ನವದೆಹಲಿ:ಹೊಸ ಕ್ಯಾಲೆಂಡರ್ ವರ್ಷ ನಾಳೆ ಶುರುವಾಗುತ್ತಿದ್ದು, ಗ್ರಾಹಕ ಹಿತದೃಷ್ಟಿಯ ಹೊಸ ನಿಯಮಗಳು ಚಾಲ್ತಿಗೆ ಬರುತ್ತಿವೆ. ದರ ಪರಿಷ್ಕರಣೆ, ಬೆಲೆ ಹೆಚ್ಚಳ ಮುಂತಾಗಿ ಜೇಬಿಗೂ ಹೊರೆ ಆಗುವ ಕ್ರಮಗಳೂ ಜಾರಿಯಾಗುತ್ತಿವೆ. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಆನ್​ಲೈನ್ ಪಾವತಿ ವ್ಯವಸ್ಥೆ ಬಿಗಿ:ಆರ್​ಬಿಐನ ಹೊಸ ನಿಯಮ ಪ್ರಕಾರ, ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಫ್ಲಿಪ್​ಕಾರ್ಟ್, ಆನ್​ಲೈನ್ ಡೆಲಿವರಿ ವೇದಿಕೆಗಳಾದ ಜೊಮ್ಯಾಟೊ, ಸ್ವಿಗ್ಗಿ ಅಥವಾ ಬೇರಾವುದೇ ಆನ್​ಲೈನ್ ವಹಿವಾಟು ಮಾಡುವುದಾದರೂ ಗ್ರಾಹಕರು ಜನವರಿ 1ರಿಂದ ಪ್ರತಿ ವಹಿವಾಟಿನ ಸಂದರ್ಭದಲ್ಲೂ ಕಾರ್ಡ್ ಮಾಹಿತಿಯನ್ನು ತುಂಬ ಬೇಕಾಗುತ್ತದೆ. ಯಾವುದೇ ಕಂಪನಿಗಳು ಗ್ರಾಹಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ವಿವರಗಳನ್ನು ಕಂಪನಿಗಳು ಶೇಖರಿಸಿ ಇಡುವಂತಿಲ್ಲ. ಆದಾಗ್ಯೂ, ಗ್ರಾಹಕರು ಒಪ್ಪಿಗೆ ನೀಡಿದರೆ ಈ ವೇದಿಕೆಗಳು ಅವರ ಕಾರ್ಡ್​ಗಳ ಮಾಹಿತಿ ಸೇವ್ ಮಾಡಿಕೊಳ್ಳಲು ಅನುಮತಿ ನೀಡಿದರೆ ಪದೇಪದೆ ವಿವರ ತುಂಬುವ ಸಮಸ್ಯೆಯಿಂದ ಪಾರಾಗಬಹುದು. ಆದಾಗ್ಯೂ, ಅಪಾಯ ಎನಿಸಿದರೆ ಅನುಮತಿ ನೀಡದೆಯೂ ಇರಬಹುದು.
ಗ್ರಾಹಕ ಸರಕು ತುಟ್ಟಿ:ವೇಗವಾಗಿ ಬಿಕರಿಯಾಗುವ ಗ್ರಾಹಕ ಸರಕು (ಎಫ್​ಎಂಸಿಜಿ) ತಯಾರಿಕಾ ಕಂಪನಿಗಳು ಉತ್ಪನ್ನಗಳ ದರವನ್ನು ಶೇ. 4ರಿಂದ 10ವರೆಗೆ ಏರಿಸುವ ನಿರ್ಧಾರಕ್ಕೆ ಬಂದಿವೆ. ಇದರಿಂದಾಗಿ ರೆಫ್ರಿಜರೇಟರ್, ವಾಷಿಂಗ್ ಮಷಿನ್ ಇತ್ಯಾದಿ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚುವ ಸುಳಿವು ಸಿಕ್ಕಿದೆ.
ಬ್ಯಾಂಕ್ ಲಾಕರ್​ಗೆ ಹೊಸ ನಿಯಮ:ಬ್ಯಾಂಕಿನ ಲಾಕರ್​ನಲ್ಲಿರುವ ವಸ್ತುಗಳು ಕಳ್ಳತನ ಅಥವಾ ವಂಚನೆಯಿಂದಲೋ ಕಳೆದು ಹೋದರೆ ಅವುಗಳನ್ನು ಕಾಪಾಡುವ ಬಾಧ್ಯತೆಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತೆ ಇಲ್ಲ. ಲಾಕರ್​ಗಳಿಗೆ ವಾರ್ಷಿಕ ಬಾಡಿಗೆಯನ್ನು ಬ್ಯಾಂಕುಗಳು ಸಂಗ್ರಹಿಸುತ್ತಿರುವ ಕಾರಣ ಈ ಬಾಧ್ಯತೆ ಮಹತ್ವದ್ದು. ಅದೇ ರೀತಿ ಖಾತೆದಾರರು ಲಾಕರ್ ಅನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆ ಆಗದು. ಈ ನಿಯಮ ನಾಳೆಯಿಂದ ಜಾರಿಗೆ ಬರಲಿದೆ. ಈ ವರ್ಷ ಆಗಸ್ಟ್ 18ರಂದು ಈ ಕುರಿತ ಅಧಿಸೂಚನೆಯನ್ನು ಆರ್​ಬಿಐ ಪ್ರಕಟಿಸಿತ್ತು.
ಎಟಿಎಂ ನಗದು ದುಬಾರಿ:ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂನಿಂದ ನಗದು ಹಣ ಪಡೆಯುವ ತಿಂಗಳ ಮಿತಿ ಮೀರಿ ಅನ್ಯ ಎಟಿಎಂನಿಂದ ಹಣ ನಗದೀಕರಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಗ್ರಾಹಕರಿಗೆ ನಿಶ್ಚಿತ ಸಂಖ್ಯೆಯ ಉಚಿತ ವಹಿವಾಟಿಗೆ ಅವಕಾಶ ಇದ್ದು, ಇದಾದ ಬಳಿಕ ಪ್ರತಿವಹಿವಾಟಿಗೆ 20 ರೂ. ಬ್ಯಾಂಕಿಗೆ ಗ್ರಾಹಕರು ಪಾವತಿಸಬೇಕಾಗಿದೆ. ಇದು ಕೂಡ 1 ರೂ. ಹೆಚ್ಚಾಗುತ್ತಿದ್ದು. 2022ರ ಜನವರಿ 1ರಿಂದ ಚಾಲ್ತಿಗೆ ಬರಲಿದೆ ಎಂದು ಆರ್​ಬಿಐ ತಿಳಿಸಿದೆ.
ಐಟಿರಿಟರ್ನ್ಸ್ ವಿಳಂಬಕ್ಕೆ ದಂಡ:ಕಳೆದ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಸಲ್ಲಿಕೆ ಇಂದೆ ಕಡೇ ದಿನ. ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಈ ವರ್ಷ ಎರಡು ಬಾರಿ ಮುಂದೂಡಲ್ಪಟ್ಟಿದೆ. ಈ ಗಡುವು ದಾಟಿದ ಬಳಿಕ ಸಲ್ಲಿಕೆ ಆಗುವ ಐಟಿರಿಟರ್ನ್ಸ್​ಗೆ ವ್ಯಕ್ತಿಗಾದರೆ ಗರಿಷ್ಠ 5,000 ರೂ. ದಂಡ ಪಾವತಿಸಬೇಕಾಗುತ್ತದೆ. ಇದು ಕಳೆದ ವರ್ಷ 10,000 ರೂ. ಎಂದು ಘೋಷಣೆಯಾಗಿತ್ತು. ಬಳಿಕ ಅದನ್ನು ಸರ್ಕಾರ ಇಳಿಕೆ ಮಾಡಿತ್ತು.
ಐಪಿಪಿಬಿ ನಗದು ಠೇವಣಿ ಶುಲ್ಕ:ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ನಲ್ಲಿ ಉಳಿತಾಯ ಖಾತೆಯಿಂದ ಹಣ ನಗದೀಕರಿಸಲು ತಿಂಗಳಿಗೆ 4 ಉಚಿತ ಅವಕಾಶ ಮತ್ತು ಅದಕ್ಕೆ ಮೀರಿದ ನಗದೀಕರಣಕ್ಕೆ ಪ್ರತಿ ವಹಿವಾಟಿಗೆ ಮೊತ್ತದ ಶೇಕಡ 0.50 ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ ಇದರ ಕನಿಷ್ಠ ಶುಲ್ಕ 25 ರೂ. ಎಂದು ಅದು ಪ್ರಕಟಿಸಿದೆ. ತೆರಿಗೆಗಳು ಪ್ರತ್ಯೇಕ ಇರುತ್ತವೆ. ಇದು ನಾಳೆಯಿಂದಲೇ ಜಾರಿಯಾಗುತ್ತಿದೆ.
ವಾಹನ ಬೆಲೆ ಹೆಚ್ಚಳ:ದ್ವಿಚಕ್ರ ಮೋಟಾರು ವಾಹನ ಮತ್ತು ಕಾರುಗಳ ಬೆಲೆ ಶೇಕಡ 2ರಿಂದ ಶೇಕಡ 5ರಷ್ಟು ಪರಿಷ್ಕರಿಸುವುದಾಗಿ ಆಟೊಮೊಬೈಲ್ ಕಂಪನಿಗಳು ಘೋಷಿಸಿವೆ. ಲೋಹ ಮತ್ತಿತರ ಕಚ್ಚಾ ಸಾಮಗ್ರಿಗಳ ಏರಿಕೆ ಕಾರಣ ದರ ಹೆಚ್ಚಳ ಅನಿವಾರ್ಯ ಎಂದು ತಿಳಿಸಿವೆ.
ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

ಕನ್ನಡದ ಪರವಾಗಿ ಮತ್ತೊಮ್ಮೆ ದನಿ ಎತ್ತಿದ ರಾಜ್ಯಸಭಾ ಸದಸ್ಯ; ವಿಜಯವಾಣಿ ವರದಿ ಪ್ರಸ್ತಾಪಿಸಿ ಸಿಎಂ ಗಮನ ಸೆಳೆದ ಚಂದ್ರಶೇಖರ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 + 7 =
Remember me
