ನವದೆಹಲಿ:ಕೇಂದ್ರ ಸರ್ಕಾರದಲ್ಲಿ ಅತಿಗಣ್ಯ ವ್ಯಕ್ತಿಗಳ (ವಿಐಪಿ) ಭದ್ರತಾ ವ್ಯವಸ್ಥೆ ಪರಾಮಶಿಸಿ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ. ಹತ್ತಕ್ಕೂ ಹೆಚ್ಚು ಹೈ-ರಿಸ್ಕ್ ವ್ಯಕ್ತಿಗಳಿಗೆ ನೀಡಲಾಗಿರುವ ಎನ್​ಎಸ್​ಜಿ ಮತ್ತು ಐಟಿಬಿಪಿ ಭದ್ರತೆಯನ್ನು ಹಿಂಪಡೆದು ಆ ಹೊಣೆ ಅರೆಸೇನಾ ಪಡೆಗಳಿಗೆ ವಹಿಸಲು ತೀರ್ವನಿಸಲಾಗಿದೆ.
ವಿವಿಧ ರಾಜಕೀಯ ನಾಯಕರು, ಮಾಜಿ ಸಚಿವರು, ನಿವೃತ್ತ ಹಿರಿಯ ಅಧಿಕಾರಿಗಳು ಸೇರಿದಂತೆ ಕೆಲವರಿಗೆ ನೀಡಲಾಗಿರುವ ಉನ್ನತ ಮಟ್ಟದ ಭದ್ರತೆ ಕಡಿಮೆ ಮಾಡಲಾಗುವುದು ಇಲ್ಲವೇ ಹಿಂದೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿಐಪಿಗಳ ಭದ್ರತೆಗೆ ಒದಗಿಸಲಾಗಿರುವ ಎಸ್​ಎಸ್​ಜಿಯ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳ ಸೇವೆ ಸಂಪೂರ್ಣ ಹಿಂದೆಗೆದುಕೊಳ್ಳುವ ಪ್ರಸ್ತಾವನೆ ಹಲವು ವರ್ಷಗಳಿಂದಲೂ ಇದೆ. ಅದನ್ನು ಈಗ ಜಾರಿಗೊಳಿಸುವ ಕಾಲ ಬಂದಿದೆ. ಝುಡ್ ಪ್ಲಸ್ ಕೆಟಗರಿಯ ಭದ್ರತೆ ಈಗ 9 ವಿಐಪಿಗಳು ಪಡೆಯುತ್ತಿದ್ದು, ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ವಿಐಪಿ ಸೆಕ್ಯುರಿಟಿ ಘಟಕದಿಂದ ಭದ್ರತೆ ಒದಗಿಸಲಾಗುವುದು. ಅದೇ ರೀತಿ, ಕೆಲವು ವಿಐಪಿಗಳಿಗೆ ಈಗ ಇಂಡೋಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಭದ್ರತೆ ಒದಗಿಸಿದ್ದು, ಅದನ್ನು ವಾಪಸ್ ಪಡೆದು, ಸಿಆರ್​ಪಿಎಫ್ ಅಥವಾ ಸಿಐಎಸ್​ಎಫ್​ನಿಂದ ಭದ್ರತೆ ಒದಗಿಸುವ ನಿರೀಕ್ಷೆ ಇದೆ.
ಎನ್​ಎಸ್​ಜಿ ಭದ್ರತೆ ಈಗ ಯಾರಿಗಿದೆ?:ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ಸಚಿವರಾದ ರಾಜನಾಥ್​ಸಿಂಗ್, ಸರ್ಬಾನಂದ ಸೋನೋವಾಲ್, ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ, ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ರಮಣ್​ಸಿಂಗ್, ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್, ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ, ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು.
ಐಟಿಬಿಪಿ ರಕ್ಷಣೆ ಯಾರಿಗಿದೆ?:ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ, ನ್ಯಾಷನಲ್ ಕಾನ್ಪರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತಿತರರು.
ಏಕೆ ಈ ಬದಲಾವಣೆ?:ಒಂದೇ ಬಾರಿಗೆ ಹಲವು ಕಡೆ ಭಯೋತ್ಪಾದಕ ದಾಳಿಗಳು ಸಂಭವಿಸಿದರೆ ಹೆಚ್ಚಿನ ಎನ್​ಎಸ್​ಜಿ ಕಮಾಂಡೋಗಳು ಆ ಕರ್ತವ್ಯಕ್ಕೆ ಧಾವಿಸಬೇಕಾಗುತ್ತದೆ. ಹಾಗಾಗಿ ವಿಐಪಿಗಳ ಭದ್ರತೆಗೆ ಅವರನ್ನು ನಿಯೋಜಿಸುವುದು ಬೇಡ ಎಂಬ ಅಭಿಪ್ರಾಯ 2012ರಿಂದಲೂ ಕೇಳಿಬರುತ್ತಿದೆ. ಅಯೋಧ್ಯೆಯ ರಾಮ ಮಂದಿರ, ದಕ್ಷಿಣ ಭಾರತದ ಕೆಲವು ಪ್ರಸಿದ್ಧ ಸ್ಥಳಗಳು ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಎನ್​ಎಸ್​ಜಿ ಕಮಾಂಡೋಗಳನ್ನು ‘ಸ್ಟ್ರೈಕ್ ಟೀಮ್​ಗಳಾಗಿ ನಿಯೋಜಿಸುವುದು ಕೇಂದ್ರ ಗೃಹ ಸಚಿವಾಲಯದ ಉದ್ದೇಶವಾಗಿದೆ. 80ರ ದಶಕದಲ್ಲಿ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳ ಪಡೆ ರಚಿಸುವ ಪರಿಕಲ್ಪನೆ ಮೂಡಿದ್ದೇ ಇಂತಹ ಉದ್ದೇಶಕ್ಕೆ ಬಳಸುವುದಕ್ಕಾಗಿ ಎಂದು ಹೇಳಲಾಗುತ್ತಿದೆ.
ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಚ್​​.ಡಿ ಕುಮಾರಸ್ವಾಮಿ !

ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಬಿಡಿ: ಪ್ರಧಾನಿ ಮೋದಿ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + seventeen =
Remember me
