ವಾರಾಣಸಿ:ಪ್ರಖ್ಯಾತ ಕಾಶಿ ವಿಶ್ವನಾಥನ ದರ್ಶನಕ್ಕೆ ಇನ್ನು ಡ್ರೆಸ್​ ಕೋಡ್​ ಜಾರಿಯಾಗುತ್ತಿದೆ.
ಜ್ಯೋತಿರ್ಲಿಂಗದ ಸ್ಪರ್ಶಿಸುವವರು (ಸ್ಪರ್ಶ ದರ್ಶನ) ಇನ್ನು ಜುಬ್ಬಾ- ಪಂಚೆ ಹಾಕಬೇಕು. ಇಂತಹದ್ದೊಂದು ಮನವಿಯನ್ನು ಕಾಶಿ ವಿದ್ವತ್​ ಪರಿಷದ್​ ಮಾಡಿದೆ. ಈ ಪರಿಷದ್​ ಸಂಸ್ಕೃತ ಪಂಡಿತರು ಮತ್ತು ವೈದಿಕ ತಜ್ಞರನ್ನೊಳಗೊಂಡ ಸನಾತನ ಸಂಸ್ಥೆ.
ಯಾವ ಭಕ್ತರು ಪ್ಯಾಂಟ್​, ಶರ್ಟ್​ ಅಥವಾ ಜೀನ್ಸ್​ ಬಟ್ಟೆ ಹಾಕಿರುತ್ತಾರೋ ಅವರು ದೂರದಿಂದ ವಿಶ್ವನಾಥನ ದರ್ಶನ ಮಾಡಬಹುದು ಅಷ್ಟೆ. ಅವರಿಗೆ ಗರ್ಭಗುಡಿಯೊಳಗೆ ಪ್ರವೇಶಿವಿಲ್ಲ.
ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಡಾ. ನೀಲಕಂಠ ತಿವಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮನವಿಯನ್ನು ಪರಿಷದ್​ನ ಸದಸ್ಯರು​ ಮಾಡಿದರು. ಜತೆಗೆ ಸ್ಪರ್ಶ ದರ್ಶನದ ಸಮಯವನ್ನು ಹೆಚ್ಚಿಸಬೇಕು, ಇದರಿಂದ ಹೆಚ್ಚು ಹೆಚ್ಚು ಭಕ್ತರಿಗೆ ದರ್ಶನ ದೊರೆಯಲಿದೆ ಎಂದರು.
“ಡ್ರೆಸ್​ಕೋಡ್​ ಬಗ್ಗೆ ದೇಗುಲದ ಆಡಳಿತ ಮಂಡಳಿ ಶೀಘ್ರ ಕ್ರಮ ಕೈಗೊಳ್ಳಲಿದೆ. ಇಲ್ಲಿನ ಅರ್ಚಕರಿಗೂ ಡ್ರೆಸ್​ಕೋಡ್​ ಮಾಡಲಾಗುವುದು. ಅಷ್ಟು ಜನರ ಗುಂಪಿನಲ್ಲಿ ಅರ್ಚಕರನ್ನು ಗುರುತಿಸಲು ಇದು ಸಹಾಯವಾಗಲಿದೆ” ಎಂದು ಸಚಿವ ತಿವಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eleven =
Remember me
