ನವದೆಹಲಿ:ನವೆಂಬರ್ 1ರಿಂದ ಕೆಲವು ನಿಯಮದಲ್ಲಿ ಬದಲಾವಣೆ ಆಗಲಿದ್ದು, ಬ್ಯಾಂಕಿಂಗ್​ನ ಕೆಲ ಸೇವೆಗೆ ಶುಲ್ಕ ವಿಧಿಸುವ ಕಾರಣ ಜನರ ಜೇಬಿಗೆ ದುಬಾರಿ ಆಗಲಿದೆ. ರೈಲು ವೇಳಾಪಟ್ಟಿ ಪರಿಷ್ಕರಣೆ, ಅಡುಗೆ ಅನಿಲ (ಎಲ್​ಪಿಜಿ) ಸಿಲಿಂಡರ್ ಪಡೆಯಲು ಒಟಿಪಿ ಪ್ರಮುಖವಾದ ಪರಿವರ್ತನೆಗಳಾಗಿವೆ.
ಬ್ಯಾಂಕಿಂಗ್ ಸೇವೆಗೆ ಶುಲ್ಕ:ಬ್ಯಾಂಕ್​ಗಳಲ್ಲಿ ತಿಂಗಳಲ್ಲಿ ಮೊದಲ ಮೂರು ಬಾರಿ ಹಣ ಜಮಾ ಮಾಡುವುದು ಅಥವಾ ಹಿಂಪಡೆಯುವುದಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ, ನಾಲ್ಕನೇ ಸಾರಿ ಹಣ ಕಟ್ಟಿದರೆ 40 ರೂ. ಮತ್ತು ಹಣ ಹಿಂಪಡೆಯುವಿಕೆಗೆ 100 ರೂ. ಸೇವಾ ಶುಲ್ಕ ಪಾವತಿಸಬೇಕು. ಜನಧನ ಖಾತೆದಾರರು ಎಷ್ಟು ಸಾರಿ ಬೇಕಾದರೂ ಹಣ ಜಮೆ ಮಾಡಬಹುದು. ಆದರೆ, 4ನೇ ಬಾರಿ ಹಣ ಹಿಂಪಡೆದರೆ 100 ರೂ. ಶುಲ್ಕ ತೆರಬೇಕು. ಸಾಲದ ಖಾತೆಯ ನಿರ್ವಹಣಾ ಸೇವೆಗೆ 150 ರೂ. ವಿಧಿಸಲಾಗುತ್ತದೆ. ಬ್ಯಾಂಕ್ ಆಫ್ ಬರೋಡಾ ಇದನ್ನು ಈಗಾಗಲೇ ಆರಂಭಿಸಿದೆ.
ರೈಲು ವೇಳಾಪಟ್ಟಿ ಪರಿಷ್ಕರಣೆ:ರೈಲ್ವೆ ಇಲಾಖೆಯು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ನ. 1ರಿಂದ ಜಾರಿಗೆ ಬರಲಿದೆ. 13 ಸಾವಿರ ಪ್ಯಾಸೆಂಜರ್ ರೈಲು ಮತ್ತು 30 ರಾಜಧಾನಿ ಎಕ್ಸಪ್ರೆಸ್ ರೈಲು ಹಾಗೂ 7 ಸಾವಿರ ಸರಕು ರೈಲುಗಳ ವೇಳೆ ಬದಲಾವಣೆ ಆಗಲಿದೆ.
ಎಲ್​ಪಿಜಿಗೆ ಒಟಿಪಿ:ನವೆಂಬರ್ 1ರಿಂದ ಎಲ್​ಪಿಜಿ ಗ್ರಾಹಕರು ಒಟಿಪಿ (ಒಂದು ಸಾರಿಯ ಪಾಸ್​ವರ್ಡ್) ಸಂಖ್ಯೆ ನೀಡಿದರೆ ಮಾತ್ರ ಸಿಲಿಂಡರ್ ಪಡೆಯಲು ಸಾಧ್ಯ. ಸಿಲಿಂಡರ್​ಗೆ ಬುಕ್ ಮಾಡಿದ ನಂತರ ಗ್ರಾಹಕರ ನೋಂದಾಯಿತ ಮೊಬೈಲ್​ಗೆ ಒಟಿಪಿ ರವಾನೆಯಾಗಲಿದೆ. ಇದನ್ನು ಡಿಲವರಿ ಬಾಯ್ಗೆ ನೀಡಬೇಕು. ಈ ಒಟಿಪಿ ಹೊಂದಾಣಿಕೆಯಾದರೆ ಮಾತ್ರ ಸಿಲಿಂಡರ್ ವಿತರಣೆ ಆಗಲಿದೆ. ವಿಳಾಸ ಮತ್ತು ಮೊಬೈಲ್ ಸಂಖ್ಯೆ ತಪ್ಪಿರುವ ಗ್ರಾಹಕರಿಗೆ ಇದರಿಂದ ತೊಂದರೆ ಆಗಲಿದೆ. ಗ್ರಾಹಕರು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸೇವಾ ಸಂಸ್ಥೆಯಲ್ಲಿ ಅಪ್​ಡೇಟ್ ಮಾಡುವುದು ಒಳಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
