಿಂದ ರಾಜ್ಯ ಹಾಗೂ ಸಂಸ್ಥೆಯಿಂದ ಸಂಸ್ಥೆಗೆ ವ್ಯತ್ಯಾಸ ಆಗಬಹುದು, ಆದರೆ ಪ್ರಮುಖ ಗುರಿ ಒಂದೇ ಆಗಿರುತ್ತದೆ.
ವಿದ್ಯಾರ್ಥಿಗಳಿಗೆ ಆಯ್ಕೆ ಅವಕಾಶ
ಎನ್​ಇಪಿ ಅಡಿಯಲ್ಲಿ ಉನ್ನತ ಶಿಕ್ಷಣವು ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ ಹಾಗೂ ಒಂದು ನಿರ್ದಿಷ್ಟ ಚೌಕಟ್ಟಿಗೆ ಅಂಟಿಕೊಳ್ಳುವ ಬದಲು ವಿದ್ಯಾರ್ಥಿಗಳು ತಮಗೆ ಸರಿ ಕಾಣುವ ಶೈಕ್ಷಣಿಕ ಪಯಣವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದರಲ್ಲಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಹೊರ ತರಲು ಅದು ಪ್ರೋತ್ಸಾಹಿಸಲಿದೆ.
ಭಗವದ್ಗೀತೆ, ವೇದಕ್ಕೆ ಪಠ್ಯದಲ್ಲಿ ಅವಕಾಶ?
ಎನ್​ಇಪಿ ಅಡಿಯಲ್ಲಿ ಹೊಸ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆ ಮತ್ತು ವೇದಗಳಂಥ ಹಿಂದು ಧರ್ಮಗ್ರಂಥಗಳನ್ನು ಬೋಧಿಸುವಂತೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಈಶಾನ್ಯ ಭಾಗ ಸಹಿತ ದೇಶದಾದ್ಯಂತದ ‘ಹೆಚ್ಚು ಬೆಳಕಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರ’ ಕೊಡುಗೆಗಳನ್ನು ಕೂಡ ಎನ್​ಸಿಇಆರ್​ಟಿ ಪಠ್ಯಗಳಲ್ಲಿ ಸಮಾನ ಮಹತ್ವದೊಂದಿಗೆ ಸೇರಿಸುವಂತೆಯೂ ಸಮಿತಿ ಸಲಹೆ ಮಾಡಿದೆ. ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಐತಿಹಾಸಿಕ ವಲ್ಲದ ಅಂಶ’ಗಳ ಉಲ್ಲೇಖವಿರುವುದನ್ನು ಗುರುತಿಸಲು, ಭಾರತೀಯ ಇತಿಹಾಸದ ಎಲ್ಲ ಕಾಲಘಟ್ಟಗಳಿಗೆ ಸಮಾನ ಅವಕಾಶ ಹಾಗೂ ಮಹಾನ್ ಮಹಿಳಾ ಸಾಧಕರಿಗೆ ಸಮಾನ ಪ್ರಾತಿನಿಧ್ಯ ನೀಡಲು ಸಮಿತಿಯನ್ನು ರಚಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
