ನವದೆಹಲಿ:ಗುರುವಾರ ಒಂದು ದಿನದ ಅವಧಿಯಲ್ಲಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕತೆಯ 1,300 ಪ್ರಕರಣಗಳು ದೃಢಪಟ್ಟಿದೆ. ಇದು ಕಳೆದ 140 ದಿನಗಳಲ್ಲೇ ಅತಿ ಹೆಚ್ಚಿನ ದೈನಿಕ ಪಾಸಿಟಿವ್ ಪ್ರಕರಣ ಆಗಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಅವಧಿಯಲ್ಲಿ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್-19ರ ಎಕ್ಸ್​ಬಿಬಿ1.16 ತಳಿಯ 349 ಸ್ಯಾಂಪಲ್​ಗಳು ಕರ್ನಾಟಕ ಸಹಿತ ದೇಶದ ನಾನಾ ಭಾಗಗಳಲ್ಲಿ ಪತ್ತೆಯಾಗಿವೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಪ್ರಭೇದ ಕಾರಣವೆಂದು ಶಂಕಿಸಲಾಗಿದೆ. ಒಟ್ಟು ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ತಳಿ ಕಂಡುಬಂದಿದೆ ಎಂದು ಇನ್ಸಾಕಾಗ್ ತಿಳಿಸಿದೆ. ಮಹಾರಾಷ್ಟ್ರದಲ್ಲಿ 105, ತೆಲಂಗಾಣ 93, ಕರ್ನಾಟಕ 61 ಮತ್ತು ಗುಜರಾತ್​ನಲ್ಲಿ 54 ಎಕ್ಸ್​ಬಿಬಿ1.16 ತಳಿಯ ಕೇಸ್​ಗಳು ವರದಿಯಾಗಿವೆ. ಜನವರಿಯಲ್ಲಿ ಮೊದಲ ಬಾರಿಗೆ ಈ ತಳಿ ಪತ್ತೆಯಾಗಿತ್ತು.
ಸಕ್ರಿಯ ಪ್ರಕರಣ ಏರಿಕೆ: ಸಕ್ರಿಯ ಪ್ರಕರಣಗಳ ಸಂಖ್ಯೆ 7,605ಕ್ಕೆ ಏರಿದೆ ಹಾಗೂ ಸಾವಿನ ಒಟ್ಟು ಸಂಖ್ಯೆ 5,30,816 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರಿಸಿದೆ. ಸೋಂಕಿನ ಮರಣ ಪ್ರಮಾಣ ಶೇ. 1.19 ಆಗಿದೆ. ಸೋಂಕಿನ ದೈನಿಕ ಪಾಸಿಟಿವಿಟಿ ದರ ಶೇ. 1.46 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 1.08 ಆಗಿದೆ. ಸೋಂಕಿತರ ಒಟ್ಟು ಸಂಖ್ಯೆ 4,46,99,418 ಆಗಿದೆ. ಒಟ್ಟು ಸೋಂಕಿತರ ಶೇ. 0.02ರಷ್ಟು ಸಕ್ರಿಯ ಪ್ರಕರಣಗಳು ದೇಶದಲ್ಲಿವೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 98.79 ಆಗಿದೆ ಎಂದು ಸಚಿವಾಲಯ ಹೇಳಿದೆ. ಕೋವಿಡ್ ಸೋಂಕಿನ ಪತ್ತೆಗೆ ಇದುವರೆಗೆ ಒಟ್ಟು 92.06 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಕಳೆದ ಒಂದು ದಿನದಲ್ಲಿ 89,078 ಜನರ ಸ್ಯಾಂಪಲ್​ಗಳ ಪರೀಕ್ಷೆಗಳು ನಡೆದಿವೆ. ಕೋವಿಡ್ ಸೋಂಕಿನಿಂದ 4,41,60,997 ಜನರು ಗುಣ ಮುಖರಾಗಿದ್ದಾರೆ.
ಆರೋಗ್ಯ ಸಚಿವಾಲಯದ ವೆಬ್​ಸೈಟ್ ಪ್ರಕಾರ, ದೇಶದಾದ್ಯಂತ ಇದುವರೆಗೆ 220.65 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.
ದೇಶದಲ್ಲಿ ಕೋವಿಡ್​ನ ದೈನಿಕ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ನಿಯಂತ್ರಣಕ್ಕೆ ವಿಶೇಷ ಸೂಚನೆ ನೀಡಿದೆ. ಪರೀಕ್ಷೆ, ನಿಗಾ, ಚಿಕಿತ್ಸೆ ಮತ್ತು ಕೋವಿಡ್ ನಡವಳಿಕೆ ಅನುಸರಣೆ ಕಾರ್ಯತಂತ್ರವನ್ನು 5 ಪಟ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ. ರಾಜ್ಯ ಮತ್ತು ಯುಟಿಗಳು ಕರೊನಾ ಎದುರಿಸಲು ಸನ್ನದ್ಧ ಆಗಿರುವುದನ್ನು ಪರೀಕ್ಷಿಸಲು ಶೀಘ್ರವೇ ಅಣಕು ಡ್ರಿಲ್​ಗಳನ್ನು ನಡೆಸಲಾಗುವುದೆಂದು ಸಚಿವಾಯ ತಿಳಿಸಿದೆ.
ಭಾರತದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಕೋವಿಡ್ ಲಸಿಕೆಯು ವೈರಸ್​ನ ಮೂಲ ವುಹಾನ್ ಪ್ರಭೇದದಿಂದ ರಕ್ಷಣೆ ಕೊಡಲು ಸಮರ್ಥವಾಗಿದೆ. ವೈರಸ್​ನ ಹೊಸ ಹೊಸ ತಳಿಗಳು ಸೃಷ್ಟಿಯಾಗುತ್ತಿದ್ದಂತೆ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಹೊಸ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್​ನ ಅಗತ್ಯವಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಏಮ್ಸ್) ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸರಣದಲ್ಲಿರುವ ಎಲ್ಲ ಹಾಗೂ ಭವಿಷ್ಯದ ತಳಿಗಳಿಂದ ರಕ್ಷಣೆ ಪಡೆಯಲು ಅದು ಅಗತ್ಯ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fifteen =
Remember me
