ನವದೆಹಲಿ:ಜನವರಿಯಿಂದ ಹಲವು ಆರ್ಥಿಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಬ್ಯಾಂಕ್ ಲಾಕರ್ ಒಪ್ಪಂದ ನಿಯಮ ಬದಲಾವಣೆ, ಎನ್​ಪಿಎಸ್ ಚಂದಾದಾರರಿಗೆ ಕೋವಿಡ್ ಸಾಂಕ್ರಾಮಿಕದ ವೇಳೆ ನೀಡಲಾಗಿದ್ದ ಭಾಗಶಃ ಹಣ ಹಿಂಪಡೆಯುವ ನಿಯಮ ರದ್ದು ಸೇರಿ ಆರ್ಥಿಕತೆ ಸಂಬಂಧಿಸಿದ ಕೆಲವು ಬದಲಾವಣೆಗಳು ಆಗಲಿವೆ.
ಬ್ಯಾಂಕ್ ಲಾಕರ್ ನಿಯಮ ಪರಿಷ್ಕರಣೆ
ಬ್ಯಾಂಕ್​ಗಳಲ್ಲಿ ಗ್ರಾಹಕರು ಪಡೆಯುವ ಸೇಫ್ ಲಾಕರ್ ಒಪ್ಪಂದದ ನಿಯವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮವು ಜ.1ರಿಂದ ಜಾರಿಗೆ ಬರಲಿದೆ. ಹೀಗಾಗಿ ಬ್ಯಾಂಕ್​ಗಳು ನವೀಕೃತ ಒಪ್ಪಂದಕ್ಕೆ ಸಹಿ ಹಾಕುವಂತೆ ಎಸ್​ಎಂಎಸ್ ಅನ್ನು ಸೇಫ್ ಲಾಕರ್ ಹೊಂದಿರುವ ಗ್ರಾಹಕರಿಗೆ ಕಳುಹಿಸುತ್ತಿದೆ. 2021ರ ಆಗಸ್ಟ್​ನಲ್ಲಿ ಬ್ಯಾಂಕ್ ಸೇವ್ ಲಾಕರ್ ಕುರಿತ ನಿಯಮವನ್ನು ಬಿಗಿಗೊಳಿಸುವಂತೆ ಸುಪ್ರೀಂಕೋರ್ಟ್ ಆರ್​ಬಿಐಗೆ ಸೂಚಿಸಿತ್ತು.
ತೆರಿಗೆ ವಿನಾಯಿತಿಗೆ ಹೂಡಿಕೆ ಘೋಷಣೆ
ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಬಯಸುವ ತೆರಿಗೆದಾರರು ಹೂಡಿಕೆ ಕುರಿತ ಘೋಷಣೆಯನ್ನು ಸಂಬಂಧಿಸಿದ ಹೂಡಿಕೆಗಳ ರಸೀದಿಯೊಂದಿಗೆ ಸಲ್ಲಿಸಬೇಕು. ಈ ಘೋಷಣೆಯನ್ನು ಮಾರ್ಚ್​ವರೆಗೂ ಸಲ್ಲಿಸಬಹುದಾಗಿದ್ದರೂ ಜನವರಿಯಲ್ಲೇ ಈ ಪ್ರಕ್ರಿಯೆ ಮುಗಿಸಿಕೊಂಡರೆ ಕ್ಷೇಮ.
ವಿಮೆಗೆ ಕೆವೈಸಿ ಕಡ್ಡಾಯ
ಹೊಸ ವರ್ಷದಲ್ಲಿ ಖರೀದಿಸುವ ಆರೋಗ್ಯ, ವಾಹನ, ಪ್ರವಾಸ, ಗೃಹ ವಿಮೆಗಳಿಗೆ ಕೆವೈಸಿ (ನೋ ಯುವರ್ ಕಸ್ಟಮರ್) ಕಡ್ಡಾಯ ಎಂದು ಭಾರತೀಯ ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಐಆರ್​ಡಿಎಐ) ತಿಳಿಸಿದೆ. ಹೊಸದಾಗಿ ಖರೀದಿಸುವ ಈ ವಿಮೆಗಳ ಕಂತಿನ ಮೊತ್ತವನ್ನು ಲೆಕ್ಕಿಸದೆ ಕೆವೈಸಿ ಅರ್ಜಿಯನ್ನು ಗ್ರಾಹಕರು ಭರ್ತಿ ಮಾಡಬೇಕು. ಪ್ರಸ್ತುತದ ನಿಯಮದ ಪ್ರಕಾರ, ಜೀವವಿಮೆ ಖರೀದಿಗೆ ಮಾತ್ರ ಕೆವೈಸಿ ನೀಡುವುದು ಕಡ್ಡಾಯವಾಗಿದೆ. ಈಗ ಅದನ್ನು ಇನ್ನಿತರ ವಿಷಯವಾರು ವಿಮೆಗೂ ವಿಸ್ತರಿಸಲಾಗಿದೆ.
ಪಾಸ್​ಬುಕ್ ಪ್ರತಿ ಪುರಾವೆ ಅಲ್ಲ
ಮ್ಯೂಚುವಲ್ ಫಂಡ್​ನಲ್ಲಿನ ಹೂಡಿಕೆಗೆ ಬ್ಯಾಂಕ್ ಪಾಸ್​ಬುಕ್ ಗುರುತಿನ ಪುರಾವೆ ಎಂದು ಪರಿಗಣಿಸುವುದಿಲ್ಲ. ಆಧಾರ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ ಈ ರೀತಿಯ ಪುರಾವೆಗಳನ್ನು ಒದಗಿಸಬೇಕು.
ಎನ್​ಪಿಎಸ್ ಭಾಗಶಃ ಹಿಂಪಡೆತ ಅಲಭ್ಯ
ಕೋವಿಡ್ ಪರಿಸ್ಥಿತಿಯಲ್ಲಿ ಆರ್ಥಿಕ ಸಹಾಯಕ್ಕಾಗಿ ಬದಲು ಮಾಡಲಾಗಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್​ಪಿಎಸ್) ನಿಯಮವನ್ನು ಸರ್ಕಾರ ಕೈಬಿಟ್ಟಿದೆ. ಇದರಿಂದ ಚಂದಾದಾರರಿಗೆ ಭಾಗಶಃ ಹಣ ಹಿಂಪಡೆಯುವ ಅವಕಾಶ ತಪ್ಪಿದೆ. ಕೋವಿಡ್ ವೇಳೆಯಲ್ಲಿ ಹಣ ಹಂಪಡೆಯಲು ಇಚ್ಛಿಸುವವರು ಸ್ವಯಂ ದೃಢೀಕರಣದ ಮೂಲಕ ಅನ್​ಲೈನ್​ನಲ್ಲಿ ಅರ್ಜಿ ದಾಖಸಬಹುದಾಗಿತ್ತು. ಬದಲಾದ ಈ ನಿಯಮ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಸ್ವಾಯತ್ತ ಸಂಸ್ಥೆಗಳ ಎನ್​ಪಿಎಸ್ ಚಂದಾದಾರಾದ ನೌಕರರಿಗೆ ಅನ್ವಯ ಆಗಲಿದೆ. ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯಲು ಇರುವ ನಿಯಮ ಈ ಹಿಂದಿನಂತೆಯೇ ಇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
