ನವದೆಹಲಿ:ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಡಯಗ್ನೋಸ್ಟಿಕ್​ ಲ್ಯಾಬ್​ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ದೇಶದ ಕೋವಿಡ್​ ಪರೀಕ್ಷಾ ನಿಯಮವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ.
ಆರೋಗ್ಯಯುತ ಅಂತಾರಾಜ್ಯ ಪ್ರಯಾಣಿಕರು ಮತ್ತು ಚೇತರಿಕೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ಕೋವಿಡ್ ರೋಗಿಗಳಿಗೆ ಕರೊನಾ ಪರೀಕ್ಷೆ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ಸುಮಾರು 2,500 ಕ್ಕೂ ಲ್ಯಾಬ್​ ಇವೆ. ಪ್ರತಿದಿನ ಕರೊನಾ ಪ್ರಕರಣಗಳು ಏರಿಕೆ ಆಗುತ್ತಿರುವುದರಿಂದ ಭಾರಿ ಒತ್ತಡದಲ್ಲಿ ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಹೇಳಿದೆ.
ರ್ಯಾಪಿಡ್​ ಅಥವಾ ಆರ್​ಟಿಪಿಸಿಆರ್ ಟೆಸ್ಟ್​ನಲ್ಲಿ ಒಮ್ಮೆ ಪಾಸಿಟಿವ್​ ಬಂದರೆ ಮತ್ತೆ ಪರೀಕ್ಷಿಸುವಂತಿಲ್ಲ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕೋವಿಡ್ ರೋಗಲಕ್ಷಣಗಳುಳ್ಳ ಜನರು, ಅನಿವಾರ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಅಗತ್ಯ ಪ್ರಯಾಣವನ್ನು ಕೈಗೊಳ್ಳುವ ಎಲ್ಲಾ ಸೋಂಕು ಲಕ್ಷಣರಹಿತ ವ್ಯಕ್ತಿಗಳು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ಸರ್ಕಾರ ತಿಳಿಸಿದೆ.
ಕಳೆದೊಂದು ವಾರದಿಂದ ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕರೊನಾ ಪ್ರಕರಣಗಳು ವರದಿ ಆಗುತ್ತಲೇ ಇದೆ. ಮಂಗಳವಾರ ದೇಶದಲ್ಲಿ 3.35 ಲಕ್ಷ ಪ್ರಕರಣಗಳು ದಾಖಲಾಗಿದ್ದು, 24 ಗಂಟೆಯಲ್ಲಿ 3,449 ಮಂದಿ ಮೃತಪಟ್ಟಿದ್ದಾರೆ. ಅನೇಕ ರಾಜ್ಯಗಳು ಆಕ್ಸಿಜನ್​ ಕೊರತೆ ಎದುರಿಸುತ್ತಿರುವ ಬಗ್ಗೆ ತಿಳಿಸಿವೆ.
ಇದರ ನಡುವೆ ಆರ್​ಟಿಪಿಸಿಆರ್ ಪರೀಕ್ಷಾ ಫಲಿತಾಂಶಗಳು ಹಲವಾರು ದಿನಗಳವರೆಗೆ ವಿಳಂಬವಾಗುತ್ತಿವೆ ಎಂಬ ವರದಿಗಳು ಅನೇಕ ಕೋವಿಡ್ ಪೀಡಿತ ರಾಜ್ಯಗಳಿಂದ ಹೊರಬಂದಿವೆ. ಹೀಗಾಗಿ ಹೆಚ್ಚು ಹೆಚ್ಚು ಜನರು ಈಗ ದುಬಾರಿ ಸಿಟಿ-ಸ್ಕ್ಯಾನ್‌ಗಳ ಮೊರೆ ಹೋಗುತ್ತಿದ್ದಾರೆ. ಸಿಟಿ ಸ್ಕ್ಯಾನ್​ ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣಗಳನ್ನು ಪತ್ತೆ ಮಾಡುತ್ತದೆ. ಅಲ್ಲದೆ, ಹಲವೆಡೆ ಸಿಟಿ ಸ್ಕ್ಯಾನ್​ ದುರ್ಬಳಕೆ ಆಗುತ್ತಿರುವ ಆರೋಪವು ಇದೆ.(ಏಜೆನ್ಸೀಸ್​)
ಕರೊನಾ ಆಪತ್ತಿನಲ್ಲಿ ಮಿಡಿದ ಅಂತಃಕರಣ; ‘ಸಮರ್ಥ ಭಾರತ’ದ ಸಮಾಜ ಸೇವೆ

ಮೂಗಿನಲ್ಲಿ ಔಷಧ ಪದ್ಧತಿಗೆ ಇತಿಹಾಸದ ಪುರಾವೆ: ಪಂಚಕರ್ಮದ ಪ್ರಧಾನ ಚಿಕಿತ್ಸೆಗಳಲ್ಲಿ ನಸ್ಯಕರ್ಮವೂ ಒಂದು; ಲಿಂಬೆರಸಕ್ಕಿದೆ ಕಫ ನಿವಾರಿಸುವ ವಿಶೇಷ ಗುಣ

ಬೆಡ್ ಬೇಡಿಕೆ ಹೆಚ್ಚಲು ಕಾರಣವಿದು!; ಜನರಲ್ಲಿನ ಭಯ ಹೋಗಲಾಡಿಸಲು ಸಿಎಂ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 13 =
Remember me
