ಬೀಜಿಂಗ್:ಚೀನಾದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿ ಆತಂಕ ಹೆಚ್ಚಾಗುತ್ತಿರುವುದರ ನಡುವೆಯೇ ವೈರಸ್​ನ ಹೊಸ ಉಪ-ಪ್ರಭೇದವೊಂದು ಪತ್ತೆಯಾಗಿದೆ. ಹೊಸ ಉಪ-ತಳಿಯು ಒಮಿಕ್ರಾನ್​ನ ಬಿಎ.1.1 ಶಾಖೆಯಿಂದ ರೂಪುಗೊಂಡಿದೆ ಎಂದು ‘ಗ್ಲೋಬಲ್ ಟೈಮ್್ಸ’ ವರದಿ ಮಾಡಿದೆ. ದೇಶದಲ್ಲಿ ಒಂದೇ ದಿನ 13,000ಕ್ಕೂ ಅಧಿಕ ಹೊಸ ಪ್ರಕರಣಗಳು ದೃಢಪಟ್ಟಿವೆ.
ಹೊಸ ಉಪ-ತಳಿ ಒಬ್ಬ ಕರೊನಾ ರೋಗಿಯಲ್ಲಿ ಪತ್ತೆಯಾಗಿದೆ. ಶಾಂಘೈಯಿಂದ 70 ಕಿಲೋ ಮೀಟರ್​ಗಿಂತ ಕಡಿಮೆ ದೂರದಲ್ಲಿರುವ ನಗರವೊಂದರ ಕೋವಿಡ್-19ರ ಲಘು ಲಕ್ಷಣದ ರೋಗಿಯಿಂದ ಹೊಸ ವೈರಸ್​ಅನ್ನು ಪ್ರತ್ಯೇಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಚೀನಾದಲ್ಲಿ ಕರೊನಾಕ್ಕೆ ಕಾರಣವಾಗಿರುವ ಇತರ ವೈರಸ್​ಗಳಿಗೆ ಅಥವಾ ಜಿಐಎಸ್​ಎಐಡಿಗೆ ಸಲ್ಲಿಸಲಾಗಿರುವ ವೈರಸ್​ಗಳಿಗೆ ಇದು ತಾಳೆಯಾಗುವುದಿಲ್ಲ. ಜಿಐಎಸ್​ಎಐಡಿ ಒಂದು ಜಾಗತಿಕ ಜಾಲವಾಗಿದ್ದು ವಿಶ್ವದಾದ್ಯಂತದ ವಿಜ್ಞಾನಿಗಳು ತಾವು ಸೀಕ್ವೆನ್ಸ್ ಮಾಡಿದ ಕರೊನಾ ವೈರಸ್​ಗಳ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಉತ್ತರ ಚೀನಾದ ಡಾಲಿಯನ್ ನಗರದಲ್ಲಿ ಶುಕ್ರವಾರ ಕಂಡುಬಂದ ಒಂದು ಪ್ರಕರಣ ಕೂಡ ದೇಶೀಯವಾಗಿ ಪತ್ತೆಯಾದ ಯಾವುದೇ ಕರೊನಾ ವೈರಸ್​ಗೆ ತಾಳೆಯಾಗುತ್ತಿಲ್ಲ.
ಸ್ವೀಡನ್​ನಲ್ಲಿ ನಾಲ್ಕನೇ ಡೋಸ್​ಗೆ ಸಲಹೆ:ಸ್ವೀಡನ್​ನಲ್ಲಿ 65 ವರ್ಷ ಮೇಲ್ಪಟ್ಟ ಎಲ್ಲ ರಿಗೂ ಕರೊನಾ ಲಸಿಕೆಯ 4ನೇ ಡೋಸ್ ನೀಡಲು ಶಿಫಾರಸು ಮಾಡಲಾಗಿದೆ.
ಮಿಲಿಟರಿ ಆರೋಗ್ಯ ಸಿಬ್ಬಂದಿ ರವಾನೆ:ಸೋಂಕಿನ ಏರಿಕೆಯಿಂದ ಬಳಲುತ್ತಿರುವ ಶಾಂಘೈಗೆ 2,000 ಮಿಲಿಟರಿ ವೈದ್ಯಕೀಯ ಸಿಬ್ಬಂದಿ ಸಹಿತ ಒಟ್ಟು 10,000ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಚೀನಾ ಸರ್ಕಾರ ರವಾನಿಸಿದೆ.
ಉಪ ಪ್ರಧಾನಿ ಭೇಟಿ:ದೇಶದ ಕರೊನಾ ಹಾಟ್​ಸ್ಪಾಟ್ ಶಾಂಘೈಗೆ ಉಪ ಪ್ರಧಾನಿ ಸನ್ ಚುನ್ಲಾನ್ ಭೇಟಿ ನೀಡಿದ್ದಾರೆ. ಆದಷ್ಟು ಬೇಗ ಸೋಂಕಿನ ಆಸ್ಪೋಟವನ್ನು ನಿಯಂತ್ರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ದೇಶದ ಆರ್ಥಿಕ ರಾಜಧಾನಿಯಲ್ಲಿ ಶನಿವಾರ 8,000ಕ್ಕೂ ಅಧಿಕ ಕೇಸ್​ಗಳು ವರದಿಯಾಗಿದ್ದವು. ಸೋಂಕು ಹರಡುವುದನ್ನು ತಡೆಯುವ ಕ್ರಮದ ಅಂಗವಾಗಿ ಶಾಂಘೈಯಲ್ಲಿ ಸಾಮೂಹಿಕ ಪರೀಕ್ಷೆಯ ಹೊಸ ಸುತ್ತನ್ನು ಸೋಮವಾರ ಆರಂಭಿಸಲಾಗಿದೆ.
ಒಮಿಕ್ರಾನ್ ಮಕ್ಕಳಿಗೆ ಮಾರಕವಲ್ಲ:ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಒಮಿಕ್ರಾನ್ ಪ್ರಭೇದವು ಡೆಲ್ಟಾ ಪ್ರಭೇದಕ್ಕಿಂತ ಕಡಿಮೆ ಅಪಾಯಕಾರಿ ಎಂದು ಹೊಸ ಅಧ್ಯಯನವೊಂದು ಹೇಳಿದೆ. ‘ಜೆಎಎಂಎ ಪೀಡಿಯಾಟ್ರಿಕ್ಸ್’ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.
ಭಾರತದಲ್ಲಿ ಮೂರಂಕಿಗಿಳಿದ ಕೇಸ್:ಭಾರತದಲ್ಲಿ ಕರೊನಾ ಸಾಂಕ್ರಾಮಿಕತೆ ಬಹುತೇಕವಾಗಿ ಕ್ಷೀಣಿಸಿದ್ದು ಸೋಮವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ. 715 ದಿನಗಳಲ್ಲಿ ಇದು ಅತ್ಯಂತ ಕಡಿಮೆ ದೈನಿಕ ಪ್ರಕರಣವಾಗಿದೆ. 2020 ಏಪ್ರಿಲ್ 18ರಂದು ದೇಶದಲ್ಲಿ 991 ಕೇಸ್​ಗಳು ದೃಢಪಟ್ಟಿದ್ದವು. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,29,044 ಆಗಿದೆ. ಒಟ್ಟು ಬಲಿಯಾದವರ ಒಟ್ಟು ಸಂಖ್ಯೆ 5,21,358 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು 714 ದಿನಗಳಲ್ಲಿ ಅತಿ ಕಡಿಮೆ ಎನ್ನಿಸಿದ 13,000ಕ್ಕಿಂತ ಕಡಿಮೆಗೆ ಕುಸಿದಿದೆ. ಸಕ್ರಿಯ ಪ್ರಕರಣದ ಪ್ರಮಾಣ ಶೇಕಡ 0.03 ಹಾಗೂ ಚೇತರಿಕೆ ದರ ಶೇಕಡ 98.76 ಆಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − fifteen =
Remember me
