ನವದೆಹಲಿ: ಹಣಕಾಸು ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಗುರುವಾರದಿಂದ (ಡಿ.1) ಕೆಲವು ನಿಯಮ, ಸೇವೆ ಹಾಗೂ ದರದಲ್ಲಿ ಬದಲಾವಣೆ ಆಗಲಿದೆ. ಎಂಟಿಎಂನಲ್ಲಿ ಹಣ ಹಿಂಪಡೆಯುವ ವಿಧಾನ ಬದಲಾಗುವ ನಿರೀೆ ಇದೆ. ಗೃಹಬಳಕೆಯ ಅಡುಗೆ ಅನಿಲ (ಎಲ್​ಪಿಜಿ), ಕೊಳವೆ ಮೂಲಕ ಸರಬರಾಜಾಗುವ ಅಡುಗೆ ಅನಿಲ (ಪಿಎನ್​ಜಿ), ಸಾಂದ್ರೀಕೃತ ಅನಿಲ (ಸಿಎನ್​ಜಿ) ದರ ಪರಿಷ್ಕರಣೆಯಾಗುವ ಸಂಭವ ಇದೆ. ಪಿಂಚಣಿದಾರರು ಜೀವಂತ ಪ್ರಮಾಣಪತ್ರ ಸಲ್ಲಿಸದಿದ್ದರೆ ಡಿಸೆಂಬರ್​ ಪಿಂಚಣಿಗೆ ಸಮಸ್ಯೆ ಆಗಬಹುದು. ಆರ್​ಬಿಐ ರೆಪೊ ದರವನ್ನು ಏರಿಸಿರುವುದರಿಂದ ಅನೇಕ ಬ್ಯಾಂಕ್​ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಸಿವೆ. ಇದರಿಂದ ಸಾಲ ಮರುಪಾವತಿಯ ಇಎಂಐ ದುಬಾರಿ ಆಗಲಿದೆ. ಜತೆಗೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿಯನ್ನು ವಿವಿಧ ಅವಧಿಗೆ, ಮೊತ್ತ ಗರಿಷ್ಠ ಪ್ರಮಾಣಕ್ಕೆ ತಕ್ಕಂತೆ ಪರಿಷ್ಕರಣೆ ಆಗಿದೆ. ಅಂತೆಯೇ, ಹಿರಿಯ ನಾಗರಿಕರ ಠೇವಣಿಗೆ ತುಸು ಹೆಚ್ಚು ಬಡ್ಡಿ ದೊರೆಯಲಿದೆ. ಪಿಂಚಣಿದಾರರ ಪ್ರಮಾಣಪತ್ರ: ಪಿಂಚಣಿದಾರರು ಪ್ರತಿ ವರ್ಷದ ನವೆಂಬರ್​ನಲ್ಲಿ ಬದುಕಿರುವ ಬಗ್ಗೆ ಖಾತ್ರಿ ಪಡಿಸಲು ಸಲ್ಲಿಸಬೇಕಾದ ಪ್ರಮಾಣ ಪತ್ರವನ್ನು ನ.30ರೊಳಗೆ ಸಲ್ಲಿಸಿರಬೇಕು. ತಪ್ಪಿದರೆ ಡಿಸೆಂಬರ್​ನಲ್ಲಿ ಪಿಂಚಣಿ ತಡೆಯಲ್ಪಡುತ್ತದೆ.
ದಂಡ ಶುಲ್ಕದೊಂದಿಗೆ ಐಟಿಆರ್​ ಪಾವತಿಗೆ ಅವಕಾಶ2021&22ನೇ ಸಾಲಿನ ಆದಾಯ ತೆರಿಗೆ ಮಾಹಿತಿ (ರಿಟರ್ನ್ಸ್​) ಅನ್ನು ಇನ್ನೂ ಸಲ್ಲಿಸದವರು ಡಿಸೆಂಬರ್​ 31ರೊಳಗೆ ದಂಡ ಶುಲ್ಕಸಹಿತ ಸಲ್ಲಿಸಲು ಅವಕಾಶ ಇದೆ. ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಒಂದು ಸಾವಿರ ರೂ. ದಂಡ, ವಾರ್ಷಿಕ ವರಮಾನ 5 ಲಕ್ಷ ರೂಪಾಯಿಗಿಂತ ಮೇಲಿದ್ದರೆ 5 ಸಾವಿರ ರೂ ದಂಡ ಕಟ್ಟಬೇಕು. ಹಾಗೆಯೇ ಮುಂಗಡ ತೆರಿಗೆಯ ಮೂರನೇ ಕಂತನ್ನು ಡಿ.15ರೊಳಗೆ ಪಾವತಿಸಲು ಅವಕಾಶ ಇದೆ.
ಅಡುಗೆ ಅನಿಲ ದರನವೆಂಬರ್​ನಲ್ಲಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ದರ ತಗ್ಗಿತ್ತು. ಆದರೆ, ಗೃಹ ಬಳಕೆಯ ಎಲ್​ಪಿಜಿ ಬೆಲೆ ಇಳಿಸಿರಲಿಲ್ಲ. ಈ ತಿಂಗಳು ಬೆಲೆ ಕಡಿಮೆಯಾಗುವ ನಿರೀೆ ಇದೆ. ಅಕ್ಟೋಬರ್​ ಮಾಹೆಯ ಹಣದುಬ್ಬರ ತಗ್ಗಿರುವುದರಿಂದ ಪಿಎನ್​ಜಿ, ಸಿಎನ್​ಜಿ ದರಗಳು ತಗ್ಗುವ ಸಂಭವ ಇದೆ.
ಡಿಜಿಟಲ್​ ರುಪಿ ರಿಟೇಲ್​ಗೆ ಚಾಲನೆ2022&23ರ ಬಜೆಟ್​ ಮಂಡನೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಡಿಜಿಟಲ್​ ಕರೆನ್ಸಿ ರಿಟೇಲ್​ (ಚಿಲ್ಲರೆ) ಬಳಕೆ ಗುರುವಾರ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಸರ್ಕಾರ ಮಾನ್ಯ ಮಾಡಿರುವ ಎಂಟು ಬ್ಯಾಂಕ್​ಗಳಲ್ಲಿ ಡಿಜಿಟಲ್​ ವ್ಯಾಲೆಟ್​ ಹೊಂದಿರುವ ಗ್ರಾಹಕರು ಭೌತಿಕ ನೋಟುಗಳ ಮುಖಬೆಲೆಯಲ್ಲೇ ಟೋಕನ್​ ರೂಪದಲ್ಲಿ ವರ್ಚುವಲ್​ ಆಗಿ ಲಭ್ಯವಾಗುವ “ಡಿಜಿಟಲ್​ ರುಪಿ’ ಮೂಲಕ ವಹಿವಾಟು ನಡೆಸಬಹುದು. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟು ಸಾಧ್ಯವಿದೆ. ವ್ಯಾಪಾರಿಗಳ ಕ್ಯೂಆರ್​ ಕೋಡ್​ ಸ್ಕಾನ್​ ಮಾಡಿಯೂ ಹಣ ವರ್ಗಾವಣೆ ಮಾಡಬಹುದು. ಸದ್ಯ ಬೆಂಗಳೂರು, ನವದೆಹಲಿ, ಭುವನೇಶ್ವರದಲ್ಲಿ ಪೈಲಟ್​ ಯೋಜನೆ ಇಂದು ಆರಂಭವಾಗಲಿದೆ. ನವೆಂಬರ್​ 1ರಿಂದ ಡಿಜಿಟಲ್​ ರುಪಿಯ ಹೋಲ್​ಸೇಲ್​ (ಸಗಟು) ವಹಿವಾಟಿನ ಪೈಲಟ್​ ಯೋಜನೆ ಆರಂಭವಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
