ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿರುವ ನೂತನ ಸಂಸತ್ ಭವನ ವೈಭವೋಪೇತವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾವರಣಗೊಂಡಿದ್ದು, ಕನ್ನಡದ ಕಂಪು ಪಸರಿಸಿದೆ.
ಸಂಸತ್ ಭವನದ ಒಳಭಾಗದಲ್ಲಿ ಭಾರತೀಯ ಪರಂಪರೆಯ ಸನಾತನ ಸಂಸ್ಕೃತಿಯ ಅನಾವರಣಗೊಳಿಸುವ ಮೂಲಕ ಮತ್ತೊಮ್ಮೆ ಭಾರತದ ಗತವೈಭವವನ್ನು ಜಗತ್ತಿಗೆ ಸಾರಲಾಗಿದೆ. ಅಂತೆಯೇ ನೂತನ ಸಂಸತ್‌ ಭವನದಲ್ಲಿ ಜಗಜ್ಯೋತಿ ಬಸವಣ್ಣನವರ ವಚನವನ್ನು ಅಚ್ಚೊತ್ತಲಾಗಿದೆ. ಜತೆಗೆ ಹಂಪಿಯ ಕಲ್ಲಿನ ರಥವನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ.
ಇದನ್ನೂ ಓದಿ:ನೂತನ ಸಂಸತ್ ಭವನ ಉದ್ಘಾಟನೆ; ಫೋಟೋ ಝಲಕ್​ ಇಲ್ಲಿದೆ…
ಕಳಬೇಡ, ಕೊಲಬೇಡಹುಸಿಯ ನುಡಿಯಲು ಬೇಡಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ,
ಎಂಬ ಬಸವಣ್ಣನವರ ವಚನವನ್ನು ನೂತನ ಸಂಸತ್ ಭವನದಲ್ಲಿ ಬರೆಯಲಾಗಿದೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಜತೆಗೆ ಸಂಸತ್ ಭವನದಲ್ಲಿ ಮೂಡಿರುವ ಕನ್ನಡದ ಕಂಪಿನ ಬಗ್ಗೆ ರಾಜ್ಯದ ಜನರು ಮಾತನಾಡುತ್ತಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಸಂಸತ್ತಿನಲ್ಲಿ ಕನ್ನಡದ ಕಂಪು.
ಬಸವಣ್ಣರ ವಚನ, ಮಧ್ವರ ಪ್ರೇರಣೆ, ಹಂಪಿಯ ರಥದ ವೈಭವ!#KarnatakainNewParliamentpic.twitter.com/n3d5XWACX8
— Tejasvi Surya (@Tejasvi_Surya)May 28, 2023
ಈ ಬಗ್ಗೆ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಶತಶತಮಾನಗಳಿಂದ ಈ ನಾಡಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಪ್ರಜ್ವಲಿಸುತ್ತಿತ್ತು ಎನ್ನುವುದಕ್ಕೆ ಬಸವಣ್ಣನವರ12ನೇ ಶತಮಾನದ ಅನುಭವ ಮಂಟಪವೇ ಸಾಕ್ಷಿ. ಇಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ನಮ್ಮ ಮಹಾನ್ ಸಾಧಕರಿಗೆ, ಅವರ ಶ್ರೇಷ್ಠ ಬೋಧನೆಗಳಿಗೆ, ಐತಿಹಾಸಿಕ ಹಿರಿಮೆಗಳಿಗೆ ಶಾಶ್ವತ ಸ್ಥಾನ ಕಲ್ಪಿಸಿ ಗೌರವ ಸಲ್ಲಿಸಿರುವುದು ಜನತೆಯ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
