ನವದೆಹಲಿ:ಟ್ವಿಟರ್, ಫೇಸ್​ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ, ಒಟಿಟಿ ವೆಬ್ ಸೀರೀಸ್​ಗಳ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಿಸುತ್ತಿರುವಾಗಲೇ ಅವುಗಳಿಗೆ ಅಂಕುಶ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಗುರುವಾರ ನಿಯಮಗಳನ್ನು ಪ್ರಕಟಿಸಿದೆ.
ಫೇಸ್​ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳು ಮತ್ತು ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೖೆಮ್ ಮುಂತಾದ ಓವರ್ ದ ಟಾಪ್ (ಒಟಿಟಿ) ಮೀಡಿಯಾಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳುವುದರ ಅವಶ್ಯಕತೆಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ‘ಇನ್​ಫಾಮೇಷನ್ ಟೆಕ್ನಾಲಜಿ(ಇಂಟರ್​ವಿುೕಡಿಯರಿ ಗೈಡ್​ಲೈನ್ಸ್ ಆಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್ 2021’ ಇದಾಗಿದ್ದು, ಮೂರು ಸ್ತರದ ಸ್ವಯಂ ನಿಯಂತ್ರಣ ಮಾದರಿ ಇದರಲ್ಲಿದೆ. ಸೋಷಿಯಲ್ ಮೀಡಿಯಾದ ದುರ್ಬಳಕೆ ತಡೆಯುವುದು ಇದರ ಉದ್ದೇಶ ಎಂದು ಸಚಿವರು ವಿವರಿಸಿದರು.
ಸಾಮಾಜಿಕ ಮಾಧ್ಯಮ ನಿಯಮ
ಒಟಿಟಿ, ಡಿಜಿಟಲ್ ಮೀಡಿಯಾ ನಿಯಮ
1. ಒಟಿಟಿ ಫ್ಲಾಟ್​ಫಾರಂಗಳು ಮತ್ತು ಆನ್​ಲೈನ್ ನ್ಯೂಸ್, ಡಿಜಿಟಲ್ ಮೀಡಿಯಾ ಸಂಸ್ಥೆಗಳಿಗೆ ನೀತಿ ಸಂಹಿತೆ ಅನ್ವಯ
2. ಒಟಿಟಿ ಫ್ಲಾಟ್​ಫಾರಂಗಳು ಕಂಟೆಂಟ್​ಗಳನ್ನು ಸ್ವಯಂ ವಯೋಮಾನ ಆಧಾರಿತವಾಗಿ ಯು (ಯೂನಿವರ್ಸಲ್), ಯು/ಎ 7+,ಯು/ಎ 13+, ಯು/ಎ 16+ ಮತ್ತು ಎ (ಅಡಲ್ಟ್) ಎಂದು 5 ವರ್ಗೀಕರಣ ಮಾಡಬೇಕು.
3. 13 ವರ್ಷ ಮೇಲ್ಪಟ್ಟವರು ವೀಕ್ಷಿಸಬಹುದಾದ ಕಂಟೆಂಟ್​ಗಳಿಗೆ ಪೇರೆಂಟಲ್ ಲಾಕ್ ಒದಗಿಸಬೇಕು.
4. ಕಾರ್ಯಕ್ರಮದ ರೇಟಿಂಗ್ ನಮೂದಿಸುವುದು ಕಡ್ಡಾಯವಾಗಿದ್ದು, ಯಾರು ಅದನ್ನು ವೀಕ್ಷಿಸಬಹುದು ಎಂಬುದನ್ನು ನಿರ್ಧರಿಸುವುದಕ್ಕೆ ಅನುಕೂಲವಾಗುತ್ತದೆ.
5. ಸುದ್ದಿ ಪ್ರಕಟಿಸುವ ಡಿಜಿಟಲ್ ಮೀಡಿಯಾಗಳು ರೆಗ್ಯುಲೇಶನ್ ಆಕ್ಟ್ ನಿಯಮ ಪಾಲಿಸಬೇಕು.
6. ಮೂರು ಸ್ತರದ ಕುಂದುಕೊರತೆ ನಿವಾರಣಾ ವ್ಯವಸ್ಥೆ ಜಾರಿ – ಪಬ್ಲಿಷರ್​ಗಳ ಸ್ವಯಂ ನಿಯಂತ್ರಣ, ಸ್ವಯಂ ನಿಯಂತ್ರಣ ಸಂಸ್ಥೆಗಳ ಮೂಲಕ ಸ್ವಯಂ ನಿಯಂತ್ರಣ ಮತ್ತು ಓವರ್​ಸೈಟ್ ಮೆಕಾನಿಸಂ ಜಾರಿಯಲ್ಲಿ ಇರಲಿದೆ.
7. ಭಾರತದಲ್ಲೇ ಇರುವ ಕುಂದುಕೊರತೆ ಅಧಿಕಾರಿಯನ್ನು ಪಬ್ಲಿಷರ್​ಗಳು ನೇಮಕ ಮಾಡಿಕೊಳ್ಳಬೇಕು. ಅವರು 15 ದಿನದೊಳಗೆ ಕುಂದುಕೊರತೆ ಪರಿಹರಿಸಬೇಕು.
8. ಈ ಸಂಸ್ಥೆಗಳನ್ನು ವಾರ್ತಾ ಪ್ರಸಾರ ಸಚಿವಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು.
10. ಓವರ್ ಸೈಟ್ ಮೆಕಾನಿಸಂನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ರೂಪಿಸಲಿದೆ.
11. ಅಂತರ್ ಇಲಾಖೆ ಸಮಿತಿಯನ್ನೂ ಕುಂದು ಕೊರತೆ ದೂರು ವಿಚಾರಣೆಗೆ ನೇಮಕ ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
