ನವದೆಹಲಿ:ಹೊಸದಾಗಿ ನಿರ್ಮಾಣವಾಗಲಿರುವ ಸಂಸತ್​ ಭವನಕ್ಕೆ ಭೂಮಿ ಪೂಜೆ ನಡೆಸುವ ದಿನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಡಿಸೆಂಬರ್​ 10ರಂದು ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿದ್ದು, 2021ರ ಆಗಸ್ಟ್​ 15ರ ವೇಳೆಗೆ ನೂತನ ಸಂಸತ್​ ಭವನ ಸಿದ್ಧವಿರಲಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಮೀನು ಹಿಡಿಯೋಣ ಬಾರೇ ಎಂದ; ಬರಲೊಪ್ಪದ ಪತ್ನಿಗೆ ಪತಿ ಮಾಡಿದ್ದೇನೆಂದು ತಿಳಿದರೆ ಬೆಚ್ಚಿ ಬೀಳುತ್ತೀರ!
ಭಾರತದ 75ನೇ ಸ್ವಾತಂತ್ರೋತ್ಸವದ ಸಮಯದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಅಧಿವೇಶನವನ್ನು ನಡೆಸಲಾಗುವುದು. ಈ ಅಧಿವೇಶನ ಹೊಸ ಸಂಸತ್​ ಭವನದಲ್ಲಿಯೇ ನಡೆಯಲಿದೆ. ಡಿಸೆಂಬರ್​ 10ರಂದು ಮಧ್ಯಾಹ್ನ 1 ಗಂಟೆಗೆ ಮೊದಲನೇ ಕಲ್ಲನ್ನಿಟ್ಟು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕೂಲಿ ಕಾರ್ಮಿಕನಿಂದ ಕೋಟ್ಯಂತರ ರೂಪಾಯಿ ಜಿಎಸ್​ಟಿ ವಂಚನೆ! ಪ್ರಕರಣದ ಹಿಂದಿದೆ ದೊಡ್ಡ ಕಥೆ
ಹೊಸ ಸಂಸತ್​ ಭವನವು ಈಗಿರುವ ಸಂಸತ್​ ಭವನಕ್ಕಿಂತ 17 ಸಾವಿರ ಚದರ ಮೀಟರ್​ ದೊಡ್ಡದಾಗಿರಲಿದೆ. ಒಟ್ಟು 64,500 ಚದರ ಮೀಟರ್​ನಲ್ಲಿ ಸಂಸತ್​ ನಿರ್ಮಿಸಲಾಗುವುದು. ಲೋಕಸಭೆಯಲ್ಲಿ 888 ಸದಸ್ಯರಿಗೆ ಸೀಟುಗಳನ್ನು ಅಳವಡಿಸಲಾಗುವುದು. ರಾಜ್ಯಸಭೆಯಲ್ಲಿ 326 ಸೀಟುಗಳಿರಲಿವೆ. ಲೋಕಸಭೆಯೊಂದರಲ್ಲೇ 1224 ಜನರಿಗೆ ಕೂರುವ ಅವಕಾಶವಿರಲಿದೆ. ಇದು ಭೂಕಂಪ ನಿರೋಧಕ ಕಟ್ಟಡವಾಗಿರಲಿದೆ. 2000 ಕಾರ್ಮಿಕರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಟ್ಟು 971 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸತ್​ ಭವನ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಆತ್ಮನಿರ್ಭರ ಭಾರತದ ದೇವಸ್ಥಾನ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
